ಕರ್ನಾಟಕ

karnataka

ETV Bharat / state

ಅನಧಿಕೃತ ಅಡಿಕೆ ಗೋದಾಮುಗಳ ಮೇಲೆ ತೆರಿಗೆ ಅಧಿಕಾರಿಗಳ ದಾಳಿ - areca nut

ವಾಣಿಜ್ಯ ತೆರಿಗೆ ಜಾರಿ ವಿಭಾಗದ ಹೆಚ್ಚುವರಿ ಆಯುಕ್ತ ನಿತೀಶ್ ಪಾಟೀಲ್ ನೇತೃತ್ವದಲ್ಲಿ ಶಿವಮೊಗ್ಗದ 11 ಅಡಿಕೆ ಗೋದಾಮುಗಳ ಮೇಲೆ ದಾಳಿ ನಡೆಸಲಾಗಿದೆ. ದಾಳಿ ವೇಳೆ ಕೋಟ್ಯಂತರ ರೂಪಾಯಿ ಮೌಲ್ಯದ ಅನಧಿಕೃತ ಅಡಿಕೆ ದಾಸ್ತಾನು ಪತ್ತೆಯಾಗಿದ್ದು, ದಾಳಿ ಮುಂದುವರಿದಿದೆ.

commercial tax authorities raided over illegal arecanut godown
ಅನಧಿಕೃತ ಅಡಿಕೆ ಗೋದಾಮಿನ ಮೇಲೆ ವಾಣಿಜ್ಯ ತೆರಿಗೆ ಅಧಿಕಾರಿಗಳ ದಾಳಿ

By

Published : Jun 2, 2020, 10:17 PM IST

ಬೆಂಗಳೂರು:ಅನಧಿಕೃತವಾಗಿ ಶೇಖರಣೆ ಮಾಡಿದ ಅಡಿಕೆ ಗೋದಾಮುಗಳ ಮೇಲೆ ವಾಣಿಜ್ಯ ತೆರಿಗೆ ಅಧಿಕಾರಿಗಳು‌ ದಾಳಿ ನಡೆಸಿದ್ದಾರೆ.

ಶಿವಮೊಗ್ಗದ 11 ವರ್ತಕರ ಅಡಿಕೆ ಗೊದಾಮುಗಳ ಮೇಲೆ ಏಕ ಕಾಲದಲ್ಲಿ ದಾಳಿ ನಡೆಸಿದ್ದು, ಈ ವೇಳೆ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಘೋಷಿಸಿಕೊಳ್ಳದ ಕೊಟ್ಯಂತರ ರೂ. ಮೌಲ್ಯದ ಅನಧಿಕೃತ ದಾಸ್ತಾನು ಪತ್ತೆಯಾಗಿದೆ.

ವಾಣಿಜ್ಯ ತೆರಿಗೆ ಜಾರಿ ವಿಭಾಗದ ಹೆಚ್ಚುವರಿ ಆಯುಕ್ತ ನಿತೀಶ್ ಪಾಟೀಲ್ ನೇತೃತ್ವದಲ್ಲಿ ದಾಳಿ ನಡೆದಿದ್ದು,‌ ದಾಳಿ ವೇಳೆ ಕೋಟ್ಯಂತರ ರೂಪಾಯಿ ಮೌಲ್ಯದ ಅನಧಿಕೃತ ದಾಸ್ತಾನು ಪತ್ತೆಯಾದ ಕಾರಣ ವಾಣಿಜ್ಯ ತೆರಿಗೆ ಅಧಿಕಾರಿಗಳು ದಂಡ ವಸೂಲಿ ಕಾರ್ಯ ಮುಂದುವರಿಸಿದ್ದಾರೆ.

‌ಇನ್ನು ಕಳೆದ ವಾರ ಇದೇ ರೀತಿ ದಾವಣಗೆರೆ ಜಿಲ್ಲೆಯ 5 ಕಡೆ ದಾಳಿ ನಡೆಸಿದ್ದ ವಾಣಿಜ್ಯ ತೆರಿಗೆ ಅಧಿಕಾರಿಗಳು ಇದೇ ರೀತಿ ಅನಧಿಕೃತ ದಾಸ್ತಾನು ಪತ್ತೆ ಮಾಡಿದ್ದರು.‌ ಸದ್ಯ ವಾಣಿಜ್ಯ ತೆರಿಗೆ ಇಲಾಖೆ ದಕ್ಷಿಣ ವಲಯ ಬೆಂಗಳೂರಿನ ತಂಡ ದಾಳಿ ಮುಂದುವರಿಸಿದ್ದಾರೆ.

ABOUT THE AUTHOR

...view details