ಕರ್ನಾಟಕ

karnataka

ETV Bharat / state

ಹರಿಯಾಣ-ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚನೆ ನಿಶ್ಚಿತ: ಸಿಎಂ ಯಡಿಯೂರಪ್ಪ

ಹರಿಯಾಣ-ಮಹಾರಾಷ್ಟ್ರ ಚುನಾವಣಾ ಫಲಿತಾಂಶದ ಬಗ್ಗೆ ಬಿಎಸ್​ವೈ ಪ್ರತಿಕ್ರಿಯಿಸಿ, ಮಹಾರಾಷ್ಟ್ರದಲ್ಲಿ ಶಿವಸೇನೆ ಜೊತೆಗೂಡಿ ಸರ್ಕಾರ ರಚನೆ ಮಾಡ್ತೀವಿ. ಹರಿಯಾಣದಲ್ಲೂ ಕೂಡ ಪಕ್ಷೇತರರನ್ನು ಕರೆದು ಸರ್ಕಾರ ರಚನೆ ಮಾಡ್ತೇವೆ ಎಂದು ಹೇಳಿದ್ದಾರೆ.

ಯಡಿಯೂರಪ್ಪ

By

Published : Oct 24, 2019, 4:16 PM IST

ಬೆಂಗಳೂರು:ಹರಿಯಾಣ, ಮಹಾರಾಷ್ಟ್ರ ಚುನಾವಣಾ ಫಲಿತಾಂಶದ ಕುರಿತು ನಗರದಲ್ಲಿ ಪ್ರತಿಕ್ರಿಯೆ ನೀಡಿದ ಸಿಎಂ ಯಡಿಯೂರಪ್ಪ, ಹರಿಯಾಣದಲ್ಲಿ ಪಕ್ಷೇತರರನ್ನು ಕರೆದುಕೊಂಡು ಸರ್ಕಾರ ರಚನೆ ಮಾಡೋದು ನಿಶ್ಚಿತ ಎಂದರು.

ಸಿಎಂ ಯಡಿಯೂರಪ್ಪ

ಎಲ್ಲರೂ ಊಹೆ ಮಾಡಿದಂತೆ ಎರಡೂ ಕಡೆ ಬಿಜೆಪಿ ಅಧಿಕಾರಕ್ಕೆ ಬರ್ತಿದೆ. ಬೇರೆ ಬೇರೆ ಕಾರಣಕ್ಕಾಗಿ ಸೀಟು ಕಡಿಮೆ ಬಂದು ಕೆಲವು ಕಡೆ ವ್ಯತ್ಯಾಸ ಆಗಿರಬಹುದು. ಚುನಾವಣೆಗಳಲ್ಲಿ ಕಾಂಗ್ರೆಸ್ ನೆಲಕಚ್ಚುತ್ತಿದೆ. ದೇಶದಲ್ಲಿ ಕಾಂಗ್ರೆಸ್ ನೆಲಕಚ್ಚುತ್ತಿರೋದು ಸಾಬೀತು ಆಗ್ತಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಜೊತೆಗೂಡಿ ಸರ್ಕಾರ ರಚನೆ ಮಾಡ್ತೀವಿ. ಹರಿಯಾಣದಲ್ಲೂ ಕೂಡ ಪಕ್ಷೇತರರನ್ನು ಕರೆದು ಸರ್ಕಾರ ರಚನೆ ಮಾಡ್ತೇವೆ. ಈ ಚುನಾವಣಾ ಫಲಿತಾಂಶ ರಾಜ್ಯದ ಉಪ ಚುನಾವಣೆಗೆ ಅನುಕೂಲಕರವಾಗಲಿದೆ.15ಕ್ಕೆ 15 ಕ್ಷೇತ್ರಗಳ ಗೆಲುವಿಗೆ ತುಂಬಾ ಅನುಕೂಲ ಆಗಲಿದೆ ಎಂದರು.

