ಬೆಂಗಳೂರು: ಕೋವಿಡ್-19ಗೆ ಸಂಬಂಧಿಸಿದಂತೆ ಲಂಡನ್ನಲ್ಲಿ ನೆಲೆಸಿರುವ ಕನ್ನಡಿಗರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತುಕತೆ ನಡೆಸಿದ್ದು, ಸಂಕಷ್ಟದಲ್ಲಿರುವವರಿಗೆ ಸಹಕಾರದ ಅಭಯ ನೀಡಿ ಧೈರ್ಯ ತುಂಬಿದ್ದಾರೆ.
ಯುಕೆಯಲ್ಲಿರುವ ಕನ್ನಡಿಗರಿಗೆ ಸಿಎಂ ಅಭಯ ಗೃಹ ಕಚೇರಿ ಕೃಷ್ಣಾದಿಂದ ವಿಡಿಯೋ ಸಂವಾದದ ಮೂಲಕ ಯುಕೆನಲ್ಲಿರುವ ಕನ್ನಡ ಬಳಗದ ಜೊತೆ ಸಿಎಂ ಮಾತನಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಯುಕೆ ಲಾ ಮಿನಿಸ್ಟರ್ ರಾಬರ್ಟ್ ಬಕ್ಲಂಡ್ ಅವರು, ಯುಕೆನಲ್ಲಿ ಕೊರೊನಾ ಹರಡುವಿಕೆ ಹಾಗೂ ಅದರ ನಿಯಂತ್ರಣ ಕುರಿತು ವಿವರಿಸಿದರು. ಅಷ್ಟೇ ಅಲ್ಲದೆ ಕರ್ನಾಟಕದಲ್ಲಿ ಕೊರೊನಾ ನಿಗ್ರಹ ಮಾಡುವಲ್ಲಿ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದರ ಜೊತೆಗೆ ಮಾತನಾಡಿದ ಶರವಣ ಗುರುಮೂರ್ತಿ, ಯುಕೆನಲ್ಲಿ ಓದುತ್ತಿರುವ ಹಲವು ಕನ್ನಡಿಗ ವಿದ್ಯಾರ್ಥಿಗಳು ಲೋನ್ ತೆಗೆದುಕೊಂಡು ಇಲ್ಲಿಗೆ ಬಂದಿದ್ದು, ಇದೀಗ ಸಂಕಷ್ಟದಲ್ಲಿ ಸಿಲುಕಿದ್ದಾರೆ ಎಂದು ಸಿಎಂ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಅವರು ಬ್ಯಾಂಕ್ ನವರ ಜೊತೆ ಮಾತನಾಡಿ ಇಎಂಐ ಕಟ್ಟಲು ಸಮಯವಕಾಶ ಒದಗಿಸಿಕೊಡುವುದಾಗಿ ಭರವಸೆ ನೀಡಿದ್ರು.
ಈ ಸಂದರ್ಭದಲ್ಲಿ ಲಾರ್ಡ್ ಚಾನ್ಸಲೆರ್ ಮತ್ತು ಸೆಕ್ರೆಟರಿ ಆಫ್ ಫಾರ್ ಜಸ್ಟೀಸ್, ಮೆಂಬರ್ ಆಫ್ ಪಾರ್ಲಿಮೆಂಟ್ನ ರಾಬರ್ಟ್ ಬಕ್ಲಂಡ್ ಹಾಗೂ ಸುರೇಶ್ ಗತ್ತಾಪುರ- ಕೌನ್ಸಿಲರ್ ವೆಸ್ಟ್ ಸ್ವಿಂಡನ್ ಟ್ರಸ್ಟಿ ಆಫ್ ಹಿಂದೂ ಟೆಂಪಲ್ ಹಾಗೂ ಶರವಣ ಗುರುಮೂರ್ತಿ ಸೇರಿದಂತೆ ಹಲವು ಯುಕೆ ಕನ್ನಡ ಬಳಗದ ಸದಸ್ಯರು ಭಾಗವಹಿಸಿದ್ದರು.