ಕರ್ನಾಟಕ

karnataka

ETV Bharat / state

ಬಜೆಟ್ ಪೂರ್ವ ತಯಾರಿ ಸಭೆಗೂ ಮುನ್ನ ಜನಾರ್ದನ ಹೋಟೆಲ್​​ನಲ್ಲಿ ದೋಸೆ ಸೇವಿಸಿದ ಸಿಎಂ - ಜನಾರ್ದನ ಹೋಟೆಲ್​​ನಲ್ಲಿ ದೋಸೆ ಸೇವಿಸಿದ ಸಿಎಂ

ಬಿಡುವಿಲ್ಲದ ಬಜೆಟ್ ಪೂರ್ವ ಭಾವಿ ಸಭೆಗಳಲ್ಲಿ ತೊಡಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ತಮಗೆ ಇಷ್ಟವಾದ ಜನಾರ್ದನ ಹೋಟೆಲ್​​ನಲ್ಲಿ ದೋಸೆ ತಿಂದು ಬಿಸಿ ಬಿಸಿ ಚಹಾ ಕುಡಿದರು.

ಬಜೆಟ್ ಪೂರ್ವ ತಯಾರಿ ಸಭೆಗೂ ಮುನ್ನ ಜನಾರ್ದನ ಹೋಟೆಲ್​​ನಲ್ಲಿ ದೋಸೆ ಸೇವಿಸಿದ ಸಿಎಂ
CM Yediyurappa has eat Masala dosa before Budget Preparation Meeting

By

Published : Feb 10, 2021, 12:24 PM IST

Updated : Feb 10, 2021, 3:02 PM IST

ಬೆಂಗಳೂರು: ಬಿಡುವಿಲ್ಲದ ಬಜೆಟ್ ಪೂರ್ವ ಭಾವಿ ಸಭೆಗಳಲ್ಲಿ ತೊಡಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಜನಾರ್ದನ ಹೋಟೆಲ್​​ನಲ್ಲಿ ದೋಸೆ ತಿಂದು ಬಿಸಿ ಬಿಸಿ ಚಹಾ ಕುಡಿದರು.

ವಿಧಾನಸೌಧದಲ್ಲಿ ಕೆಂಗಲ್ ಹನುಮಂತಯ್ಯ ಜನ್ಮದಿನಾಚರಣೆ ಪ್ರಯುಕ್ತ ಮಾಲಾರ್ಪಣೆ ನೆರವೇರಿಸಲಾಯಿತು. ಬಳಿಕ ಬಜೆಟ್ ಪೂರ್ವ ಸಿದ್ಧತಾ ಸಭೆ ನಡೆಸಲು ಶಕ್ತಿಭವನಕ್ಕೆ ತೆರಳುವ ಮುನ್ನ ಶಿವಾನಂದ ವೃತ್ತದಲ್ಲಿರುವ ಜನಾರ್ದನ ಹೋಟೆಲ್​ಗೆ ಸಿಎಂ ಭೇಟಿ ನೀಡಿದರು.

ಯಡಿಯೂರಪ್ಪ ಅವರಿಗೆ ಇಷ್ಟದ ಹೋಟೆಲ್​​ಗಳಲ್ಲಿ ಒಂದಾಗಿರುವ ಜನಾರ್ದನಕ್ಕೆ ಆಗಾಗ ಭೇಟಿ ನೀಡುವ ಸಿಎಂ, ಇಂದು ಕೂಡ ಭೇಟಿ ನೀಡಿ ಮಸಾಲೆ ದೋಸೆ ಸೇವಿಸಿ ಬಿಸಿ ಬಿಸಿ ಚಹಾ ಹೀರಿದರು. ನಂತರ ಶಕ್ತಿಭವನಕ್ಕೆ ತೆರಳಿ ಬಜೆಟ್ ಪೂರ್ವಭಾವಿ ಸಭೆ ಆರಂಭಿಸಿದರು.‌

ಓದಿ: ಮಾರ್ಚ್ ಮೊದಲ ವಾರದಲ್ಲಿ ಬಜೆಟ್ ಮಂಡನೆ : ಸಿಎಂ ಬಿಎಸ್​ವೈ

ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ್ ಕತ್ತಿ ಹಾಗೂ ಇಲಾಖೆಯ ಅಧಿಕಾರಿಗಳ ಜೊತೆ ಬಜೆಟ್​​ನಲ್ಲಿ ರೂಪಿಸಬೇಕಾದ ಯೋಜನೆಗಳ ಸಂಬಂಧ ಚರ್ಚೆ ನಡೆಸಿದರು. ಚರ್ಚೆ ಸಂಜೆಯವರೆಗೂ ನಡೆಯಲಿದ್ದು, ವಿವಿಧ ಇಲಾಖೆಗಳ ಸಚಿವರು, ಅಧಿಕಾರಿಗಳ ಜೊತೆಯೂ ಸಿಎಂ ಸಭೆ ನಡೆಸಲಿದ್ದಾರೆ.

Last Updated : Feb 10, 2021, 3:02 PM IST

ABOUT THE AUTHOR

...view details