ಬೆಂಗಳೂರು: ಜಿಎಸ್ಟಿ ತೆರಿಗೆ ಕಟ್ಟದೆ ಸುಮಾರು 21 ಕೋಟಿ ರೂ. ಮೌಲ್ಯದ 60 ಕೆ.ಜಿ. ಚಿನ್ನಾಭರಣ ಮಾರಾಟ ಮಾಡುತ್ತಿದ್ದ ಸಗಟು ಆಭರಣ ವರ್ತಕರ ಮೇಲೆ ವಾಣಿಜ್ಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಆಭರಣ ವರ್ತಕರ ಮೇಲೆ ಐಟಿ ದಾಳಿ: 21 ಕೋಟಿ ರೂ. ಮೌಲ್ಯದ 60 ಕೆಜಿ ಚಿನ್ನಾಭರಣ ವಶ - ಬೆಂಗಳೂರಿನ ಸಗಟು ಆಭರಣ ವರ್ತಕ
ಜಿಎಸ್ಟಿ ತೆರಿಗೆ ಕಟ್ಟದೆ ಸುಮಾರು 21 ಕೋಟಿ ರೂ. ಮೌಲ್ಯದ 60 ಕೆ.ಜಿ. ಚಿನ್ನಾಭರಣ ಮಾರಾಟ ಮಾಡುತ್ತಿದ್ದ ಸಗಟು ಆಭರಣ ವರ್ತಕರ ಮೇಲೆ ವಾಣಿಜ್ಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
![ಆಭರಣ ವರ್ತಕರ ಮೇಲೆ ಐಟಿ ದಾಳಿ: 21 ಕೋಟಿ ರೂ. ಮೌಲ್ಯದ 60 ಕೆಜಿ ಚಿನ್ನಾಭರಣ ವಶ Commercial Tax Officers Attack](https://etvbharatimages.akamaized.net/etvbharat/prod-images/768-512-6220888-thumbnail-3x2-bng.jpg)
ನಗರದ ರಂಗನಾಥ ಮ್ಯಾನ್ಷನ್ ಹಾಗೂ ಸಕಾಲಾಜಿ ಮಾರ್ಕೆಟ್, ಚಿಕ್ಕಪೇಟೆ ಬಳಿ ಸಗಟು ಆಭರಣ ಮಾರಾಟ ಮಾಡುತ್ತಿದ್ದ , 23 ವರ್ತಕರ ಮೇಲೆ ದಾಳಿ ಮಾಡಲಾಗಿದೆ. ಈ ಆರೋಪಿಗಳು ಬೇರೆ ರಾಜ್ಯಗಳಿಂದ ಯಾವುದೇ ದಾಖಲಾತಿ ಇಲ್ಲದೇ ಹಾಗೂ ಬಿಲ್ಗಳನ್ನು ನೀಡದೆ ವ್ಯಾಪಾರ ಮಾಡುತ್ತಿದ್ದರು. ವ್ಯಾಪಾರಿಗಳು 1.3 ಕೋಟಿ ರೂ. ಜಿಎಸ್ಟಿ ವಂಚಿಸಿದ್ದರು ಎಂದು ತಿಳಿದುಬಂದಿದೆ.
ಖಚಿತ ಮಾಹಿತಿ ಮೇರೆಗೆ ವಾಣಿಜ್ಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ, ದಾಖಲೆಗಳಿಲ್ಲದ ಚಿನ್ನಾಭರಣ ವಶಪಡಿಸಿದ್ದಾರೆ. ಇನ್ನು ದಾಳಿ ವೇಳೆ ಇಬ್ಬರು ಆರೋಪಿಗಳು 3.5 ಕೆ.ಜಿ ಚಿನ್ನಾಭರಣವನ್ನ ತಮ್ಮ ಚೀಲದಲ್ಲಿ ಸಾಗಿಸುತ್ತಿದ್ದರು. ಸದ್ಯ ಅವನ್ನ ವಶಪಡಿಸಿ ತನಿಖೆ ನಡೆಸಿದಾಗ 60ಕೆ.ಜಿ ಮೌಲ್ಯದ 21 ಕೋಟಿ ರೂ. ತೆರಿಗೆ ವಂಚಿತ ಚಿನ್ನಾಭರಣಗಳು ಪತ್ತೆಯಾಗಿವೆ.