ಕರ್ನಾಟಕ

karnataka

ETV Bharat / state

ಅಕ್ರಮ ಪಾನ್ ಮಸಾಲ ಉತ್ಪಾದಕ ಅಡ್ಡೆ ಮೇಲೆ ದಾಳಿ: 21 ಲಕ್ಷ ರೂ. ದಂಡ - ಅಕ್ರಮ ಪಾನ್ ಮಸಾಲ ಉತ್ಪಾದಕ ಘಟಕಗಳ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ದಾಳಿ

ತುಮಕೂರು ಹಾಗೂ ಚಿಕ್ಕಬಳ್ಳಾಪುರ ಸೇರಿದಂತೆ 5 ಪ್ರದೇಶಗಳಲ್ಲಿ ವಾಣಿಜ್ಯ ತೆರಿಗೆ ಇಲಾಖೆ ದಾಳಿ ನಡೆಸಿದ್ದು, ಅಕ್ರಮ ಪಾನ್ ಮಸಾಲ ಉತ್ಪಾದಕ ವಸ್ತುಗಳು ಪತ್ತೆಯಾಗಿವೆ.

pan spice producer units
ಅಕ್ರಮ ಪಾನ್ ಮಸಾಲ ಉತ್ಪಾದಕ ಘಟಕಗಳ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ದಾಳಿ

By

Published : Jun 8, 2020, 10:15 PM IST

ಬೆಂಗಳೂರು:ಅಕ್ರಮ ಪಾನ್ ಮಸಾಲ ಉತ್ಪಾದಕ ಘಟಕಗಳ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ದಾಳಿ ನಡೆಸಿದ್ದು, 21 ಲಕ್ಷ ರೂ. ದಂಡ ವಿಧಿಸಿ ವಸೂಲಿ ಮಾಡಿದೆ.

ತುಮಕೂರು ಹಾಗೂ ಚಿಕ್ಕಬಳ್ಳಾಪುರ ಸೇರಿದಂತೆ 5 ಪ್ರದೇಶಗಳಲ್ಲಿ ದಾಳಿ ನಡೆಸಿದಾಗ ಅಕ್ರಮ ಪಾನ್ ಮಸಾಲ ಉತ್ಪಾದಕ ವಸ್ತುಗಳು ಪತ್ತೆಯಾಗಿವೆ. ಶಿರಾದ ಗೋದಾಮುವೊಂದರಲ್ಲಿ ಪಾನ್ ಮಸಾಲಗೆ ಸಂಬಂಧಿಸಿದ ಯಂತ್ರೋಪಕರಣಗಳು ಸಿಕ್ಕಿದ್ದು, ಗೋದಾಮಿಗೆ ಬೀಗ ಮುದ್ರೆ ಜಡಿಯಲಾಗಿದೆ.

ಇದರ ಜತೆತೆ ದಾಖಲೆಗಳಿಲ್ಲದೆ ಶೇಖರಿಸಿದ ದಾಸ್ತಾನುಗಳ ಆಧಾರದ ಮೇಲೆ 21 ಲಕ್ಷ ದಂಡ ವಿಧಿಸಲಾಗಿದೆ.

ABOUT THE AUTHOR

...view details