ಬೆಂಗಳೂರು:ಕೋವಿಡ್-19 ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆರೋಗ್ಯ ಸ್ಥಿರವಾಗಿದ್ದು, ಉತ್ಸಾಹದಿಂದಲೇ ಆಸ್ಪತ್ರೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ದಿನ ಪತ್ರಿಕೆಗಳು ಹಾುಗೂ ಪುಸ್ತಕ ಓದುವ ಜೊತೆಗೆ ಆಸ್ಪತ್ರೆಯಿಂದಲೇ ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡುತ್ತಿದ್ದಾರೆ.
ಇಂದು ಬೆಳಗ್ಗೆ ಮಣಿಪಾಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಮುಗಿದ ನಂತರ ದಿನಪತ್ರಿಕೆಗಳ ಮೇಲೆ ಕಣ್ಣಾಡಿಸಿದರು. ನಂತರ ತಮ್ಮೊಂದಿಗೆ ಆಸ್ಪತ್ರೆಗೆ ಕೊಂಡೊಯ್ದಿರುವ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಬರೆದಿರುವ "ಗಾಂಧಿ ಆತ್ಮಕಥೆ" ಮತ್ತು "ನನ್ನ ಸತ್ಯ ಶೋಧನೆಯ ಕಥೆ" ಪುಸ್ತಕವನ್ನು ಓದುತ್ತಿದ್ದಾರೆ. ಅದರ ಜೊತೆಗೆ ರವಿ ಬೆಳಗೆರೆ ಬರೆದಿರುವ "ಹಿಮಾಲಯನ್ ಬ್ಲಂಡರ್" ಹಾಗೂ "ಶ್ರೀಕೃಷ್ಣ ಕಥಾಮಂಜರಿ" ಪುಸ್ತಕಗಳಲ್ಲಿ "ಗಾಂಧಿ ಆತ್ಮಕಥೆ" ಕೈಗೆತ್ತಿಕೊಂಡಿದ್ದಾರೆ. ಬಹುತೇಕ ಸಮಯವನ್ನು ಅವರು ಪುಸ್ತಕ ಓದುವುದರಲ್ಲೇ ಕಳೆಯುತ್ತಿದ್ದಾರೆ.