ಕರ್ನಾಟಕ

karnataka

ETV Bharat / state

ಬೆಚ್ಚಿ ಬೀಳಿಸುತ್ತದೆ ಸಿಎಂ ಯಡಿಯೂರಪ್ಪ ಟ್ರಾವೆಲ್ ಹಿಸ್ಟರಿ, ಪ್ರೈಮರಿ ಕಾಂಟ್ಯಾಕ್ಟ್ ಪಟ್ಟಿ..!

ಸಿಎಂ ಯಡಿಯೂರಪ್ಪ ಟ್ರಾವೆಲ್ ಹಿಸ್ಟರಿ ಬೆಚ್ಚಿ ಬೀಳಿಸುತ್ತದೆ. ಆರು ದಿನಗಳಲ್ಲಿ ಅದೇಷ್ಟೋ ಪ್ರಯಾಣ, ಸಾವಿರಾರೂ ಜನರ ಭೇಟಿ, ಪ್ರಚಾರ ಹೀಗೆ ಸಿಎಂರ ಟ್ರಾವೆಲ್​ ಹಿಸ್ಟರಿ ಈಗ ಆತಂಕದ ಮನೆಮಾಡಿದೆ.

By

Published : Apr 17, 2021, 1:44 AM IST

CM Yeddyurappa Travel History, CM Yeddyurappa Travel History  news, CM Yeddyurappa Travel History latest news, ಸಿಎಂ ಯಡಿಯೂರಪ್ಪ ಟ್ರಾವೆಲ್ ಹಿಸ್ಟರಿ, ಸಿಎಂ ಯಡಿಯೂರಪ್ಪ ಟ್ರಾವೆಲ್ ಹಿಸ್ಟರಿ ಸುದ್ದಿ, ಸಿಎಂ ಯಡಿಯೂರಪ್ಪ ಟ್ರಾವೆಲ್ ಹಿಸ್ಟರಿ ವರದಿ
ಬೆಚ್ಚಿ ಬೀಳಿಸುತ್ತದೆ ಸಿಎಂ ಯಡಿಯೂರಪ್ಪ ಟ್ರಾವೆಲ್ ಹಿಸ್ಟರಿ

ಬೆಂಗಳೂರು: ಕೊರೊನಾ ಸೋಂಕಿಗೆ ಸಿಲುಕಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಒಂದು ವಾರದ ಟ್ರಾವೆಲ್ ಹಿಸ್ಟರಿ ಆತಂಕ ಸೃಷ್ಟಿಸುವಂತಿದೆ. ಸತತವಾಗಿ ಉಪ ಚುನಾವಣಾ ಪ್ರಚಾರ ಕಾರ್ಯ ನಡೆಸಿದ್ದು, ಸಂಪರ್ಕಿತರ ಪಟ್ಟಿ ಬಹುದೊಡ್ಡಾಗುವ ಸಾಧ್ಯತೆ ಇದೆ.

ಮುದುಗಲ್​ ಪ್ರಯಾಣ...

ಏಪ್ರಿಲ್ 9ರ ಶುಕ್ರವಾರ 3:30 ಕ್ಕೆ ಜಕ್ಕೂರು ಏರೊಡ್ರಮ್​ನಿಂದ ಹೆಲಿಕಾಪ್ಟರ್ ಮೂಲಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನ ಮುದುಗಲ್​ಗೆ ತೆರಳಿದ್ದಾರೆ. ಅಂದು ಮುದಗಲ್​ನಲ್ಲೇ ಸಿಎಂ ವಾಸ್ತವ್ಯ ಹೂಡಿದ್ದಾರೆ. ಮರುದಿನ ಶನಿವಾರ ಬೆಳಗ್ಗೆ 10 ಗಂಟೆಗೆ ಮುದಗಲ್​ನಿಂದ ತೆರಳಿದ ಮುಖ್ಯಮಂತ್ರಿ ಯಡಿಯೂರಪ್ಪ 11 ಗಂಟೆಗೆ ಮಸ್ಕಿ ಕ್ಷೇತ್ರದ ತುರುವಿಹಾಳದಲ್ಲಿ ಪ್ರಚಾರ ನಡೆಸಿದ್ದಾರೆ.

