ಕರ್ನಾಟಕ

karnataka

ETV Bharat / state

ರಾಜೀನಾಮೆ ಸುಳಿವು ನೀಡಿದ್ರಾ ಬಿಎಸ್​​ವೈ..? ಜು26ರ ಬಳಿಕ ಹೈಕಮಾಂಡ್ ಸೂಚನೆಯಂತೆ ಮುಂದಿನ ಕಾರ್ಯ ಎಂದ ಸಿಎಂ - ರಾಜ್ಯದಲ್ಲಿ ನಾಯಕತ್ವ ಬದಲಾವಣೆ

ಜುಲೈ 26ರ ಕಾರ್ಯಕ್ರಮದ ಬಳಿಕ ಹೈಕಮಾಂಡ್ ಸೂಚನೆಯಂತೆ ಮುಂದಿನ ನಿರ್ಧಾರ ಕೈಗೊಳ್ಳಲಿದ್ದೇನೆ. ಪಕ್ಷವನ್ನ ಅಧಿಕಾರಕ್ಕೆ ತರುವ ಸಂಕಲ್ಪ ಮಾಡಿದ್ದೇನೆ. ವರಿಷ್ಠರ ಸೂಚನೆಯಂತೆ 26ರಿಂದ ಕೆಲಸ ಆರಂಭಿಸಲಿದ್ದೇನೆ ಎಂದಿದ್ದಾರೆ.

ಬಿಎಸ್​​ವೈ
ಬಿಎಸ್​​ವೈ

By

Published : Jul 22, 2021, 11:01 AM IST

Updated : Jul 22, 2021, 11:50 AM IST

ಬೆಂಗಳೂರು: ಮೊದಲ ಬಾರಿಗೆ ರಾಜೀನಾಮೆ ವಿಚಾರವಾಗಿ ಮಾತನಾಡಿರುವ ಸಿಎಂ ಯಡಿಯೂರಪ್ಪ ಜುಲೈ 26ರ ಕಾರ್ಯಕ್ರಮದ ಬಳಿಕ ಹೈಕಮಾಂಡ್ ಸೂಚನೆಯಂತೆ ಮುಂದಿನ ನಿರ್ಧಾರ ಕೈಗೊಳ್ಳಲಿದ್ದೇನೆ. ಪಕ್ಷವನ್ನ ಅಧಿಕಾರಕ್ಕೆ ತರುವ ಸಂಕಲ್ಪ ಮಾಡಿದ್ದೇನೆ. ವರಿಷ್ಠರ ಸೂಚನೆಯಂತೆ 26ರಿಂದ ಕೆಲಸ ಆರಂಭಿಸಲಿದ್ದೇನೆ ಎಂದಿದ್ದಾರೆ.

ಧನ್ವಂತರಿ ಯಾಗದಲ್ಲಿ ಭಾಗಿಯಾದ‌ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಯಾರಿಗೂ 75 ವರ್ಷ ದಾಟಿದವರಿಗೆ ಯಾವುದೇ ಸ್ಥಾನಮಾನ ಕೊಟ್ಟಿಲ್ಲ ಆದರೆ ನನ್ನ ಕೆಲಸವನ್ನು ಮೆಚ್ಚಿ ಪ್ರಧಾನಿ ಮೋದಿ, ಅಮಿತ್ ಶಾ, ನಡ್ಡಾ ಎಲ್ಲರೂ ನನಗೆ 79 ವರ್ಷದವರೆಗೂ ಅವಕಾಶ ಕೊಟ್ಟಿದ್ದಾರೆ. ನಾಳೆಗೆ ನಾನು ಮುಖ್ಯಮಂತ್ರಿಯಾಗಿ ಎರಡು ವರ್ಷ ಆಗಲಿದೆ. ನನ್ನ ಉದ್ದೇಶ ಬರುವ ದಿನಗಳಲ್ಲಿ ಪಕ್ಷವನ್ನು ಬಲಪಡಿಸಿ ಮತ್ತೊಮ್ಮೆ ಅಧಿಕಾರಕ್ಕೆ ತರುವ ಸಂಕಲ್ಪವಾಗಿದೆ. ಅದೇ ಸಂಕಲ್ಪವನ್ನು ಈಗಲೂ ಮಾಡಿದ್ದೇನೆ ಎಂದರು.

