ಬೆಂಗಳೂರು: ಕೊರೊನಾ ಪಾಸಿಟಿವ್ನಿಂದಾಗಿ ಸೀಲ್ಡೌನ್ ಆಗಿದ್ದ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾ ಇಂದಿನಿಂದ ಮತ್ತೆ ಆರಂಭಗೊಂಡಿದೆ. ಮೂರು ವಾರದ ಬಳಿಕ ಸಿಎಂ ಕಚೇರಿಯಲ್ಲಿ ಚಟುವಟಿಕೆ ಪುನಾರಂಭಗೊಂಡಿದೆ.
ಸೀಲ್ಡೌನ್ ಬಳಿಕ ಬಾಗಿಲು ತೆರೆದ ಸಿಎಂ ಗೃಹ ಕಚೇರಿ ಕೃಷ್ಣಾ! - ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾ
ಸಿಎಂ ಗುಣಮುಖರಾಗಿ ಮರಳಿದ ನಂತರವೂ ಸಭೆಗಳನ್ನು ಕೃಷ್ಣಾ ಬದಲು ಕಾವೇರಿಯಲ್ಲಿಯೇ ನಡೆಸುತ್ತಿದ್ದರು. ಆದರೆ, ಇಂದು ಗೃಹ ಕಚೇರಿ ಕೃಷ್ಣಾ ಬಾಗಿಲು ತೆರೆದಿದ್ದು, ಅಧಿಕೃತವಾಗಿ ಸಿಎಂ ಕಚೇರಿಯಲ್ಲಿ ಕಾರ್ಯಚಟುವಟಿಕೆಗಳು ಪುನಾರಂಭಗೊಂಡಿವೆ.
ಆಗಸ್ಟ್ 2ರಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಗೃಹ ಕಚೇರಿ ಕೃಷ್ಣಾ, ಅಧಿಕೃತ ನಿವಾಸ ಕಾವೇರಿಯ ಕೆಲ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಕೃಷ್ಣಾ ಸೀಲ್ ಡೌನ್ ಆಗಿದ್ದು, ಇಲ್ಲಿಯವರೆಗೂ ಮುಚ್ಚಲ್ಪಟ್ಟಿತ್ತು. ಜುಲೈ 30ರಂದು ಮೀನುಗಾರಿಕೆ ಇಲಾಖೆ ಅಂಕಿ - ಅಂಶ ಸಂಚಿಕೆ ಬಿಡುಗಡೆ ಕಾರ್ಯಕ್ರಮವೇ ಕಡೆಯ ಕಾರ್ಯಕ್ರಮವಾಗಿತ್ತು.
ಸಿಎಂ ಗುಣಮುಖರಾಗಿ ಮರಳಿದ ನಂತರವೂ ಸಭೆಗಳನ್ನು ಕೃಷ್ಣಾ ಬದಲು ಕಾವೇರಿಯಲ್ಲಿಯೇ ನಡೆಸುತ್ತಿದ್ದರು. ಆದರೆ, ಇಂದು ಗೃಹ ಕಚೇರಿ ಕೃಷ್ಣಾ ಬಾಗಿಲು ತೆರೆದಿದ್ದು, ಅಧಿಕೃತವಾಗಿ ಸಿಎಂ ಕಚೇರಿಯಲ್ಲಿ ಕಾರ್ಯ ಚಟುವಟಿಕೆಗಳು ಪುನಾರಂಭಗೊಂಡಿವೆ. 25 ದಿನಗಳ ನಂತರ ಕರ್ನಾಟಕ ವಿದ್ಯುತ್ ನಿಗಮದ ಆಡಳಿತ ಮಂಡಳಿ ಸಭೆಯನ್ನು ಸಿಎಂ ಬಿಎಸ್ವೈ ಗೃಹ ಕಚೇರಿ ಕೃಷ್ಣಾದಲ್ಲೇ ನಡೆಸುತ್ತಿದ್ದಾರೆ. ಈ ಸಭೆ ನಂತರ ಹಿರಿಯ ಅಧಿಕಾರಿಗಳ ಸಭೆಯನ್ನೂ ಸಿಎಂ ಕೃಷ್ಣಾದಲ್ಲೇ ನಡೆಸಲಿದ್ದಾರೆ.