ತುರುವಿಹಾಳ, ಬಳಗಾನೂರಿನಲ್ಲಿ ಪ್ರಚಾರ...

ರಾಯಚೂರು ಜಿಲ್ಲಾ ಬಿಜೆಪಿ ವತಿಯಿಂದ ಮಸ್ಕಿ ವಿಧಾನಸಭಾ ಕ್ಷೇತ್ರದ ತುರವಿಹಾಳ ಮತ್ತು ತಿಡಿಗೋಳ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ನಂತರ ಮಧ್ಯಾಹ್ನ 2.30 ಕ್ಕೆ ತುರುವಿಹಾಳ ದಿಂದ ಹೊರಟು 3.15ಕ್ಕೆ ಬಳಗಾನೂರು ತಲುಪಿದ್ದಾರೆ. ಅಲ್ಲಿ ರಾಯಚೂರು ಜಿಲ್ಲಾ ಬಿಜೆಪಿ ವತಿಯಿಂದ ಮಸ್ಕಿ ವಿಧಾನಸಭಾ ಕ್ಷೇತ್ರದ ಬಳಗಾನೂರು ಪಟ್ಟಣ ಪಂಚಾಯಿತಿ ಮತ್ತು ತೋರಣದಿನ್ನಿ ಹಾಗೂ ಗುಡದೂರು ಜಿಲ್ಲಾ ಪಂಚಾಯತ್ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

ಸಂತೆಕಲ್ಲೂರು ಮತ್ತು ಮೆದಿಕಿನಾಳನಲ್ಲಿ ಪ್ರಚಾರ...

ಸಂಜೆ 6:00 ಗೆ ಮಸ್ಕಿ ತಾಲೂಕಿನ ಸಂತೆಕಲ್ಲೂರುಗೆ ಆಗಮಿಸಿರುವ ಯಡಿಯೂರಪ್ಪ ಸಂತೆಕಲ್ಲೂರು ಮತ್ತು ಮೆದಿಕಿನಾಳ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಅಂದು ರಾತ್ರಿ 8 ಗಂಟೆಗೆ ರಾಯಚೂರು ಜಿಲ್ಲಾ ಬಿಜೆಪಿ ವತಿಯಿಂದ ಆಯೋಜಿಸಿರುವ ಪ್ರಮುಖರ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಭಾಗವಹಿಸಿದ್ದು, ಅಂದು ರಾತ್ರಿ ಮುದಗಲ್​ನಲ್ಲಿ ವಾಸ್ತವ್ಯ ಹೂಡಿದ್ದಾರೆ.

ಏಪ್ರಿಲ್ 11ರ ಭಾನುವಾರ ಬೆಳಗ್ಗೆ 11 ಗಂಟೆಗೆ ರಾಯಚೂರು ಜಿಲ್ಲಾ ಬಿಜೆಪಿ ವತಿಯಿಂದ ಆಯೋಜಿಸಿರುವ ವಿವಿಧ ಸಮುದಾಯಗಳ ಮುಖಂಡರ ಸಭೆಯಲ್ಲಿ ಭಾಗವಹಿಸಿದ್ದಾರೆ. ಸಂಜೆ 5 ಗಂಟೆಗೆ ರಾಯಚೂರು ಜಿಲ್ಲಾ ಬಿಜೆಪಿ ಪಕ್ಷದ ವತಿಯಿಂದ ಆಯೋಜಿಸಿರುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದಾರೆ. ಅಂದು ರಾತ್ರಿಯೂ ಮುದಗಲ್​ನಲ್ಲಿ ಸಿಎಂ ವಾಸ್ತವ್ಯ ಹೂಡಿದ್ದಾರೆ.

