ಕರ್ನಾಟಕ

karnataka

ETV Bharat / state

ಕಾಲೇಜು ವಿದ್ಯಾರ್ಥಿ ಹತ್ಯೆ ಪ್ರಕರಣ: ಚಾಕು ಇರಿದಿದ್ದ ಇಬ್ಬರು ಆರೋಪಿಗಳು ಅಂದರ್..! - ಇಬ್ಬರು ಆರೋಪಿಗಳು ಅಂದರ್

ಖಾಸಗಿ ಕಾಲೇಜು ವಿದ್ಯಾರ್ಥಿಯ ಹತ್ಯೆ ಪ್ರಕರಣ - ಚಾಕು ಇರಿದಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರು.

Two accused arrested
ಚಾಕು ಇರಿದಿದ್ದ ಇಬ್ಬರು ಆರೋಪಿಗಳು ಅಂದರ್

By

Published : May 2, 2023, 3:45 PM IST

ಬೆಂಗಳೂರು:ಬಾಗಲೂರು ಠಾಣಾ ವ್ಯಾಪ್ತಿಯ ಖಾಸಗಿ ಕಾಲೇಜಿನಲ್ಲಿ ನಡೆದಿದ್ದ ವಿದ್ಯಾರ್ಥಿ ಹತ್ಯೆ ಪ್ರಕರಣದ ಇಬ್ಬರು ಆರೋಪಿಗಳನ್ನು ಮೂಡಿಗೆರೆ ಅರಣ್ಯ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ. ಗಲಾಟೆಗೂ ತನಗೂ ಸಂಬಂಧವಿಲ್ಲದಿದ್ದರೂ ಚಾಕು ಇರಿದಿದ್ದ ಆರೋಪಿ ಅನಿಲ್ ಹಾಗೂ ಶೃಂಗ ಎಂಬಾತನನ್ನು ಬಾಗಲೂರು ಠಾಣಾ ಪೊಲೀಸರು ಅರೆಸ್ಟ್ ಮಾಡಿದ್ದಾರೆ‌. ಏಪ್ರಿಲ್ 28ರ ರಾತ್ರಿ ಕಾಲೇಜು ಫೆಸ್ಟಿವಲ್ ಸಂದರ್ಭದಲ್ಲಿ ಅದೇ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಭರತೇಶ್ ಸ್ನೇಹಿತನ ಅತ್ತೆ ಮಗಳ ಮೇಲೆ ಶರತ್ ಎಂಬಾತ ಕ್ರಿಕೆಟ್ ಬಾಲ್ ಎಸೆದಿದ್ದ. ಇದೇ ವಿಚಾರವಾಗಿ ಶರತ್ ಹಾಗೂ ಆತನ ಸ್ನೇಹಿತ ಭಾಸ್ಕರ್ ಜೆಟ್ಟಿ ಜೊತೆ ಭರತೇಶ್ ಗುಂಪು ಗಲಾಟೆ ನಡೆದಿತ್ತು.

ಇದನ್ನೂ ಓದಿ:ವಂಚನೆ ಪ್ರಕರಣ: ಯುವರಾಜ್ ಸ್ವಾಮಿ‌ ವಿರುದ್ಧ ಮತ್ತೊಂದು ಪ್ರಕರಣ ದಾಖಲು

ಫೋನ್ ಕರೆಯ ಸಹಾಯದಿಂದ ಇಬ್ಬರು ಆರೋಪಿಗಳ ಬಂಧನ:ಈ ವೇಳೆ, ಏಕಾಏಕಿ ಮಧ್ಯ ಪ್ರವೇಶಿಸಿದ್ದ ಆರೋಪಿ ಅನಿಲ್, ತನಗೆ ಸಂಬಂಧವೇ ಇರದಿದ್ದರೂ ಏಕಾಏಕಿ ಭಾಸ್ಕರ್ ಜೆಟ್ಟಿಯ ಎದೆಗೆ ಚಾಕು ಇರಿದಿದ್ದ. ಪರಿಣಾಮ ತೀವ್ರ ರಕ್ತಸ್ರಾವದಿಂದ ಭಾಸ್ಕರ್ ಜೆಟ್ಟಿ ಸ್ಥಳದಲ್ಲೇ ಸಾವನ್ನಪ್ಪಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಭರತೇಶ್​ನನ್ನ ಬಂಧಿಸಿದ್ದರು. ಕೃತ್ಯದ ಬಳಿಕ ಕಾರಿನಲ್ಲಿ ಮೂಡಿಗೆರೆಗೆ ಪರಾರಿಯಾಗಿದ್ದ ಅನಿಲ್ ಹಾಗೂ ಆತನ ಜೊತೆಗಿದ್ದ ಶೃಂಗ ಮೂಡಿಗೆರೆಯ ಅರಣ್ಯ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದರು. ಆರೋಪಿಗಳ ಸ್ನೇಹಿತನ ಪೋನ್ ಕರೆಯ ಜಾಡು ಹಿಡಿದು ಪೊಲೀಸರು ಸದ್ಯ ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದಾರೆ‌.