ಇನ್ನು ಮಹಾರಾಷ್ಟ್ರ ಪ್ರಚಾರ ವೇಳೆ ಕರ್ನಾಟಕದಿಂದ ನೀರು ಕೊಡುವ ಬಗ್ಗೆ ಸಿಎಂ ಪ್ರತಿಕ್ರಿಯಿಸಿ, ನಾಲ್ಕು ಟಿಎಂಸಿ ನೀರನ್ನು ನಾನು ನೀಡಬೇಕೆಂದು ಅಗ್ರಿಮೆಂಟ್ ಮಾಡಿಕೊಳ್ಳುವುದಾಗಿ ಮಹಾರಾಷ್ಟ್ರ ಸಿಎಂ ಜೊತೆ ಮಾತುಕತೆಯಾಗಿದೆ. ಅವರು ನಮಗೆ ನಾಲ್ಕು ಟಿಎಂಸಿ ನೀರನ್ನು ಮೊದಲು ಕೊಡಬೇಕು. ಆ ನಂತರ ನಾವು ಕೊಡ್ತೀವಿ ಅಂದಿದ್ದೆ ನಾನು. ನನ್ನ ನೀರಿನ ಹೇಳಿಕೆ ಬಗ್ಗೆ ಮಾತಾಡೋ ಪ್ರತಿಪಕ್ಷಗಳು ನೆಲಕಚ್ಚುತ್ತಿದ್ದಾರೆ, ಚುನಾವಣೆಯಲ್ಲಿ ಅವರ ಅಡ್ರೆಸ್ ಇಲ್ಲ. ಪ್ರತಿಪಕ್ಷ ಮನೆಗೆ ಹೊಗುತ್ತಿದೆ. ಕಾಂಗ್ರೆಸ್ ಪಕ್ಷ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎಂದರು.

ಇನ್ನು ಮಾಜಿ ಸಚಿವ ಕೃಷ್ಣಭೈರೇಗೌಡ ಪ್ರತಿಕ್ರಿಯಿಸಿ, ನಿರೀಕ್ಷೆಗಿಂತ ಉತ್ತಮ ಫಲಿತಾಂಶ ಬಂದಿದೆ. ಸಮೀಕ್ಷೆಗಳ ನಿರೀಕ್ಷೆಗೆ ಮೀರಿ ಫಲಿತಾಂಶ ಬಂದಿದೆ. ಬಿಜೆಪಿ ವಿಚಾರದಲ್ಲಿ ಜನರ ಮನಸ್ಥಿತಿ ಬದಲಾಗ್ತಿದೆ. ಜನ ಬದಲಾವಣೆ ಬಯಸ್ತಿದ್ದಾರೆ. ಎರಡೂ ರಾಜ್ಯಗಳಲ್ಲೂ ಕಾಂಗ್ರೆಸ್ ಇನ್ನಷ್ಟು ಸ್ಥಾನಗಳನ್ನು ಪಡೆಯಬಹುದಿತ್ತು. ಎಲ್ಲೋ ಒಂದು ಕಡೆ ಕಾಂಗ್ರೆಸ್ ಸಹ ಎಡವಿದೆ. ಮಾಧ್ಯಮಗಳ ಸಮೀಕ್ಷೆಯಿಂದ ಕಾಂಗ್ರೆಸ್ ಎಡವಿದೆ. ಮಾಧ್ಯಮ ಸಮೀಕ್ಷೆ ನೋಡಿ ಅದೇ ಜನರ ಮನಸ್ಥಿತಿ ಇರಬಹುದು ಅಂತ ನಾವು ಅನ್ಕೊಂಡಿದ್ವಿ. ಆದ್ರೂ ಸಹ ಜನ ಬದಲಾವಣೆ ಬಯಸ್ತಿರೋದು ಸ್ಪಷ್ಟ. ಇನ್ನಾದ್ರೂ ಬಿಜೆಪಿ ಜನರ ಭಾವನೆ ಅರ್ಥ ಮಾಡಿಕೊಂಡು ಆಡಳಿತ ನಡೆಸಲಿ ಎಂದರು.

ABOUT THE AUTHOR

...view details