ರಾಜೀನಾಮೆ ಕುರಿತು ಪ್ರತಿಕ್ರಿಯಿಸಿದ ಬಿಎಸ್​​ವೈ

ನಮ್ಮ ಪಕ್ಷದ ರಾಷ್ಟ್ರೀಯ ನಾಯಕರು ಮುಂದಿನ ಸೂಚನೆಯನ್ನು ಕೊಡುತ್ತಾರೆ. ಅದರ ಆಧಾರದ ಮೇಲೆ ಜುಲೈ 26 ರಿಂದ ನನ್ನ ಕೆಲಸವನ್ನು ಪ್ರಾರಂಭ ಮಾಡಲಿದ್ದೇನೆ. 26 ರಂದು ಸರ್ಕಾರಕ್ಕೆ ಎರಡು ವರ್ಷವಾಗಿರುವ ಹಿನ್ನೆಲೆ ವಿಶೇಷ ಕಾರ್ಯಕ್ರಮವಿದೆ, ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ರಾಷ್ಟ್ರೀಯ ಅಧ್ಯಕ್ಷರು ಏನು ಸೂಚನೆ ಕೊಡುತ್ತಾರೋ ಆ ರೀತಿ ನಡೆದುಕೊಳ್ಳುತ್ತೇನೆ ಎಂದಿದ್ದಾರೆ.

ಪ್ರತಿಭಟನೆ ಮಾಡುವುದು ಸೂಕ್ತವಲ್ಲ

ಪಕ್ಷವನ್ನು ಬಲಪಡಿಸುವುದು, ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವುದು ನನ್ನ ಕರ್ತವ್ಯ. ನಮ್ಮ ಪಕ್ಷದ ಕಾರ್ಯಕರ್ತರು ಯಾವುದೇ ಗೊಂದಲ ಮಾಡದೆ ನನ್ನ ಜೊತೆ ಸಹಕಾರ ಕೊಡಬೇಕು. ಇಂದಿನಿಂದ ನನ್ನ ಪರವಾಗಿ ಹೇಳಿಕೆ ನೀಡುವುದು, ಪ್ರತಿಭಟನೆ ಮಾಡುವುದು ಸೂಕ್ತವಲ್ಲ ಅದನ್ನು ಮಾಡದೆ ಸಹಕಾರ ಕೊಡಿ ಎಂದು ಮನವಿ ಮಾಡಿದರು.

ಎಲ್ಲ ಜನಾಂಗದ ಮಠಾಧೀಶರು ಬಂದು ಆಶೀರ್ವಾದ ಮಾಡಿದ್ದಾರೆ ಬೆಂಬಲವನ್ನು ಸೂಚಿಸಿದ್ದಾರೆ.ಅವರ ಪ್ರೀತಿಯನ್ನು ನಾನು ಮರೆಯುವುದಿಲ್ಲ. ಅಂತಹ ಬೆಂಬಲ ಹಿಂದೆ ಯಾರಿಗೂ ಸಿಕ್ಕಿಲ್ಲ ಅವರೆಲ್ಲರ ಆಶೀರ್ವಾದದಿಂದ ಮುಂದೆ ಪಕ್ಷ ಯಾವ ತೀರ್ಮಾನ ಕೈಗೊಳ್ಳಲಿದೆಯೋ ಅದರ ಆಧಾರದಲ್ಲಿ ಕೆಲಸ ಮಾಡುತ್ತೇನೆ ಎಲ್ಲ ಮಠಾಧೀಶರು, ಕಾರ್ಯಕರ್ತರು ಸಹಕಾರ ನೀಡಬೇಕು ಯಾವುದೇ ಗೊಂದಲ ಮಾಡಬಾರದು ಎಂದು ಕರೆ ನೀಡಿದರು.

Last Updated : Jul 22, 2021, 11:50 AM IST

ABOUT THE AUTHOR

...view details