ಬೆಂಗಳೂರು:12ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವ ಉದ್ಘಾಟನ ಕಾರ್ಯಕ್ರದಲ್ಲಿ ಭಾಷಣ ಮಾಡಿದ ಸಿಎಂ ಯಡಿಯೂರಪ್ಪ, ಆರಂಭದಲ್ಲಿ ವೇದಿಕೆ ಮೇಲಿನ ಎಲ್ಲಾ ಗಣ್ಯರಿಗೂ ಸ್ವಾಗತ ಕೋರಿ ನಟ ಯಶ್ ಹೆಸರನ್ನು ಮರೆತ ಪ್ರಸಂಗ ನಡೆಯಿತು.
ಸಿನಿಮೋತ್ಸವದಲ್ಲಿ ಸ್ವಾಗತ ಭಾಷಣದಲ್ಲಿ ಯಶ್ ಹೆಸರು ಮರೆತ ಸಿಎಂ ಬಿಎಸ್ವೈ - ಸಿಎಂ ಬಿಎಸ್ವೈ, ಅದೇ ವೇದಿಕೆಯಲ್ಲಿದ್ದ ರಾಕಿಂಗ್ ಸ್ಟಾರ್ ಯಶ್ರನ್ನು ಮರೆತರು
12ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ ಉದ್ಘಾಟನ ಕಾರ್ಯಕ್ರದಲ್ಲಿ, ವೇದಿಕೆ ಮೇಲಿನ ಎಲ್ಲಾ ಗಣ್ಯರಿಗೂ ಸ್ವಾಗತ ಕೋರಿದ ಸಿಎಂ ಬಿಎಸ್ವೈ, ಅದೇ ವೇದಿಕೆಯಲ್ಲಿದ್ದ ರಾಕಿಂಗ್ ಸ್ಟಾರ್ ಯಶ್ರನ್ನು ಮರೆತಿದ್ದರು. ಬಳಿಕ ನಿರೂಪಕಿ ತಿಳಿಸಿದ ನಂತರ ಯಶ್ಗೆ ಸ್ವಾಗತ ಕೋರಿದರು.
![ಸಿನಿಮೋತ್ಸವದಲ್ಲಿ ಸ್ವಾಗತ ಭಾಷಣದಲ್ಲಿ ಯಶ್ ಹೆಸರು ಮರೆತ ಸಿಎಂ ಬಿಎಸ್ವೈ ಸಿಎಂ ಬಿಎಸ್ವೈ](https://etvbharatimages.akamaized.net/etvbharat/prod-images/768-512-6216691-thumbnail-3x2-hhjg.jpg)
ಕಾರ್ಯಕ್ರದಲ್ಲಿ ಭಾಷಣ ಮಾಡಿದ ಸಿಎಂ, ಎಲ್ಲಾ ಗಣ್ಯರಿಗೂ ಸ್ವಾಗತ ಕೋರಿದರು. ಆದರೆ, ರಾಕಿಂಗ್ ಸ್ಟಾರ್ ಯಶ್ ಅವರ ಹೆಸರನ್ನು ಮರೆತರು. ಇನ್ನೇನು ಭಾಷಣ ಮುಗಿಸಿ ಹೋಗುವ ವೇಳೆ ಕಾರ್ಯಕ್ರಮದ ನಿರೂಪಕಿ ಕಾವ್ಯಗೌಡ, ಯಡಿಯೂರಪ್ಪ ಅವರಿಗೆ ಯಶ್ ಹೆಸರು ಪ್ರಸ್ತಾಪ ಮಾಡದ ಬಗ್ಗೆ ಹೇಳಿದ್ರು. ಈ ವೇಳೆ ಮತ್ತೆ ಮೈಕ್ ಬಳಿ ಬಂದ ಮುಖ್ಯಮಂತ್ರಿ ಯಡಿಯೂರಪ್ಪ, ಕ್ಷಮೆ ಇರಲಿ ಯಶ್ ಹೆಸರನ್ನೇ ಮರೆತೆ ಯಶ್ ಅವರಿಗೂ ಕಾರ್ಯಕ್ರಮಕ್ಕೆ ಸ್ವಾಗತ ಎಂದರು. ಬಳಿಕ ಸಿಎಂ ಯಶ್ ಬಳಿ ಹೋಗಿ ಆತ್ಮೀಯವಾಗಿ ತಬ್ಬಿಕೊಂಡರು.
ಇನ್ನು ಈ ಕಾರ್ಯಕ್ರಮದಲ್ಲಿ ಸಿಎಂ, ವೇದಿಕೆ ಮೇಲಿದ್ದ ಹಿರಿಯ ನಟಿ ಜಯಪ್ರದ, ನಿರ್ಮಾಪಕ ಬೋನಿ ಕಪೂರ್, ಹಾಡುಗಾರ ಸೋನು ನಿಗಂ, ನಟಿ ಅದಿತಿ ಪ್ರಭುದೇವ, ಫಿಲ್ಮ್ ಚೇಂಬರ್ ಅಧ್ಯಕ್ಷ ಜೈರಾಜ್ ಎಲ್ಲರ ಹೆಸರು ಹೇಳಿ ಯಶ್ ಹೆಸರು ಮರೆತಾಗ ಕಾರ್ಯಕ್ರಮ ನೋಡುತ್ತಿದ್ದವರಲ್ಲಿ ಒಂದು ಕ್ಷಣ ಆಶ್ಚರ್ಯವಾಗಿತ್ತು.