ಬಸವಕಲ್ಯಾಣ ಪ್ರಯಾಣ...

ಏಪ್ರಿಲ್ 12ರ ಸೋಮವಾರ 10:45 ಬಸವಕಲ್ಯಾಣ ತಲುಪಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬೀದರ್ ಜಿಲ್ಲಾ ಬಿಜೆಪಿ ವತಿಯಿಂದ ಆಯೋಜಿಸಿರುವ ಪ್ರಮುಖರೊಂದಿಗೆ ಸಭೆ ನಡೆಸಿದ್ದಾರೆ. ಮಧ್ಯಾಹ್ನ 12:30 ಕ್ಕೆ ಬೀದರ್ ಜಿಲ್ಲಾ ಬಿಜೆಪಿ ಪಕ್ಷದ ವತಿಯಿಂದ ಆಯೋಜಿಸಿರುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದಾರೆ. 3.40 ಕ್ಕೆ ಬೀದರ್ ಜಿಲ್ಲಾ ಬಿಜೆಪಿ ವತಿಯಿಂದ ಮುಡಬಿಯಲ್ಲಿ ಆಯೋಜಿಸಿರುವ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಿದ್ದಾರೆ. ಸಂಜೆ 6 ಗಂಟೆಗೆ ಹಲಸೂರಿನಲ್ಲಿ ಬೀದರ್ ಜಿಲ್ಲಾ ಬಿಜೆಪಿ ವತಿಯಿಂದ ಆಯೋಜಿಸಿರುವ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಿದ್ದಾರೆ. ಸಂಜೆ 7.45 ಕ್ಕೆ ಬಸವಕಲ್ಯಾಣದಲ್ಲಿ ಪಟ್ಟಣದ ಗಣ್ಯರೊಂದಿಗೆ ನಡೆದ ಸಭೆಯಲ್ಲಿ ಭಾಗವಹಿಸಿದ್ದು, ಅಂದು ರಾತ್ರಿ ಅಲ್ಲೇ ವಾಸ್ತವ್ಯ ಹೂಡಿದ್ದಾರೆ.

ಜಕ್ಕೂರು ಏರೊಡ್ರಮ್​ಗೆ ಪ್ರಯಾಣ...

ಏಪ್ರಿಲ್ 13ರ ಮಂಗಳವಾರ 9 ಗಂಟೆಗೆ ಬಸವಕಲ್ಯಾಣದ ತಾಲೂಕು ಕ್ರೀಡಾಂಗಣ ಹೆಲಿಪ್ಯಾಡ್​ನಿಂದ ಹೊರಡ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ12.20 ಕ್ಕೆ ಬೆಂಗಳೂರಿನ ಜಕ್ಕೂರು ಏರೊಡ್ರಮ್​ಗೆ ಬಂದು ತಲುಪಿದ್ದಾರೆ.

ಅಂದು ಸಂಜೆ ಯುಗಾದಿ ಹಬ್ಬದ ನಡುವೆಯೂ ಕೋವಿಡ್ ಸಂಬಂಧ ಅಧಿಕೃತ ನಿವಾಸ ಕಾವೇರಿಯಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸಿದರು. ಮರುದಿನ ಏಪ್ರಿಲ್ 14 ರಂದು ಬೆಳಗ್ಗೆ 9.30 ಕ್ಕೆ ವಿಧಾನಸೌಧದಲ್ಲಿ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾದರು. ಪೌರ ಕಾರ್ಮಿಕರಿಗೆ ಸಾಂಕೇತಿಕ ಸಮವಸ್ತ್ರ ವಿತರಿಸಿದರು. ನಂತರ 10 ಗಂಟೆಗೆ ಹೆಚ್.ಎ.ಎಲ್ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಬೆಳಗಾವಿಗೆ ತೆರಳಿದರು.

