ಕರ್ನಾಟಕ

karnataka

ETV Bharat / state

ರಿಲ್ಯಾಕ್ಸ್ ಮೂಡ್​ನಲ್ಲಿ ಸಿಎಂ ಯಡಿಯೂರಪ್ಪ: ಜನರೊಂದಿಗೆ ಸೆಲ್ಫಿಗೆ ಪೋಸ್​ - ಫುಲ್ ರಿಲ್ಯಾಕ್ಸ್ ಮೂಡ್​ನಲ್ಲಿ ಸಿಎಂ ಲೆಟೆಸ್ಟ್ ನ್ಯೂಸ್

ರಾಜ್ಯದಲ್ಲಿ ನಡೆದ ಉಪ ಚುನಾವಣಾ ಪ್ರಚಾರದಲ್ಲಿ ಕಾರ್ಯನಿರತರಾಗಿದ್ದ ಸಿಎಂ ಯಡಿಯೂರಪ್ಪ ಇಂದು ತಮ್ಮ ಮನೆಗೆ ಬಂದಿದ್ದ ಅತಿಥಿಗಳು ಹಾಗೂ ಜನರೊಂದಿಗೆ ಸೆಲ್ಫಿಗೆ ಪೋಸ್​​ ನೀಡಿದ್ರು.

ಯಡಿಯೂರಪ್ಪ
CM Yeddyurappa

By

Published : Dec 15, 2019, 4:35 PM IST

Updated : Dec 15, 2019, 4:47 PM IST

ಬೆಂಗಳೂರು: ಉಪಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಫಲಿತಾಂಶದ ನಂತರ ಖುಷಿಯಾಗಿದ್ದಾರೆ. ಅಲ್ಲದೆ, ಇಂದು ಫುಲ್ ರಿಲ್ಯಾಕ್ಸ್ ಮೂಡಿನಲ್ಲಿದ್ದು ಅವರು ಬಂದ ಅತಿಥಿಗಳ ಜೊತೆ ಸೆಲ್ಫಿಗೆ ಪೋಸ್ ಕೊಟ್ಟರು.

ಫುಲ್ ರಿಲಾಕ್ಸ್ ಮೂಡ್​ನಲ್ಲಿ ಸಿಎಂ

ಸಿಎಂ ಯಡಿಯೂರಪ್ಪನವರು ತಮ್ಮ ಧವಳಗಿರಿ ನಿವಾಸದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ವೇಳೆ ಬಂದಂತಹ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಬಳಿಕ ಕೆಲ ಅರ್ಜಿಗಳಿಗೆ ಸಂಬಂಧಿಸಿದಂತೆ ಕೂಡಲೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜನತಾ ದರ್ಶನ ಮುಗಿದ ಬಳಿಕ ನಿವಾಸಕ್ಕೆ ತೆರಳಲು ಮುಂದಾದ ಬಿಎಸ್​ವೈ ಜೊತೆ ಸೆಲ್ಫಿ ತೆಗೆಸಿಕೊಳ್ಳುವ ಕೆಲವರು ಇಂಗಿತ ವ್ಯಕ್ತಪಡಿಸಿದರು. ಇದಕ್ಕೆ ಸ್ಪಂದಿಸಿದ ಸಿಎಂ ಕೆಲಕಾಲ ನಿವಾಸ ಮುಂಭಾಗದಲ್ಲಿದ್ದು, ಜನರೊಂದಿಗೆ ಸೆಲ್ಫಿಗೆ ಪೋಸ್​ ಕೊಟ್ಟರು. ಹಾಗೆಯೇ ಸಾರ್ವಜನಿಕರು ಕೂಡ ಸಿಎಂ ಮನೆಯ ಬಳಿ ಸೆಲ್ಫಿ ತೆಗೆದುಕೊಂಡು ಸಂತಸ ವ್ಯಕ್ತಪಡಿಸಿದರು.

Last Updated : Dec 15, 2019, 4:47 PM IST

ABOUT THE AUTHOR

...view details