ಕರ್ನಾಟಕ

karnataka

ETV Bharat / state

ಕೊರೊನಾ ವಿರುದ್ಧ ಹೋರಾಡಿದ 19 ಸಾವಿರ ಪೊಲೀಸರಿಗೆ ಪ್ರಶಂಸನಾ ಪತ್ರ - ಕೊರೊನಾ ವಿರುದ್ಧ ಹೋರಾಡಿದ 19 ಸಾವಿರ ಪೊಲೀಸರಿಗೆ ಪ್ರಶಂಸನಾ ಪತ್ರ

ಪ್ರಾಣದ ಹಂಗು ತೊರೆದು ಕೆಲಸ ಮಾಡಿದ್ದ ಬೆಂಗಳೂರು ಪೊಲೀಸ್ ಸಿಬ್ಬಂದಿಗೆ ಹಿಂದಿನ ಕಮಿಷನರ್ ಭಾಸ್ಕರ್ ರಾವ್ ಪ್ರಸಂಶನಾ ಪತ್ರ ಕೊಟ್ಟು ಅಭಿನಂದಿಸಿದ್ದಾರೆ.

Commendation letter to 19,000 policemen
ಕೊರೊನಾ ವಿರುದ್ಧ ಹೋರಾಡಿದ 19 ಸಾವಿರ ಪೊಲೀಸರಿಗೆ ಪ್ರಶಂಸನಾ ಪತ್ರ

By

Published : Aug 9, 2020, 9:24 PM IST

ಬೆಂಗಳೂರು: ಕೊರೊನಾ ಲಾಕ್​ಡೌನ್ ಸಮಯದಲ್ಲಿ ಕಾರ್ಯನಿರ್ವಹಿಸಿದ 19 ಸಾವಿರ ಸಿಲಿಕಾನ್ ಸಿಟಿಯ ಪೊಲೀಸರಿಗೆ ಹಿಂದಿನ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದ್ದಾರೆ.

ಕೊರೊನಾ ವಿರುದ್ಧ ಹೋರಾಡಿದ 19 ಸಾವಿರ ಪೊಲೀಸರಿಗೆ ಪ್ರಶಂಸನಾ ಪತ್ರ

ಕೊರೊನಾದಿಂದಾಗಿ ಇಡೀ ದೇಶವನ್ನೇ ಲಾಕ್​ಡೌನ್ ಮಾಡಿದ್ದರೂ ಪೊಲೀಸರು ಮಾತ್ರ ಕೆಲಸ ನಿರ್ವಹಿಸಬೇಕಾಗಿತ್ತು. ಪೊಲೀಸರು ಪ್ರಾಣ ಕಳೆದುಕೊಳ್ಳುವಂತಹ ಪರಿಸ್ಥಿತಿಯಲ್ಲೂ, ಸೀಲ್​ಡೌನ್, ಕಂಟೈನ್‌ಮೆಂಟ್‌ ಝೋನ್‌ಗಳಲ್ಲಿ ಕೆಲಸ ಮಾಡಿ ನಿಜವಾದ ವಾರಿಯರ್ಸ್ ಆಗಿದ್ದಾರೆ. ಈ ಕೆಲಸಕ್ಕೆ ಅವರಿಗೆ ಹೆಚ್ಚಿನ ಸಂಬಳ ಕೊಟ್ಟಿರಲಿಲ್ಲ. ಹಾಗಂತ ಅವರೇನೂ ಸುಮ್ಮನೆ ಕೂರಲಿಲ್ಲ, ಬದಲಿಗೆ ಪ್ರಾಣದ ಹಂಗು ಬಿಟ್ಟು ಫೀಲ್ಡ್​ಗಿಳಿದು ಕೆಲಸ ಮಾಡಿದ್ದಾರೆ‌ ಎಂದು ಕೊಂಡಾಡಿದರು.

ಇಲ್ಲಿಯತನಕ ಸುಮಾರು 19 ಸಾವಿರ ಪ್ರಶಂಸನಾ ಪತ್ರಗಳನ್ನು ತಲುಪಿಸಿದ್ದು, ಕೊರೊನಾ ಸಂದರ್ಭದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಅಭಿನಂದನೆ ಸಲ್ಲಿಸಿದ್ದಾರೆ. 19 ಸಾವಿರ ಪೊಲೀಸ್ರಿಗೆ ಪ್ರಶಂಸನಾ ಪತ್ರ ನೀಡಿರುವುದು ದೇಶದಲ್ಲೇ ಮೊದಲು ಎನ್ನಲಾಗುತ್ತಿದೆ.

For All Latest Updates

ABOUT THE AUTHOR

...view details