ಕರ್ನಾಟಕ

karnataka

ETV Bharat / state

ಪರೇಡ್ ವೇಳೆ ಇನ್ಮುಂದೆ ಕನ್ನಡದಲ್ಲೇ ಕಮಾಂಡ್: ಜನರ ಮೆಚ್ಚುಗೆಗೆ ಪಾತ್ರವಾದ ಪೊಲೀಸರ ನಡೆ - ಸೌದಾನ್ ವಿಶ್ರಾಮ್ ಎಂಬ ಕಮಾಂಡ್​

ಪರೇಡ್ ವೇಳೆ ಸಾವ್​ಧಾನ್​ - ವಿಶ್ರಾಮ್ ಎಂಬ ಪದಗಳ ಬದಲಿಗೆ ಕನ್ನಡದಲ್ಲೇ ಕಮಾಂಡ್​ ನೀಡಲು ಮುಂದಾಗಲಾಗಿದೆ. ಇನ್ನು ಮುಂದೆ‌ ಕನ್ನಡದಲ್ಲೇ ಕಮಾಂಡ್ ನೀಡುವ ಪದ್ಧತಿ ಜಾರಿಗೆ ಬಂದಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.

Command in Kannada  parade in Karnataka  karnataka rajyotsava  ಪರೇಡ್ ವೇಳೆ ಸೌದಾನ್ ವಿಶ್ರಾಮ್  ಸೌದಾನ್ ವಿಶ್ರಾಮ್ ಎಂಬ ಪದಗಳಿಗೆ‌ ತಿಲಾಂಜಲಿ  ಕನ್ನಡದಲ್ಲೇ ಕಮಾಂಡ್  ಪೊಲೀಸ್ ಪರೇಡ್​ನಲ್ಲಿ ಅಥವಾ ಗೌರವ ವಂದನೆ  ಸೌದಾನ್ ವಿಶ್ರಾಮ್ ಎಂಬ ಕಮಾಂಡ್​ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಪರೇಡ್
ಇನ್ನು ಮುಂದೆ‌ ಕನ್ನಡದಲ್ಲೇ ಕಮಾಂಡ್

By ETV Bharat Karnataka Team

Published : Sep 7, 2023, 2:06 PM IST

Updated : Sep 7, 2023, 6:53 PM IST

ಬೆಂಗಳೂರು:ಪೊಲೀಸ್ ಪರೇಡ್​ನಲ್ಲಿ ಅಥವಾ ಗೌರವ ವಂದನೆ ನಡೆಯುವಾಗ ಹಿಂದಿಯಲ್ಲಿ ಕೇಳಿಬರುತ್ತಿದ್ದ ಸಾವ್​ಧಾನ್​ ವಿಶ್ರಾಮ್ ಎಂಬ ಕಮಾಂಡ್​ಗಳನ್ನು ಇನ್ಮುಂದೆ ಕನ್ನಡದಲ್ಲೇ ನೀಡಲು ನಗರ ಪೊಲೀಸರು ಮುಂದಾಗಿದ್ದಾರೆ. ಹಿಂದಿ ಬದಲಿಗೆ ಕನ್ನಡದಲ್ಲಿ ಕಮಾಂಡ್ ನೀಡುವ ಪದ್ಧತಿಗೆ ನಾಂದಿ ಹಾಡಿದ್ದಾರೆ.

ಶಾಲೆಗಳಲ್ಲಿ ಸಾಮಾನ್ಯವಾಗಿ ಸಾವ್​ಧಾನ್​-ವಿಶ್ರಾಮ್ ಎಂಬ ಪದಗಳನ್ನ ಕೇಳಿರುತ್ತೀರಿ.. ಅದೇ ರೀತಿ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಪರೇಡ್ ಅಥವಾ ಗೌರವ ವಂದನೆಯಲ್ಲಿ ಪೊಲೀಸರು ಹಿಂದಿಯಲ್ಲಿ ಕಮಾಂಡ್ ಮಾಡುವುದು ಸಾಮಾನ್ಯ. ಇದೀಗ ಹಳೆಯ ಸಂಪ್ರದಾಯದ ಬದಲಿಗೆ ಕನ್ನಡದಲ್ಲಿ ಕಮಾಂಡ್ ನೀಡುವಂತೆ ನಗರ ಪೊಲೀಸ್ ಆಯುಕ್ತ ದಯಾನಂದ ಸೂಚಿಸಿದ್ದಾರೆ.

ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಪೊಲೀಸ್​ ಸಿಬ್ಬಂದಿ ಕನ್ನಡದಲ್ಲೇ ಕಮಾಂಡ್ ನೀಡಲಾಗುತ್ತಿದೆ.‌ ಇದಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ಯವಾಗುತ್ತಿದೆ‌.‌ ಕನ್ನಡ ರಾಜೋತ್ಸವಕ್ಕೆ‌ ಒಂದು ತಿಂಗಳಿರುವಾಗಲೇ ಕಾರ್ಯಕ್ರಮಕ್ಕೆ ಪೊಲೀಸರು ತಯಾರಿ ನಡೆಸುತ್ತಿದ್ದಾರೆ.

ಕನ್ನಡ ಮಾತು ಚಂದ..‌ ಕನ್ನಡದ ಕಮಾಂಡ್ ಇನ್ನು ಚೆಂದ.. ಸಾವ್​ಧಾನ್​-ವಿಶ್ರಾಮ್ ಬದಲಿಗೆ ಬಹಳ‌ಪಡೆ ವಂದನಾ ಶಸ್ತ್ರ ಮತ್ತು ಬಹಳ‌ಪಡೆ ವಿಸರ್ಜನೆ ಎಂಬ ಪದ ಬಳಕೆ‌ ಮಾಡಲಾಗಿದೆ. ಎಕ್ಸ್​ನಲ್ಲಿ ಕನ್ನಡ ಕಮಾಂಡ್ ಬಗ್ಗೆ ವಿಡಿಯೋ ಹಂಚಿಕೊಂಡಿರುವ ಪೊಲೀಸ್ ಕಮೀಷನರ್ ಕನ್ನಡ ಮಾತು ಚೆಂದ..‌ ಕನ್ನಡದ ಕಮಾಂಡ್ ಇನ್ನು ಚೆಂದ ಎಂಬ ಟ್ಯಾಗ್ ಲೈನ್ ಹಾಕಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಓದಿ:IIIT Hyderabad: ಒಮ್ಮೆ ಮಾತನಾಡಿದರೆ 22 ಭಾಷೆಗಳಿಗೆ ಅನುವಾದ.. ಐಐಐಟಿ ಹೈದರಾಬಾದ್​ನಿಂದ 'ಸ್ಪೀಚ್​ ಟ್ರಾನ್ಸಲೇಶನ್' ಸಾಫ್ಟ್‌ವೇರ್ ವಿನ್ಯಾಸ


Last Updated : Sep 7, 2023, 6:53 PM IST

ABOUT THE AUTHOR

...view details