ಕರ್ನಾಟಕ

karnataka

ETV Bharat / state

3ನೇ ಹಂತದ ಲಸಿಕೆ; ಮಣಿಪಾಲ್​ ಆಸ್ಪತ್ರೆಗೆ ಆಯುಕ್ತ ಮಂಜುನಾಥ ಪ್ರಸಾದ್ ಭೇಟಿ

3ನೇ ಹಂತದ ಲಸಿಕೆ ನೀಡುವ ಮೊದಲನೇ ದಿನ ಕೋವಿನ್ ಪೋರ್ಟಲ್‌ನಲ್ಲಿ ಕೆಲವು ಲೋಪದೋಷಗಳಿದ್ದುದರಿಂದ 1,063 ಮಂದಿಗೆ ಮಾತ್ರ ಲಸಿಕೆ ನೀಡಲು ಸಾಧ್ಯವಾಯಿತು. 2ನೇ ದಿನ ಕೋವಿನ್ ಪೋರ್ಟಲ್‌ನಲ್ಲಿದ್ದ ಕೆಲ ಲೋಪದೋಷಗಳನ್ನು ಸರಿಪಡಿಸಿ 3,128 ಮಂದಿಗೆ ಲಸಿಕೆ ನೀಡಲಾಗಿದೆ. ಇಂದು 26 ಆಸ್ಪತ್ರೆಗಳಲ್ಲಿ 4,600 ಮಂದಿಗೆ ಲಸಿಕೆ ನೀಡುವ ಗುರಿ ಇದೆ ಎಂದಿದ್ದಾರೆ.

Mayor Manjunath prasad
ಆಯುಕ್ತ ಮಂಜುನಾಥ್ ಪ್ರಸಾದ್

By

Published : Mar 3, 2021, 8:07 PM IST

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಹಳೇ ವಿಮಾನ ನಿಲ್ದಾಣ ರಸ್ತೆಯ ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿದ ಆಯುಕ್ತ ಮಂಜುನಾಥ ಪ್ರಸಾದ್, 3ನೇ ಹಂತದ ಕೋವಿಡ್ ಲಸಿಕೆ ವಿತರಣೆ ಪರಿಶೀಲಿಸಿದ್ದಾರೆ.

ಬಳಿಕ ಮಾತನಾಡಿದ ಆಯುಕ್ತರು, ಬಿಬಿಎಂಪಿ ವ್ಯಾಪ್ತಿಯಲ್ಲಿ 3ನೇ ಹಂತದ ಲಸಿಕೆ ನೀಡಲಾಗುತ್ತಿದ್ದು, ಇಂದು 3ನೇ ದಿನಕ್ಕೆ ಕಾಲಿಟ್ಟಿದೆ. 3ನೇ ಹಂತದ ಲಸಿಕೆ ನೀಡುವ ಮೊದಲನೇ ದಿನ ಕೋವಿನ್ ಪೋರ್ಟಲ್‌ನಲ್ಲಿ ಕೆಲವು ಲೋಪದೋಷಗಳಿದ್ದುದರಿಂದ 1,063 ಮಂದಿಗೆ ಮಾತ್ರ ಲಸಿಕೆ ನೀಡಲು ಸಾಧ್ಯವಾಯಿತು. 2ನೇ ದಿನ ಕೋವಿನ್ ಪೋರ್ಟಲ್‌ನಲ್ಲಿದ್ದ ಕೆಲ ಲೋಪದೋಷಗಳನ್ನು ಸರಿಪಡಿಸಿ 3,128 ಮಂದಿಗೆ ಲಸಿಕೆ ನೀಡಲಾಗಿದೆ. ಇಂದು 26 ಆಸ್ಪತ್ರೆಗಳಲ್ಲಿ 4,600 ಮಂದಿಗೆ ಲಸಿಕೆ ನೀಡುವ ಗುರಿ ಇದೆ ಎಂದರು.

