ಕರ್ನಾಟಕ

karnataka

ETV Bharat / state

ವಿವಿಧ ಮುಖಂಡರ ಜತೆ ಸಿಎಂ ಚರ್ಚೆ; ಒಪ್ಪಂದಕ್ಕೆ ಸಹಿ - ಜನ ಸಂಕಲ್ಪ ಯಾತ್ರೆಯ ಉದ್ಘಾಟನಾ ಸಮಾರಂಭ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಮೆರಿಕದ ಡ್ರಗ್ ಕಂಟ್ರೋಲ್ ಪಾಲಿಸಿ ವಿಭಾಗದ ನಿರ್ದೇಶಕ ರಾಹುಲ್ ಗುಪ್ತ ಅವರನ್ನು ಭೇಟಿ ಮಾಡಿದರು. ಭಾರತದ ರಾಜ್ಯಗಳಲ್ಲಿ ಪರಿಣಾಮಕಾರಿ ಆಡಳಿತ ಕೇಂದ್ರ ಮತ್ತು ಕರ್ನಾಟಕ ಸರ್ಕಾರದ ನಡುವೆ ಒಡಂಬಡಿಕೆ ಸಹಿ ಮಾಡಿದರು.

CMs discussion with various leaders
ವಿವಿಧ ಮುಖಂಡರ ಜತೆ ಸಿಎಂ ಚರ್ಚೆ; ಒಪ್ಪಂದಕ್ಕೆ ಸಹಿ

By

Published : Nov 15, 2022, 3:34 PM IST

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿವಿಧ ಮುಖಂಡರನ್ನು ಭೇಟಿಯಾಗಿ ಚರ್ಚಿಸಿ, ಕೆಲ ಒಪ್ಪಂದಗಳಿಗೆ ಸಹಿ ಮಾಡಿದರು.

ಇಂದು ಬೆಳಗ್ಗೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಅಮೆರಿಕದ ಡ್ರಗ್ ಕಂಟ್ರೋಲ್ ಪಾಲಿಸಿ ವಿಭಾಗದ ನಿರ್ದೇಶಕ ರಾಹುಲ್ ಗುಪ್ತ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ಬಳಿಕ ಭಾರತದ ರಾಜ್ಯಗಳಲ್ಲಿ ಪರಿಣಾಮಕಾರಿ ಆಡಳಿತ ಕೇಂದ್ರ ಮತ್ತು ಕರ್ನಾಟಕ ಸರ್ಕಾರದ ನಡುವೆ ಒಡಂಬಡಿಕೆಗೆ ಸಹಿ ಮಾಡಿದರು. ಈ ಸಂದರ್ಭ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್, ಮುಖ್ಯಮಂತ್ರಿಯವರ ಕಾರ್ಯದರ್ಶಿ ಜಯರಾಂ ರಾಯಪುರ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಇದಾದ ಬಳಿಕ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಸೆಂಟರ್ ಫಾರ್ ಎಫೆಕ್ಟಿವ್ ಗವರ್ನನ್ಸ್ ಆಫ್ ಇಂಡಿಯನ್ ಸ್ಟೇಟ್ಸ್ ಹಾಗೂ ಕರ್ನಾಟಕ ಸರ್ಕಾರದ ನಡುವೆ ಒಪ್ಪಂದಕ್ಕೆ ಸಹಿ ಮಾಡಲಾಯಿತು. ಹಣಕಾಸು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ ಎಸ್ ಎನ್ ಪ್ರಸಾದ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಕಾರ್ಯದರ್ಶಿ ಶ್ರೀವತ್ಸ ಕೃಷ್ಣ, ಸಿಜಿಐ ಎಸ್ ನ ಆಶ್ರಿತ್ ಜಗದಾಳೆ, ಕಾರ್ತಿಕ್ ಮುರಳೀಧರನ್, ವಿಜಯ್ ಪಿಂಗಳೆ ಹಾಗೂ ಅಂಕಿತ್ ಅವರು ಉಪಸ್ಥಿತರಿದ್ದರು.

ಜನತಾದರ್ಶನ

ಈ ಕಾರ್ಯಕ್ರಮದ ಬಳಿಕ ಸಿಎಂ ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಜನ ಸಂಕಲ್ಪ ಯಾತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡರು. ಈ ಎಲ್ಲಾ ಕಾರ್ಯಕ್ರಮಕ್ಕೆ ಮುನ್ನವೇ ಬೆಳಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಮ್ಮ ಆರ್ ಟಿ ನಗರ ನಿವಾಸದ ಬಳಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.

ಇದನ್ನೂ ಓದಿ:ನಂದಿನಿ ಹಾಲಿನ ದರ ಹೆಚ್ಚಳಕ್ಕೆ ತಾತ್ಕಾಲಿಕ ತಡೆ: ನ.20ರ ನಂತರ ತೀರ್ಮಾನ ಎಂದ ಸಿಎಂ

ABOUT THE AUTHOR

...view details