ಇದನ್ನೂ ಓದಿ:ಟ್ವಿಟರ್ ಮೂಲಕ ಬೆದರಿಕೆ: ಪೊಲೀಸರಿಗೆ ದೂರು ನೀಡಿದ ಆಲ್ಟ್ ನ್ಯೂಸ್‌ನ ಮೊಹಮ್ಮದ್ ಜುಬೇರ್

ಚಾಕುವಿನಿಂದ ಇರಿದು ಯುವಕನ ಕೊಲೆ:ಕುಡಿದ ಅಮಲಿನಲ್ಲಿ ಚಾಕು ಹಿಡಿದು ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆ, ಯುವಕನನ್ನು ಇರಿದು ಹತ್ಯೆ ಮಾಡಿರುವ ಘಟನೆ ಬೆಳಗಾವಿಯ ಹಳೆ ಪಿಬಿ ರಸ್ತೆಯಲ್ಲಿ ಭಾನುವಾರ ತಡರಾತ್ರಿ ನಡೆದಿತ್ತು. ಬೆಳಗಾವಿ ತಾಲೂಕಿನ ತಾರಿಹಾಳ ಗ್ರಾಮದ ನಾಗರಾಜ ಭೀಮ ಸಿ. ಪಾಟೀಲ್​(28) ಕೊಲೆಯಾಗಿರುವ ಯುವಕ. ಕಂಗ್ರಾಳಿ ಕೆ.ಎಚ್. ಗ್ರಾಮದ ಆರೋಪಿ ಜಯಶ್ರೀ ಪವಾರ ಎನ್ನುವ ಮಹಿಳೆಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕಳೆದ ಮೇ 30ರಂದು ತಡರಾತ್ರಿ ಮಹಿಳೆಯೊಬ್ಬರು ಕುಡಿದ ಅಮಲಿನಲ್ಲಿ ಕೈಯಲ್ಲಿ ಚಾಕು ಹಿಡಿದುಕೊಂಡು ರಸ್ತೆಯಲ್ಲಿ ನಡೆದಾಡುತ್ತಿದ್ದರು.

ಈ ಸಂದರ್ಭದಲ್ಲಿ ಬೈಕ್​​ನಲ್ಲಿ ಬಂದ ನಾಗರಾಜ ಆ ಮಹಿಳೆಯನ್ನು ವಿಚಾರಿಸಿದನು. ಈ ಕುರಿತು ಕೆರಳಿದ ಮಹಿಳೆ ಯುವಕನೊಂದಿಗೆ ಜಗಳಕ್ಕೆ ನಿಂತಿದ್ದಾರೆ. ಆಗ ಮಾತಿಗೆ ಮಾತು ಬೆಳೆದಿದ್ದರಿಂದ ಮಹಿಳೆ ಕುಡಿದ ಅಮಲಿನಲ್ಲಿ ಯುವಕನಿಗೆ ಚೂರಿಯಿಂದ ಇರಿದ್ದಾಳೆ. ಕೂಡಲೇ ಸ್ಥಳೀಯರು ನಾಗರಾಜರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಈ ಸಂಬಂಧ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣದ ಕುರಿತು ದೂರು ದಾಖಲಾಗಿದೆ.

ಇದನ್ನೂ ಓದಿ:ಲಂಚ ಪಡೆದ ಆರೋಪದಡಿ ಅಮಾನತುಗೊಂಡಿದ್ದ ಎನ್​ಐಎ ಅಧಿಕಾರಿಗಳು: ಸಿಬಿಐನಿಂದ ಎಫ್‌ಐಆರ್ ದಾಖಲು

ABOUT THE AUTHOR

...view details