ಮಣಿಪಾಲ್​ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ಆಯುಕ್ತ ಮಂಜುನಾಥ ಪ್ರಸಾದ್

ಸಾಫ್ಟ್​​ವೇರ್​​​ನಲ್ಲಿ ನೋಂದಣಿ ಮಾಡಿಕೊಂಡು 3ನೇ ಹಂತದಲ್ಲಿ ಲಸಿಕೆ ನೀಡಲಾಗುತ್ತಿದೆ. ಈ ಪೈಕಿ ಪ್ರಾಯೋಗಿಕವಾಗಿ 26 ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುತ್ತಿದ್ದು, ಮುಂದಿನ ವಾರದಿಂದ 100 ಹಾಸಿಗೆ ಸಾಮರ್ಥ್ಯವುಳ್ಳ 107 ಖಾಸಗಿ ಆಸ್ಪತ್ರೆ, ಪಾಲಿಕೆಯ 141 ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ರೆಫರಲ್ ಆಸ್ಪತ್ರೆಗಳು ಸೇರಿದಂತೆ ಸುಮಾರು 300 ಆಸ್ಪತ್ರೆಗಳಲ್ಲಿ ಲಸಿಕೆ ನೀಡಲು ಕ್ರಮವಹಿಸಲಾಗುತ್ತಿದೆ. ಆ ಬಳಿಕ ಪ್ರತಿನಿತ್ಯ ಸುಮಾರು 60,000 ಮಂದಿಗೆ ಲಸಿಕೆ ನೀಡಬಹುದಾಗಿದೆ ಎಂದಿದ್ದಾರೆ.

ಪಾಲಿಕೆ ವ್ಯಾಪ್ತಿಯಲ್ಲಿರುವ 60 ವರ್ಷ ಮೇಲ್ಪಟ್ಟ ಹಾಗೂ 45 ರಿಂದ 59 ವರ್ಷದ ಅನ್ಯ ಖಾಯಿಲೆಗಳಿಂದ ಬಳಲುತ್ತಿರುವ ನಾಗರಿಕರಿಗೆ ಲಸಿಕೆ ಪಡೆಯಲು ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಅಲ್ಲದೆ ಕೊಳಗೇರಿ ಪ್ರದೇಶಗಳಲ್ಲಿ ಸುಮಾರು 15 ಲಕ್ಷ ಮಂದಿ ವಾಸಿಸುತ್ತಿದ್ದು, ಅವರಿಗೆ ಕೋವಿನ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳುವ ಬಗ್ಗೆ ಅರಿವಿರುವುದಿಲ್ಲ. ಈ ಸಂಬಂಧ ಕೊಳಗೇರಿ ಪ್ರದೇಶಗಳಲ್ಲಿರುವವರನ್ನು ಗುರುತಿಸಿ ಲಸಿಕೆ ಪಡೆಯಲು ಕರೆತರುವ ಸಲುವಾಗಿ ಪಾಲಿಕೆಯ ಆಶಾ ಕಾರ್ಯಕರ್ತರು, ಎಎನ್​​​​ಎಂಗಳನ್ನು ನಿಯೋಜನೆ ಮಾಡಲಾಗಿದ್ದು, ಮುಂದಿನ ವಾರದಿಂದ ಲಸಿಕೆ ನೀಡುವ ಕಾರ್ಯ ಪ್ರಾರಂಭವಾಗಲಿದೆ ಎಂದರು.

ಇದನ್ನೂ ಓದಿ:ರಮೇಶ್​ ಜಾರಕಿಹೊಳಿ‌ ಬೆಂಬಲಿಗರಿಂದ 8ಕ್ಕೂ ಹೆಚ್ಚು ಬಸ್​ಗಳ ಮೇಲೆ ಕಲ್ಲು ತೂರಾಟ ಆರೋಪ

ABOUT THE AUTHOR

...view details