ಬೆಳಗಾವಿ ಪ್ರಯಾಣ...

ಏಪ್ರಿಲ್ 14 ರಂದು 2 ಗಂಟೆಗೆ ಮೂಡಲಗಿಯಲ್ಲಿ ಬೆಳಗಾವಿ ಗ್ರಾಮಾಂತರ ಬಿಜೆಪಿ ಆಯೋಜಿಸಿದ್ದ ಅರಭಾವಿ ಕ್ಷೇತ್ರದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಸಿಎಂ ಭಾಗಿಯಾದರು. ಆಗಲೇ ಸಣ್ಣಪ್ರಮಾಣದ ಜ್ವರ ಕಾಣಿಸಿಕೊಂಡ ಕಾರಣ ಖಾಸಗಿ ಹೋಟೆಲ್​ಗೆ ಮರಳಿ ಸಿಎಂ ವಿಶ್ರಾಂತಿ ಪಡೆದುಕೊಂಡರು. ನಂತರ ಗೋಕಾಕ್​ನಲ್ಲಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗಿಯಾದರು. ಅಂದು ರಾತ್ರಿ ಬೆಳಗಾವಿಯಲ್ಲಿ ವಾಸ್ತವ್ಯ ಹೂಡಿದರು.

ಏಪ್ರಿಲ್ಬ15 ರ ಬೆಳಗ್ಗೆ ಬೆಳಗಾವಿ ನಗರ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ ಭಾಗಿಯಾದರು. ಆಗಲೂ ಜ್ವರ ಕಾಣಿಸಿಕೊಂಡ ನಂತರ ಹೋಟೆಲ್​ಗೆ ಮರಳಿ ವಿಶ್ರಾಂತಿ ಪಡೆದುಕೊಂಡರು. ನಂತರ ಉಳಿದ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳದೆ ರಾತ್ರಿ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.

ಬೆಂಗಳೂರಿಗೆ ಪ್ರಯಾಣ...

ನಿನ್ನೆ ಬೆಳಗ್ಗೆ ಪುತ್ರ ವಿಜಯೇಂದ್ರ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದು, ಉಪ‌ಚುನಾವಣೆ ಕುರಿತು ಕೆಲಕಾಲ ಮಾತುಕತೆ ನಡೆಸಿದ್ದಾರೆ. ನಂತರ 9.30 ಕ್ಕೆ ಅಧಿಕಾರಿಗಳ ತುರ್ತು ಸಭೆ ನಡೆಸಿದ ಸಿಎಂ ಆಯಾಸದ ಕಾರಣ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದು, ಕೊರೊನಾ ಪರೀಕ್ಷೆ ವೇಳೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಕಳೆದ ಆರು ದಿನಗಳಲ್ಲಿ ಸಿಎಂ ಯಡಿಯೂರಪ್ಪ ಸಂಪರ್ಕಕ್ಕೆ ಬಂದವರು ಲೆಕ್ಕಕ್ಕೇ ಇಲ್ಲದಷ್ಟು ಜನರಿದ್ದಾರೆ. ಸಂಪುಟ ಸಹೋದ್ಯೋಗಿಗಳು, ಅಧಿಕಾರಿಗಳು, ಭದ್ರತಾ ಸಿಬ್ಬಂದಿ, ಆಪ್ತ ಸಹಾಯಕರು, ವಾಹನ ಚಾಲಕರು, ಸ್ಥಳೀಯ ಮುಖಂಡರು, ಅಭ್ಯರ್ಥಿಗಳು, ಕಾರ್ಯಕರ್ತರು ಹೀಗ ಪಟ್ಟಿ ಬಹಳ ದೊಡ್ಡದಿದ್ದು, ಸಿಎಂ ಸಂಪರ್ಕಿತರಲ್ಲಿ ಆತಂಕ ಸೃಷ್ಟಿಸಿದೆ.

ABOUT THE AUTHOR

...view details