ಕರ್ನಾಟಕ

karnataka

ETV Bharat / state

ಉಗ್ರಾಣ ಭವನದ ನೂತನ ಆಡಳಿತ ಕಚೇರಿ ಉದ್ಘಾಟಿಸಿದ ಸಿಎಂ ಯಡಿಯೂರಪ್ಪ

ಕರ್ನಾಟಕ ರಾಜ್ಯ ಉಗ್ರಾಣ ನಿಗಮವು ನಗರದ ಪ್ರಿಂರೋಸ್ ರಸ್ತೆಯಲ್ಲಿ ನೂತನ ಆಡಳಿತ ಕಚೇರಿ ಕಟ್ಟಡ ನಿರ್ಮಾಣ ಮಾಡಿದೆ. ಅದನ್ನು ಇಂದು ಸಿಎಂ ಯಡಿಯೂರಪ್ಪ ಉದ್ಘಾಟನೆ ಮಾಡಿದರು.

ಉಗ್ರಾಣ ಭವನದ ನೂತನ ಆಡಳಿತ ಕಚೇರಿ ಉದ್ಘಾಟಿಸಿದ ಸಿಎಂ ಯಡಿಯೂರಪ್ಪ
CM Yediyurappa inaugurating new administrative office of the Warehouse

By

Published : Feb 18, 2021, 12:18 PM IST

ಬೆಂಗಳೂರು: ಕರ್ನಾಟಕ ರಾಜ್ಯ ಉಗ್ರಾಣ ನಿಗಮವು ನಗರದ ಪ್ರಿಂರೋಸ್ ರಸ್ತೆಯಲ್ಲಿ ನೂತನ ಆಡಳಿತ ಕಚೇರಿಯ ಕಟ್ಟಡವನ್ನು ನಿರ್ಮಾಣ ಮಾಡಿದ್ದು, ಸಿಎಂ ಯಡಿಯೂರಪ್ಪ ಇಂದು ಉದ್ಘಾಟನೆಗೊಳಿಸಿದರು.

ಉಗ್ರಾಣ ಭವನದ ನೂತನ ಆಡಳಿತ ಕಚೇರಿ ಉದ್ಘಾಟಿಸಿದ ಸಿಎಂ ಯಡಿಯೂರಪ್ಪ

ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಸಂಗ್ರಹಣಾ ವ್ಯವಸ್ಥೆ ಒದಗಿಸುವುದು, ಸಂಗ್ರಹಣೆ ಸಮಯದಲ್ಲಾಗುವ ನಷ್ಟವನ್ನು ತಗ್ಗಿಸುವುದು, ಏರುಪೇರಾಗುತ್ತಿರುವ ಕೃಷಿ ಉತ್ಪನ್ನಗಳ ಬೆಲೆಯಿಂದ ಹೊರ ಬರಲು ಮಾರುಕಟ್ಟೆಯಲ್ಲಿ ರೈತರಿಗೆ ಬೆಂಬಲ ಒದಗಿಸುವುದು ಹೀಗೆ ಮೊದಲಾದ ಕಾರ್ಯಗಳನ್ನು ಮಾಡಲಿದೆ.

ನಿಗಮದ ಈ ಹಿಂದಿನ ಆಡಳಿತ ಕಚೇರಿಯ ಕಟ್ಟಡ ಐವತ್ತು ವರ್ಷಗಳಷ್ಟು ಹಳೆಯದಾಗಿತ್ತು. ಆದರಿಂದ ಅದನ್ನು ನೆಲಸಮ ಮಾಡಿ ಅದೇ ಜಾಗದಲ್ಲಿ ನಾಲ್ಕು ಮಹಡಿಗಳ, 12 ಸಾವಿರ ಚದರ ಅಡಿ ವಿಸ್ತೀರ್ಣದ ಉಗ್ರಾಣ ಭವನವನ್ನು 376.62 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.

ಓದಿ: ಇಂದು ಮಹತ್ವದ ಸಚಿವ ಸಂಪುಟ ಸಭೆ: ಬಜೆಟ್​, ಮೀಸಲಾತಿ ವಿಷಯ ಚರ್ಚೆ

ರಾಜ್ಯಾದ್ಯಂತ ನಿಗಮವು 17.50 ಲಕ್ಷ ಮೆಗಾ ಟನ್​​​ಗಳಷ್ಟು ಸಾಮರ್ಥ್ಯದ ಗೋದಾಮುಗಳೊಂದಿಗೆ 153 ರಾಜ್ಯ ಉಗ್ರಾಣ ಶಾಖೆಗಳು ಹಾಗೂ 7 ಪ್ರಾದೇಶಿಕ ಕಚೇರಿಗಳನ್ನು ಹೊಂದಿದ್ದು, 280 ಖಾಯಂ ಅಧಿಕಾರಿ - ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಈ ವೇಳೆ ಸಿಎಂಗೆ ಸಚಿವ ಬಸವರಾಜ್ ಬೊಮ್ಮಾಯಿ, ಬಿಸಿ ಪಾಟೀಲ್, ಎಸ್ .ಟಿ.ಸೋಮಶೇಖರ್, ಉಗ್ರಾಣ ನಿಗಮ ಅಧ್ಯಕ್ಷರಾದ ಯುಬಿ ಬಣಕಾರ್ ಕೂಡಾ ಸಾಥ್ ನೀಡಿದರು.

ABOUT THE AUTHOR

...view details