ಕರ್ನಾಟಕ

karnataka

ETV Bharat / state

ಮುಂದಿನ ಶೈಕ್ಷಣಿಕ ವರ್ಷದಿಂದ ಅಂಬೇಡ್ಕರ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್ - Prof. Venugopal

ಮುಂದಿನ ಶೈಕ್ಷಣಿಕ ವರ್ಷದಿಂದ ಅಂಬೇಡ್ಕರ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್ ಆರಂಭಿಸಲಾಗುವುದು ಎಂದು ಪ್ರೋ. ವೇಣುಗೋಪಾಲ್ ತಿಳಿಸಿದರು.

Bangalore
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅಂಬೇಡ್ಕರ್ ಅವರ 64ನೇ ಪರಿನಿಬ್ಭಾಣ ಸ್ಮರಣೆ ಕಾರ್ಯಕ್ರಮ..

By

Published : Dec 6, 2020, 6:53 PM IST

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಬಾಬಾ ಸಾಹೇಬ್ ಡಾ. ಬಿ.ಆರ್‌. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಅವರ 64ನೇ ಪರಿನಿಬ್ಬಾಣ ಸ್ಮರಣೆ ಕಾರ್ಯಕ್ರಮವನ್ನು ಇಂದು ಉದ್ಘಾಟಿಸಲಾಯಿತು.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅಂಬೇಡ್ಕರ್ ಅವರ 64ನೇ ಪರಿನಿಬ್ಬಾಣ ಸ್ಮರಣೆ ಕಾರ್ಯಕ್ರಮ..

ಬಳಿಕ ಮಾತಾನಾಡಿದ ಪ್ರೋ. ವೇಣುಗೋಪಾಲ್ ಮುಂದಿನ ಶೈಕ್ಷಣಿಕ ವರ್ಷದಿಂದ ಅಂಬೇಡ್ಕರ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್ ಆರಂಭಿಸಲಾಗುವುದು ಎಂದು ತಿಳಿಸಿದರು. ಸಂಶೋಧನೆ ಮತ್ತು ಬುಡಕಟ್ಟು ವಿಷಯಗಳಲ್ಲಿ ಪಿಜಿ ಡಿಪ್ಲೊಮಾ ಕೋರ್ಸ್ ಆರಂಭಿಸುವುದಾಗಿ ಅವರು ಘೋಷಿಸಿದರು. ಈ ಉದ್ದೇಶಕ್ಕಾಗಿ 1 ಕೋಟಿ ರೂ. ವೆಚ್ಚದಲ್ಲಿ ಈಗಿನ ಅಧ್ಯಯನ ಕೇಂದ್ರದ ಮೊದಲನೇ ಮಹಡಿಯಲ್ಲಿ ಸುಸಜ್ಜಿತ ತರಗತಿಗಳನ್ನು ನಿರ್ಮಿಸಲಾಗುವುದು‌. ಅಧ್ಯಯನ ಕೇಂದ್ರದಲ್ಲಿ ಅಪೂರ್ಣಗೊಂಡಿರುವ ಪ್ರವೇಶದ್ವಾರವನ್ನು ಶೀಘ್ರದಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಹಾಗೇ, ವಿಶ್ವವಿದ್ಯಾಲಯದಲ್ಲಿ 4 ಕೋಟಿ ರೂ. ವೆಚ್ಚದಲ್ಲಿ ಬುದ್ಧ ಧ್ಯಾನ ಮಂದಿರ ಸ್ಥಾಪಿಸಲಾಗುವುದು ಎಂದು ತಿಳಿಸಿದರು.

ಅಂಬೇಡ್ಕರ್ ಅವರು ಕೇವಲ ಒಂದು ವರ್ಗಕ್ಕೆ ಸೀಮಿತವಲ್ಲ. ಅವರು ಇಡೀ ದೇಶದ ಆಸ್ತಿ. ಸಂವಿಧಾನ ರಚಿಸುವುದರ ಮೂಲಕ ಅವರು ದೇಶಕ್ಕೆ ತಮ್ಮ ಅವಿಸ್ಮರಣೀಯ ಸೇವೆ ಸಲ್ಲಿಸಿದ್ದಾರೆ ಎಂದು ಶ್ಲಾಘಿಸಿದರು.

ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಾಹಿತಿ ಡಾ. ಸಿದ್ಧಲಿಂಗಯ್ಯ ಮಾತನಾಡಿ, ತುಳಿತಕ್ಕೊಳಗಾದ ಜನರು ಆಲಸ್ಯ ಮತ್ತು ಕೀಳರಿಮೆಯಿಂದ ಹೊರ ಬಂದು ಅಂಬೇಡ್ಕರ್ ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ವಿಜಯನಗರದಲ್ಲಿ ಸಚಿವ ಸೋಮಣ್ಣ ಕಚೇರಿ ಉದ್ಘಾಟಿಸಿದ ಸಿಎಂ

ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಎನ್ ಸಂಜೀವ್ ರಾಜ್ ಮಾತಾನಾಡಿ, 6.5 ಲಕ್ಷ ರೂ. ವೆಚ್ಚದಲ್ಲಿ ಅಧ್ಯಯನ ಕೇಂದ್ರದ ಆವರಣದಲ್ಲಿ ದಾನಿಗಳ ನೆರವಿನಿಂದ ಹೈ ಮಾಸ್ಟ್ ವಿದ್ಯುತ್​ ದೀಪ ಅಳವಡಿಸಲಾಗುತ್ತಿದೆ. ಎಂಎ ಇನ್ ಅಂಬೇಡ್ಕರ್ ಸ್ಟಡೀಸ್ ಸೇರಿದಂತೆ ಉದ್ದೇಶಿತ ಕೋರ್ಸ್ ಗಳ ಆರಂಭಕ್ಕೆ ಅಗತ್ಯ ಪಠ್ಯಕ್ರಮವನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಸಿಂಡಿಕೇಟ್ ಸದಸ್ಯರಾದ ಡಾ.ಸುಧಾಕರ್, ಡಾ. ರಾಜಾನಂದ ಮೂರ್ತಿ ಭೋದ್, ಪ್ರೊ. ದಶರತ್, ಪ.ಜಾ/ಪ.ಪಂ. ವಿಶೇಷಾಧಿಕಾರಿ ಪ್ರೊ.ಎಂ ನಾರಾಯಣಸ್ವಾಮಿ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ.ಸಿದ್ಧಯ್ಯ ಬೆಳಗಟ್ಟಿ, ಪ್ರೊ. ಹೊನ್ನು ಸಿದ್ಧಾರ್ಥ, ಪ್ರೊ.ಮುರಳೀಧರ, ಪ್ರೊ‌ ನಾಗಯ್ಯ, ಡಾ.ಶಾರದಾ, ಡಾ.ಶ್ರೀಕಂಠಯ್ಯ, ಡಾ.ಕೊಟ್ರೇಶಪ್ಪ, ಡಾ.ಶೇಖರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ABOUT THE AUTHOR

...view details