ಕರ್ನಾಟಕ

karnataka

ETV Bharat / state

ಸ್ವಾತಂತ್ರ್ಯ ದಿನಗಳಲ್ಲಿ ಬೆಂಗಾಲಿ ಸಮಾಜದವರ ಪಾತ್ರ ಮರೆಯುವಂತಿಲ್ಲ: ಸಿಎಂ - ಸಿಎಂ ಯಡಿಯೂರಪ್ಪ ಲೆಟೆಸ್ಟ್ ನ್ಯೂಸ್​

ನಗರದ ಗಾಂಧಿಭವನದಲ್ಲಿ ನಡೆದ ಬೆಂಗಾಲಿ ಸಮ್ಮೇಳನದಲ್ಲಿ ಸಿಎಂ ಯಡಿಯೂರಪ್ಪ ಭಾಗಿ. ಸ್ವಾಂತ್ರತ್ಯ ದಿನಗಳಲ್ಲಿ ಬೆಂಗಾಲಿ ಜನರ ಪಾತ್ರ ಮಹತ್ವದ್ದಾಗಿತ್ತು ಎಂದು ಸಿಎಂ ಶ್ಲಾಘನೆ.

ಸಿಎಂ ಯಡಿಯೂರಪ್ಪ
CM Yeddyurappa

By

Published : Dec 14, 2019, 8:15 PM IST

ಬೆಂಗಳೂರು: ವಿವಿಧ ಸಮುದಾಯಗಳ ತವರೂರು ನಮ್ಮ‌ ಬೆಂಗಳೂರು. ಅದೆಷ್ಟೋ ಸಮುದಾಯಗಳು ತಮ್ಮ ಸಂಸ್ಕೃತಿ, ಆಚರಣೆಯನ್ನ‌‌ ನಗರದ ಜನತೆಗೆ ಪರಿಚಯಿಸಿವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.

ಮುಖ್ಯಮಂತ್ರಿ ಯಡಿಯೂರಪ್ಪ

ನಗರದ ಗಾಂಧಿಭವನದಲ್ಲಿ ನಡೆದ ಬೆಂಗಾಲಿ ಸಮ್ಮೇಳನದಲ್ಲಿ ಮಾತಾನಾಡಿದ ಅವರು, ಸ್ವಾತಂತ್ರ್ಯ ದಿನಗಳಲ್ಲಿ ಬೆಂಗಾಲಿ ಸಮುದಾಯದವರ ಪಾತ್ರ ಇಂದಿಗೂ ಮರೆಯುವಂತಿಲ್ಲ. ಅಂದಾಜು 13 ಲಕ್ಷ ಜನ ಬೆಂಗಾಲಿಯವರೇ ಇದ್ದಾರೆ. ಸುಮಾರು 120 ಬೆಂಗಾಲಿ ಅಸೋಸಿಯೇಷನ್​ಗಳು ನಗರದಲ್ಲಿವೆ. ಅವರ ಸಾಮಾಜಿಕ ಕಾರ್ಯಕ್ಕೆ ಎಂದಿಗೂ ನಮ್ಮ ಬೆಂಬಲ ಇದೆ ಎಂದರು.

ಬಳಿಕ ಸಂಸದ ಪಿ .ಸಿ.ಮೋಹನ್​ ಮಾತನಾಡಿ, ಈ ಮೊದಲು ಎರಡು ಕಡೆ ಮಾತ್ರ ದುರ್ಗಾ ಪೂಜೆ ಅದ್ಧೂರಿಯಾಗಿ ನಡೆಯುವುದನ್ನು ನೋಡುತ್ತಿದ್ದೆವು. ಆದರೆ‌ ಈಗ 120ಕ್ಕೂ ಹೆಚ್ಚು ಕಡೆ ದುರ್ಗಾ ಪೂಜೆ ಆಚರಿಸಲಾಗುತ್ತಿದ್ದು, ಇದು ಬಹಳ ಸಂತದ ಸಂಗತಿಯಾಗಿದೆ. ತಮ್ಮ ಸಮಾಜದಿಂದ‌ ಒಳ್ಳೆ ಕಾರ್ಯಕ್ರಮ ಮಾಡಿಕೊಂಡು ಬಂದಿದ್ದೀರಿ, ಇದನ್ನು ಹೀಗೆ ಮುಂದುವರೆಸಿ ಎಂದು ಮನವಿ ಮಾಡಿದರು.

ABOUT THE AUTHOR

...view details