ಕರ್ನಾಟಕ

karnataka

ETV Bharat / state

ದೇವೇಗೌಡರ ಯೋಗಕ್ಷೇಮ ವಿಚಾರಿಸಿದ ಸಿಎಂ ಯಡಿಯೂರಪ್ಪ - ಬಿ.ಎಸ್​. ಯಡಿಯೂರಪ್ಪ ಟ್ವೀಟ್

ಮಾಜಿ ಪ್ರಧಾನಿ ದೇವೇಗೌಡ ಹಾಗೂ ಕೋವಿಡ್ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿರುವ ಅವರ ಪತ್ನಿಯವರು ಶೀಘ್ರದಲ್ಲಿ ಪೂರ್ಣ ಗುಣಮುಖರಾಗಲೆಂದು ಮುಖ್ಯಮಂತ್ರಿ ಬಿಎಸ್​ವೈ ಟ್ವೀಟ್ ಮೂಲಕ ಹಾರೈಸಿದ್ದಾರೆ.

cm-yediyurappa-wishes-speedy-recovery-for-former-pm-devegowda
ದೇವೇಗೌಡರ ಯೋಗಕ್ಷೇಮ ವಿಚಾರಿಸಿದ ಸಿಎಂ ಯಡಿಯೂರಪ್ಪ

By

Published : Apr 2, 2021, 12:45 AM IST

ಬೆಂಗಳೂರು:ಮಾಜಿ ಪ್ರಧಾನಿ‌ ಹೆಚ್.ಡಿ. ದೇವೇಗೌಡ ಹಾಗೂ ಕೋವಿಡ್ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿರುವ ದೇವೇಗೌಡರ ಪತ್ನಿ ಚೆನ್ನಮ್ಮ ಶೀಘ್ರದಲ್ಲಿ ಪೂರ್ಣ ಗುಣಮುಖರಾಗಲೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾರೈಸಿದ್ದಾರೆ.

ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡರಿಗೆ ದೂರವಾಣಿ ಕರೆ ಮೂಲಕ ಸಿಎಂ ಯಡಿಯೂರಪ್ಪ ಆರೋಗ್ಯ ವಿಚಾರಿಸಿದರು. ಅಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಪ್ರಧಾನಿಗಳ ಶ್ರೀಮತಿಯವರ ಆರೋಗ್ಯದ ಬಗ್ಗೆಯೂ ಮುಖ್ಯಮಂತ್ರಿಗಳು ವಿಚಾರಿಸಿ ಮಾಹಿತಿ ಪಡೆದರು.

ತಮಗೆ ಕೋವಿಡ್ ನೆಗೆಟಿವ್ ಬಂದಿರುವುದರ ಬಗ್ಗೆ ಮಾಜಿ ಪ್ರಧಾನಿಗಳು ತಿಳಿಸಿದ್ದು, ಇನ್ನು ಕೆಲವೇ ದಿನಗಳಲ್ಲಿ ತಾವು ಆಸ್ಪತ್ರೆಯಿಂದ ಮನೆಗೆ ಮರಳುವುದಾಗಿ ಹೇಳಿದ್ದಾರೆ. ಮಾಜಿ ಪ್ರಧಾನಿಗಳು ಹಾಗೂ ಕೋವಿಡ್ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿರುವ ಶ್ರೀಮತಿಯವರು ಶೀಘ್ರದಲ್ಲಿ ಪೂರ್ಣ ಗುಣಮುಖರಾಗಲೆಂದು ಮುಖ್ಯಮಂತ್ರಿಗಳು ಟ್ವೀಟ್ ಮೂಲಕ ಹಾರೈಸಿದ್ದಾರೆ.

ABOUT THE AUTHOR

...view details