ಕರ್ನಾಟಕ

karnataka

ETV Bharat / state

ಹೊಸಕೋಟೆ: ಬಿರಿಯಾನಿ ಹೋಟೆಲ್​ಗಳ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳಿಂದ ದಾಳಿ - Tax evasion procedure

ಲೆಕ್ಕಪತ್ರ ಇಟ್ಟುಕೊಳ್ಳದೆ ತೆರಿಗೆ ವಂಚಿಸುತ್ತಿದ್ದ ಆರೋಪದಡಿ ಹೊಸಕೋಟೆ ಸುತ್ತಮುತ್ತಲಿನ ಬಿರಿಯಾನಿ ಹೋಟೆಲ್​ಗಳ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಬಿರಿಯಾನಿ
ಬಿರಿಯಾನಿ

By ETV Bharat Karnataka Team

Published : Oct 10, 2023, 11:04 PM IST

ಬೆಂಗಳೂರು :ದಿನಕ್ಕೆ ಲಕ್ಷಾಂತರ ರೂಪಾಯಿ ವಹಿವಾಟು‌ ನಡೆಸುತ್ತಿದ್ದರೂ ಲೆಕ್ಕಪತ್ರ‌ ಇಟ್ಟುಕೊಳ್ಳದೆ ತೆರಿಗೆ ವಂಚಿಸುತ್ತಿದ್ದ ಆರೋಪದಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಸುತ್ತಮುತ್ತಲಿನ ಬಿರಿಯಾನಿ ಹೋಟೆಲ್​​ಗಳು ಹಾಗೂ ಮಾಲೀಕರ ಮನೆಗಳ ಮೇಲೆ ವಾಣಿಜ್ಯ ತೆರಿಗೆ ಜಾಗೃತಿ ದಳ‌ ಅಧಿಕಾರಿಗಳು ಇಂದು ದಾಳಿ ನಡೆಸಿದರು.

ಬಿರಿಯಾನಿ ಹೋಟೆಲ್​ಗಳ ಮೇಲೆ ಸುಮಾರು 50 ಕ್ಕೂ ಹೆಚ್ಚು ಅಧಿಕಾರಿಗಳ ತಂಡ ದಾಳಿ ಮಾಡಿತು. ಇತ್ತೀಚಿನ ವರ್ಷಗಳಲ್ಲಿ ಯುವ ಸಮೂಹ ಇಲ್ಲಿಗೆ ಬೆಳ್ಳಂಬೆಳ್ಳಗೆ ಧಾವಿಸಿ ಮಾಂಸಾಹಾರ ಸೇವಿಸುವುದು ಟ್ರೆಂಡ್ ಆಗಿದೆ. ಹೀಗಾಗಿ ಹೊಸಕೋಟೆ ಸುತ್ತಮುತ್ತಲಿನ ನಾನ್ ವೆಜ್ ಹೋಟೆಲ್​​ಗಳಲ್ಲಿ ದಿನಕ್ಕೆ‌ ಲಕ್ಷಾಂತರ ರೂಪಾಯಿ ವಹಿವಾಟು ನಡೆಯುತ್ತಿದೆ. ಈ ವಹಿವಾಟಿಗೆ ಸಂಬಂಧಿಸಿದಂತೆ ತೆರಿಗೆ ಬಿಲ್ಲು, ಪೂರೈಕೆ ಬಿಲ್ಲು ಇಲ್ಲದಿರುವುದು ಕಂಡುಬಂದಿದೆ.

ಲಕ್ಷಾಂತರ ವ್ಯವಹಾರ ನಡೆಸುತ್ತಿದ್ದರೂ ಜಿಎಸ್​ಟಿ ಮಾಡಿಸಿಕೊಂಡಿರಲಿಲ್ಲ. ಲೆಕ್ಕಪತ್ರಗಳನ್ನು ಸಮರ್ಪಕವಾಗಿ ಇಟ್ಟುಕೊಳ್ಳದಿರುವುದು ಗೊತ್ತಾಗಿದೆ. ಗ್ರಾಹಕರಿಂದ ನಗದು ಹಾಗೂ ಯುಪಿಎ‌ ಖಾತೆಗಳ ಮೂಲಕ ಹಣ‌ ಪಾವತಿಸಿಕೊಂಡು ನಿರಂತರವಾಗಿ ಯುಪಿಎ ಖಾತೆಗಳನ್ನು ಬದಲಾಯಿಸುವ ಮುಖಾಂತರ ನೈಜ ವಹಿವಾಟು ಮುಚ್ಚಿಟ್ಟು ತೆರಿಗೆ ವಂಚಿಸುತ್ತಿದ್ದರು.

ಹೋಟೆಲ್​ ಮಾಲೀಕರೊಂದರ ಮನೆಯಲ್ಲಿ 30ಕ್ಕೂ ಹೆಚ್ಚು ಕ್ಯೂ ಆರ್ ಕೋಡ್ ಸ್ಕ್ಯಾನರ್ ಇಟ್ಟುಕೊಂಡಿರುವುದು ಪತ್ತೆಯಾಗಿದೆ. ಮತ್ತೊಬ್ಬರ ಮನೆಯಲ್ಲಿ 1.47 ಕೋಟಿ ನಗದು ಪತ್ತೆಯಾಗಿದ್ದು, ಈ ಸಂಬಂಧ ಆದಾಯ ತೆರಿಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ‌ ಮೇರೆಗೆ ಐಟಿ ತಂಡವು‌‌ ಪರಿಶೀಲಿಸಿ ಮಾಹಿತಿ ಪಡೆದುಕೊಂಡಿದೆ. ವಾಣಿಜ್ಯ ತೆರಿಗೆ ಇಲಾಖೆಯು ತೆರಿಗೆ ವಂಚನೆ‌ ತಡೆಯುವ ಉದ್ದೇಶದಿಂದ ತೆರಿಗೆ ವಂಚನೆ ವಿಧಿವಿಧಾನಗಳನ್ನು ವಿಶ್ಲೇಷಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು‌‌ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ:ಬಾಕಿ ತೆರಿಗೆ ಸಂಗ್ರಹಿಸದಿದ್ದರೆ ಅಧಿಕಾರಿಗಳೇ ಹೊಣೆ: ಸಚಿವ ಭೈರತಿ ಸುರೇಶ್​ ಎಚ್ಚರಿಕೆ

ABOUT THE AUTHOR

...view details