ಕರ್ನಾಟಕ

karnataka

ETV Bharat / state

ವಾಂಗಿ ಬಾತ್​ನಲ್ಲಿ ಜಿರಳೆ: ಬಿಬಿಎಂಪಿ ಕಾರ್ಪೋರೇಟರ್ಸ್​​ ಕಕ್ಕಾಬಿಕ್ಕಿ - Cockroach

ಬಿಬಿಎಂಪಿ ವಿಶೇಷ ಕೌನ್ಸಿಲ್ ಸಭೆಯಲ್ಲಿ ಬಜೆಟ್ ಕುರಿತ ಬಿಸಿಬಿಸಿ ಚರ್ಚೆ ನಡಿಯುತ್ತಿರುವಾಗ ಶಾಕ್​ ಕಾದಿತ್ತು. ಈ ನಡುವೆ ಕಾರ್ಪೋರೇಟರ್ಸ್​ಗೆ ಕೊಟ್ಟಿದ್ದ ವಾಂಗಿಬಾತ್​ನಲ್ಲಿ ಜಿರಳೆ ಮರಿ ಸಿಕ್ಕಿ ದೊಡ್ಡ ರಾದ್ಧಾಂತವೇ ಸೃಷ್ಟಿಯಾಯಿತು.

ತಿಂಡಿಯಲ್ಲಿ ಜಿರಳೆ ಪತ್ತೆ

By

Published : Aug 19, 2019, 7:14 PM IST

ಬೆಂಗಳೂರು: ಬಿಬಿಎಂಪಿ ವಿಶೇಷ ಕೌನ್ಸಿಲ್ ಸಭೆಯಲ್ಲಿ ಬಜೆಟ್ ಕುರಿತ ಬಿಸಿಬಿಸಿ ಚರ್ಚೆ ನಡಿಯುತ್ತಿರುವ ವೇಳೆ ಕಾರ್ಪೋರೇಟರ್ಸ್​ಗೆ ಕೊಟ್ಟ ವಾಂಗಿಬಾತ್ ನಲ್ಲಿ ಜಿರಳೆ ಮರಿ ಸಿಕ್ಕಿದ್ದು ದೊಡ್ಡ ರಾದ್ಧಾಂತಕ್ಕೆ ಕಾರಣವಾಯಿತು.

ಬೆಳಗಿನ ತಿಂಡಿ ಖಾಸಗಿ ಹೋಟೆಲ್ ಹಾಗೂ ಮಧ್ಯಾಹ್ನದ ಊಟ ಪೂರೈಕೆಯನ್ನು ಇಂದಿರಾ ಕ್ಯಾಂಟೀನ್ ಗೆ ವಹಿಸಲಾಗಿತ್ತು. ಈ ಹಿನ್ನೆಲೆ 12 ಗಂಟೆಯ ವೇಳೆಗೆ ಪಕೋಡ ಹಾಗೂ ನವಣೆಯ ವಾಂಗಿಬಾತ್ ನೀಡಿದ್ರು. ಚರ್ಚೆಯ ನಡುವೆ ತಿಂಡಿ ತಿನ್ನುತ್ತಿದ್ದಾಗ, ದೊಡ್ಡಬೊಮ್ಮಸಂದ್ರ ವಾರ್ಡ್ ಕಾರ್ಪೋರೇಟರ್ ಜಯಲಕ್ಷಮ್ಮ ಪಿಳ್ಳಪ್ಪ ಅವರಿಗೆ ವಾಂಗಿಬಾತ್​ನಲ್ಲಿ ಜಿರಳೆ ಮರಿ ಸಿಕ್ಕಿತು. ನೀವು ಕೊಟ್ಟ ತಿಂಡಿಯಲ್ಲಿ ಜಿರಳೆ ಇದೆ ನೋಡಿ ಎಂದು ಬಿಜೆಪಿ ಕಾರ್ಪೋರೇಟರ್ ರಾಜಾ ರಾಮ್ ಹಾಗೂ ಉಮೇಶ್ ಶೆಟ್ಟಿ ಗದ್ದಲ ಎಬ್ಬಿಸಿದ್ರು.

ತಿಂಡಿಯಲ್ಲಿ ಜಿರಳೆ ಪತ್ತೆ

ಈ ವೇಳೆ ಬಜೆಟ್ ಚರ್ಚೆ ನಡೆಯಲು ಬಿಡಿ ಎಂದು ಮೇಯರ್ ಮನವಿ ಮಾಡಿದ್ರು. ಆಡಳಿತ ಪಕ್ಷದ ಮಾಜಿ ನಾಯಕ ಎಂ. ಶಿವರಾಜು, ನಾಟಕ ಮಾಡ್ಬೇಡಿ ಸುಮ್ನಿರಿ ಎಂದು ವಿಷಯವನ್ನು ಮರೆಮಾಚಲು ಯತ್ನಿಸಿದರು. ಅಲ್ಲಿಗೆ ಜಿರಳೆ ಗದ್ದಲ ಕಡಿಮೆಯಾಗಿ, ಚರ್ಚೆ ಪುನಾರಂಭವಾಯಿತು.

ABOUT THE AUTHOR

...view details