ಕರ್ನಾಟಕ

karnataka

ETV Bharat / state

ಖಾಕಿಗೆ ಕೊರೊನಾ ಕಂಟಕ: ಸಿಬ್ಬಂದಿಗೆ ಧೈರ್ಯ ತುಂಬಿದ ಕಮೀಷನರ್ ಭಾಸ್ಕರ್ ರಾವ್ - ಬೆಂಗಳೂರು ಕೊರೊನಾ ಲೇಟೆಸ್ಟ್​ ನ್ಯೂಸ್​

ನಗರದಲ್ಲಿ 40 ಕ್ಕಿಂತ ಹೆಚ್ಚು ಪೊಲೀಸರಿಗೆ ಕೊರೊನಾ ಅಂಟಿಕೊಂಡಿದ್ದು, ಈ ಪೈಕಿ ಮೂವರು ಬಲಿಯಾಗಿದ್ದಾರೆ. ಸೋಂಕು ಪತ್ತೆಯಾದ ಸಿಬ್ಬಂದಿ ಕಾರ್ಯನಿರ್ವಹಿಸುವ ಪೊಲೀಸ್ ಠಾಣೆಗಳಲ್ಲಿ ಕೆಲವು ಸಿಲ್​ಡೌನ್ ಆಗಿವೆ. ಈ ಹಿನ್ನೆಲೆ ಸಿಬ್ಬಂದಿಯಲ್ಲಿ ಮನೆ ಮಾಡಿರುವ ಆತಂಕ ದೂರ ಮಾಡಲು ನಗರ ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್​ ವೈರ್​ಲೈಸ್ ಮೂಲಕ ಧೈರ್ಯ ತುಂಬಿದ್ದಾರೆ.

Commissioner Bhaskar
ಕಮೀಷನರ್ ಭಾಸ್ಕರ್ ರಾವ್

By

Published : Jun 21, 2020, 6:44 PM IST

ಬೆಂಗಳೂರು:ನಗರದ ಪೊಲೀಸರಲ್ಲಿ ಕೊರೊನಾ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಎಲ್ಲಾ ಪೊಲೀಸ್ ಠಾಣಾ ಇನ್​ಸ್ಪೆಕ್ಟರ್​ಗಳಿಗೆ ಸಲಹೆ-ಸೂಚನೆಗಳನ್ನು ನೀಡಿದ್ದಾರೆ.

ನಗರದಲ್ಲಿ 40 ಕ್ಕಿಂತ ಹೆಚ್ಚು ಪೊಲೀಸರಿಗೆ ಕೊರೊನಾ ಸೋಂಕು ಅಂಟಿಕೊಂಡಿದ್ದು, ಈ ಪೈಕಿ ಮೂವರು ಸಾವನ್ನಪ್ಪಿದ್ದಾರೆ. ಸೋಂಕು ಪತ್ತೆಯಾದ ಸಿಬ್ಬಂದಿ ಕಾರ್ಯನಿರ್ವಹಿಸುವ ಪೊಲೀಸ್ ಠಾಣೆಗಳಲ್ಲಿ ನಗರದ ಕೆಲವು ಪೊಲೀಸ್ ಠಾಣೆಗಳನ್ನು ಸಿಲ್​ಡೌನ್ ಮಾಡಲಾಗಿದೆ. ಸಿಬ್ಬಂದಿಯಲ್ಲಿ ಮನೆ ಮಾಡಿರುವ ಆತಂಕ ದೂರ ಮಾಡಲು ಕಮೀಷನರ್ ವೈರ್​ಲೈಸ್ ಮೂಲಕ ಧೈರ್ಯ ತುಂಬಿದ್ದಾರೆ.

ಏನೇ ಸಮಸ್ಯೆ ಬಂದ್ರು ಧೈರ್ಯವಾಗಿ ಎದುರಿಸಬೇಕು. ಗಾಬರಿಯಾಗಬೇಡಿ, ಸರ್ಕಾರ ಸಮಾಜ ನಮ್ಮನ್ನ ನಂಬಿದೆ. ಎಲ್ಲಾ ಸ್ಟೇಷನ್​ನಲ್ಲಿ 55 ವರ್ಷ ಮೇಲ್ಪಟ್ಟವರು ಮನೆಯಲ್ಲಿ ಇರಬೇಕು. ಬೆಂಗಳೂರು ಬಿಡುವಂತಿಲ್ಲ. ಅಧಿಕಾರಿಗಳು ಮಾನಿಟರ್ ಮಾಡಬೇಕು ಎಂದಿದ್ದಾರೆ.

