ಕರ್ನಾಟಕ

karnataka

ETV Bharat / state

ಜೂನ್ 19 ರಂದು ಕಾಮೆಡ್-ಕೆ ಪರೀಕ್ಷೆ - ವೃತ್ತಿಶಿಕ್ಷಣ ಪ್ರವೇಶಕ್ಕಾಗಿ ಸಾಮಾನ್ಯ ಪ್ರವೇಶ ಪರೀಕ್ಷೆ

ಕಾಮೆಡ್-ಕೆ ಪರೀಕ್ಷೆ ಜೂನ್ 19ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಹಾಗೂ ಮಧ್ಯಾಹ್ನ 2:50 ರಿಂದ 5:50 ರವರೆಗೆ ನಡೆಯಲಿದೆ. ಜೂನ್ 22ರಂದು ತಾತ್ಕಾಲಿಕ ಕೀ ಉತ್ತರ ಬಿಡುಗಡೆ ಮಾಡಲಾಗುತ್ತದೆ.

ಜೂನ್ 19 ರಂದು ಕಾಮೆಡ್-ಕೆ ಪರೀಕ್ಷೆ...
ಜೂನ್ 19 ರಂದು ಕಾಮೆಡ್-ಕೆ ಪರೀಕ್ಷೆ...

By

Published : Jun 16, 2022, 4:07 PM IST

ಬೆಂಗಳೂರು: ವೃತ್ತಿಶಿಕ್ಷಣ ಪ್ರವೇಶಕ್ಕಾಗಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಮುಗಿದ ಮರುದಿನವೇ ಅಂದರೆ ಜೂನ್ 19 ರಂದು ಕಾಮೆಡ್-ಕೆ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಯನ್ನು ಜೂನ್ 19ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಹಾಗೂ ಮಧ್ಯಾಹ್ನ 2:50 ರಿಂದ 5:50 ರವರೆಗೆ ನಡೆಸಲಿದ್ದೇವೆ. ಜೂನ್ 22ರಂದು ತಾತ್ಕಾಲಿಕ ಕೀ ಉತ್ತರ ಬಿಡುಗಡೆ ಮಾಡಲಾಗುವುದು. ಪರೀಕ್ಷಾ ಅಂಕಗಳು ಜುಲೈ 5 ರಂದು ಬೆಳಗ್ಗೆ 11 ರಿಂದ ಅಭ್ಯರ್ಥಿಗಳಿಗೆ ಆನ್‌ಲೈನ್‌​ನಲ್ಲಿ ಸಿಗುವಂತೆ ಮಾಡಲಾಗುವುದು ಎಂದು ಖಾಸಗಿ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಒಕ್ಕೂಟ ತಿಳಿಸಿದೆ.

ಕಾಮೆಡ್-ಕೆ ತನ್ನ ಯುಜಿಇಟಿ ಪರೀಕ್ಷೆಯನ್ನು ಕರ್ನಾಟಕದ ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ದಂತ ವೈದ್ಯಕೀಯ ಕಾಲೇಜುಗಳಲ್ಲಿ ಮತ್ತು ದೇಶಾದ್ಯಂತ ಆಯ್ದ ಪ್ಯಾನ್-ಇಂಡಿಯಾ ಸದಸ್ಯ ವಿಶ್ವವಿದ್ಯಾಲಯಗಳಲ್ಲಿ ನಡೆಸಲಿದೆ ಎಂದು ಮಾಹಿತಿ ನೀಡಿದೆ.

ಇದನ್ನೂ ಓದಿ:ವಿಡಿಯೋ: ಪೊಲೀಸ್ ಅಧಿಕಾರಿಯ ಕಾಲರ್‌ಪಟ್ಟಿ​ ಹಿಡಿದು ಕಾಂಗ್ರೆಸ್‌ನ ರೇಣುಕಾ ಚೌಧರಿ ದರ್ಪ!

ABOUT THE AUTHOR

...view details