ಕರ್ನಾಟಕ

karnataka

ETV Bharat / state

ಸರ್ಕಾರ ರೈತರ ಪರ ಇದೆ, ಕರ್ನಾಟಕ ಬಂದ್ ಕರೆ ಕೈಬಿಡಿ: ಸಿಎಂ ಮನವಿ - ಬೆಂಗಳೂರು

ರೈತರ ಬೆಳೆಗೆ ಹೆಚ್ಚಿನ ಬೆಲೆ ಸಿಗಲಿ ಎಂದೇ ಈ ಕಾಯ್ದೆಯನ್ನು ಜಾರಿಗೆ ತಂದಿದ್ದು. ರೈತರ ಪರವಾಗಿಯೇ ಪ್ರಧಾನಿಯವರು ಇದ್ದಾರೆ. ನಮ್ಮ ಸರಕಾರ ರೈತರ ಪರ ಇದೆ ಎಂದು ಸಿಎಂ ತಿಳಿಸಿದ್ದಾರೆ.

cm
cm

By

Published : Sep 27, 2020, 2:28 PM IST

ಬೆಂಗಳೂರು:ರೈತರಲ್ಲಿ ಅನಗತ್ಯ ಗೊಂದಲ ಸೃಷ್ಟಿಸುವ ಕೆಲಸವನ್ನು ಪ್ರತಿಪಕ್ಷಗಳು ಮಾಡಬಾರದು ಎಂದು ಸಿಎಂ ಮನವಿ ಮಾಡಿದರು.

ನಾಳಿನ ಕರ್ನಾಟಕ ಬಂದ್ ಸಂಬಂಧ ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾನು ರೈತರ ಜೊತೆ ಸಭೆ ಕರೆದು ಮಾತನಾಡಿದ್ದೇನೆ. ಎಪಿಎಂಸಿ ಕಾಯ್ದೆ ತಂದಿದ್ದು ರೈತರ ಪರವಾಗಿ. ಬಹಳ ವರ್ಷಗಳ ರೈತರ ಬೇಡಿಕೆಯನ್ನು ಈಡೇರಿಸಿದ್ದೇವೆ. ರೈತ ಮುಖಂಡರು ಇದನ್ನ ಅರಿತು ಬಂದ್ ವಾಪಸ್ ಪಡೆಯಬೇಕು. ಬಂದ್​ಗೆ ಅವಕಾಶನೂ ಇಲ್ಲವೆಂದು ತಿಳಿಸಿದರು.

ರೈತರ ಬೆಳೆಗೆ ಹೆಚ್ಚಿನ ಬೆಲೆ ಸಿಗಲಿ ಎಂದೇ ಇದನ್ನ ತಂದಿದ್ದು. ರೈತರ ಪರವಾಗಿಯೇ ಪ್ರಧಾನಿಯವರು ಇದ್ದಾರೆ. ನಮ್ಮ ಸರಕಾರ ರೈತರ ಪರ ಇದೆ. ಎಪಿಎಂಸಿ ಕಾಯ್ದೆಗೆ ಬಹಳ ರೈತರು ಬೆಂಬಲಿಸಿದ್ದಾರೆ. ರೈತರು ಗೊಂದಲಗೊಳ್ಳುವ ಅಗತ್ಯ ಇಲ್ಲ. ರೈತರ ಅನುಕೂಲಕ್ಕೆ ಕಾಯ್ದೆ ತಂದಿದ್ದೇವೆ. ರೈತರು ಬಂದ್ ಕರೆಯನ್ನು ಕೈ ಬಿಡಲಿ ಎಂದು ಮನವಿ ಮಾಡಿದರು.

ಕಾಡುಗೊಲ್ಲರ ಅಭಿವೃದ್ಧಿ ನಿಗಮ ರಚನೆ:

ಇದೇ ವೇಳೆ ಸಿಎಂ ಕಾಡುಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸವುದಾಗಿ ಘೋಷಿಸಿದರು. ಕಾಡುಗೊಲ್ಲರ ಸಮುದಾಯದ ಅಭಿವೃದ್ಧಿಗೆ ನಿಗಮ ಸ್ಥಾಪಿಸಲು ನಿರ್ಧರಿಸಲಾಗಿದೆ. ನಿಗಮ ಮೂಲಕ ಆ ಸಮುದಾಯಕ್ಕೆ ಹೆಚ್ಚಿನ ಸೌಲಭ್ಯ ಕೊಡ್ತೇವೆ ಎಂದರು.

ABOUT THE AUTHOR

...view details