ಸಾಧ್ಯವಾದಷ್ಟು ಯುವ ಹೋಂ ಗಾರ್ಡ್ಸ್​​ಅನ್ನು ಬಳಸಿಕೊಳ್ಳಿ. ಜಂಟಿ‌ ಸಿಪಿ-ಡಿಸಿಪಿಗಳು ಮಾರ್ಗದರ್ಶನ ಮಾಡ್ತಾರೆ. ಶಾಮಿಯಾನ ಹಾಕಿಕೊಂಡು ಠಾಣೆ ಹೊರಗಡೆಯಲ್ಲೇ ಪ್ರಕರಣಗಳನ್ನು ವಿಲೇವಾರಿ ಮಾಡಬೇಕು. ಆರೋಪಿಗಳು ಇರಲಿ ಯಾರೇ ಆಗಲಿ. ಯಾರನ್ನು ಮುಟ್ಟಬಾರದು. ಹೊಯ್ಸಳ ಮತ್ತು ಚೀತಾ ಅನಾವಶ್ಯಕವಾಗಿ ಸುತ್ತಾಡಬಾರದು. ಸಮಸ್ಯೆ ಇದ್ದರೆ ಕಾಲ್ ಬಂದ್ರೆ ಹೋಗಬೇಕು, ಸುಮ್ಮನೆ ಸ್ಟೇಷನ್​ಗೆ ಬರಬಾರದು. ಮುಖ್ಯ ಕೇಸ್​ಗಳಲ್ಲಿ ಮಾತ್ರ ಆರೋಪಿಗಳನ್ನ ಬಂಧಿಸಬೇಕು. ಸುಮ್ಮನೆ ಬಂಧಿಸುವ ಅವಶ್ಯಕತೆ ಇಲ್ಲ. ಸುಮ್ಮನೆ ಯಾರನ್ನು ಕರೆ ತಂದು ಕೂರಿಸಬಾರದು. ‌ಎಲ್ಲಾ ಠಾಣೆ ವ್ಯಾಪ್ತಿಯಲ್ಲಿ ಒಂದು ಕಲ್ಯಾಣ ಮಂಟಪ ರೆಡಿ ಮಾಡಬೇಕು. ಪ್ರತಿ ಠಾಣೆಯಲ್ಲಿ ಬಿಸಿ ನೀರಿನ ವ್ಯವಸ್ಥೆ ಇರಬೇಕು. ಕುಡಿಯಲು, ಸ್ನಾನ, ಕೈಕಾಲು ತೊಳೆಯಲು, ಮಾಸ್ಕ್ ಸ್ಯಾನಿಟೈಸರ್, ಫೇಸ್ ಶೀಲ್ಡ್ ಇರಬೇಕು. ನಾವು ಉಪಯೋಗಿಸುವ ವಾಹನಗಳು ಪ್ರತಿದಿನ ಸ್ಯಾನಿಟೈಸ್ ಆಗಬೇಕು. ಬೆಂಕಿ ಅನಾಹುತ ಆಗದಂತೆ ಸ್ಯಾನಿಟೈಸ್ ಮಾಡಬೇಕು.

ನಾವು ಕ್ವಾರಂಟೈನ್ ಆಗಿದ್ದೀವಿ ಎಂದು ಸಾರ್ವಜನಿಕರಿಗೆ ನಮ್ಮ ಸೇವೆಯಿಂದ ಕೊರತೆ ಆಗಬಾರದು. ಸಾರ್ವಜನಿಕರಿಗೆ ಅಗತ್ಯ ಸೇವೆಗಳನ್ನು ಒದಗಿಸಬೇಕು, ಗ್ಲೌಸ್ ಹಾಕಬೇಕು. ದೂರದಲ್ಲಿ ನಿಂತು ಮಾತನಾಡಬೇಕು. ಎಂಒಬಿ ಕಾರ್ಡ್ ಬಂಧಿಸೋದು ಬೇಡ, ತಾಂತ್ರಿಕವಾಗಿ ಅವರ ಮೇಲೆ ನಿಗಾ ಇಟ್ಟಿರಿ. ಅವರ ಮೇಲೆ ನಿಗಾ ಹೆಚ್ಚಾಗಿರಬೇಕು. ನಾವು ಸುಮ್ಮನೆ ಇದ್ದೀವಿ ಅಂತ ಸಮಾಜಘಾತುಕ ಶಕ್ತಿಗಳಿಗೆ ಅವಕಾಶ ಕೊಡಬಾರದು. ಇನ್ಸ್‌ಪೆಕ್ಟರ್, ಪಿಎಸ್ಐಗಳು ಗಮನ ಇಡಬೇಕು. ನಮ್ಮ ಸಿಬ್ಬಂದಿಗೆ ಊಟ ತಿಂಡಿ ಸರಿಯಾಗಿ ಆಗಬೇಕು. ನಿನ್ನೆ ಆಸ್ಪತ್ರೆಯಲ್ಲಿ ಊಟದ ರೀತಿ ಮತ್ತೆ ಆಗಬಾರದು. ನಮ್ಮದು ಶಿಸ್ತಿನ ಇಲಾಖೆ. ಮುಖ್ಯ ಕಾರ್ಯದರ್ಶಿಗಳು ಇಲಾಖೆಗೆ ಎಲ್ಲಾ ನೆರವು ನೀಡೊ ಬಗ್ಗೆ ಹೇಳಿದ್ದಾರೆ. ಹಾಗೂ ಪೊಲೀಸ್ ಕ್ವಾಟ್ರಸ್​ಗಳು ಸ್ವಚ್ಛತೆಯಿಂದ ಕೂಡಿರಬೇಕು, ಎಲ್ಲ ಮನೆಗಳಿಗೆ ಸ್ಯಾನಿಟೈಸರ್ ಮಾಸ್ಕ್ ಕೊಡಬೇಕು ಎಂದು ಸಲಹೆ-ಸೂಚನೆ ನೀಡಿದ್ದಾರೆ.

ABOUT THE AUTHOR

...view details