ಕರ್ನಾಟಕ

karnataka

ETV Bharat / state

ಕೆಂಪೇಗೌಡರ 512 ನೇ ಜಯಂತಿ: ಬಸವೇಶ್ವರ ಪುತ್ಥಳಿ ಜೊತೆ ನಾಡಪ್ರಭುವಿನ ಪ್ರತಿಮೆ ನಿರ್ಮಾಣಕ್ಕೂ ಮನವಿ - cm yediyurappa inaugurates to kempegowda study center building,

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ನಾಡಪ್ರಭು ಕೆಂಪೇಗೌಡರ 512 ನೇ ಜಯಂತಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕೆಂಪೇಗೌಡರ ಪೋಸ್ಟಲ್ ಸ್ಟಾಂಪ್ ಬಿಡುಗಡೆ ಮತ್ತು ಕೆಂಪೇಗೌಡ ಅಧ್ಯಯನ ಕೇಂದ್ರ ಕಟ್ಟಡದ ಕಾಮಗಾರಿಗೆ ಸಿಎಂ ಯಡಿಯೂರಪ್ಪ ಚಾಲನೆ ನೀಡಿದರು.

ನಾಡಪ್ರಭು ಕೆಂಪೇಗೌಡ 512 ನೇ ಜಯಂತಿ
ನಾಡಪ್ರಭು ಕೆಂಪೇಗೌಡ 512 ನೇ ಜಯಂತಿ

By

Published : Jun 27, 2021, 1:44 PM IST

ಬೆಂಗಳೂರು: ವಿಧಾನಸೌಧದ ಆವರಣದಲ್ಲಿ ಬಸವೇಶ್ವರರ ಪ್ರತಿಮೆ ನಿರ್ಮಾಣಕ್ಕೆ ಸರ್ಕಾರ ಮುಂದಾಗುತ್ತಿದ್ದಂತೆ ಇದೀಗ ಕೆಂಪೇಗೌಡರ ಪ್ರತಿಮೆಯನ್ನು ನಿರ್ಮಿಸಬೇಕು ಎನ್ನುವ ಕೂಗು ಒಕ್ಕಲಿಗ ಸ್ವಾಮೀಜಿಗಳಿಂದ ಕೇಳಿಬಂದಿದ್ದು, ಸಿಎಂ ಯಡಿಯೂರಪ್ಪ ಸಮ್ಮುಖದಲ್ಲೇ ಬೇಡಿಕೆ ಮಂಡಿಸಿದ್ದಾರೆ.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ನಾಡಪ್ರಭು ಕೆಂಪೇಗೌಡ 512 ನೇ ಜಯಂತಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕೆಂಪೇಗೌಡರ ಪೋಸ್ಟಲ್ ಸ್ಟಾಂಪ್ ಬಿಡುಗಡೆ ಮತ್ತು ಕೆಂಪೇಗೌಡ ಅಧ್ಯಯನ ಕೇಂದ್ರ ಕಟ್ಟಡದ ಕಾಮಗಾರಿಗೆ ಸಿಎಂ ಯಡಿಯೂರಪ್ಪ ಚಾಲನೆ ನೀಡಿದರು.

ನಂತರ ಮಾತನಾಡಿದ ಸಿಎಂ, ಕೆಂಪೇಗೌಡರ ಅಧ್ಯಯನ ಪೀಠ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಕೆಂಪೇಗೌಡರು ನಾಡಿನ ಅಭಿವೃದ್ಧಿಗೆ ಹಲವಾರು ಕೊಡುಗೆ ನೀಡಿದ್ದಾರೆ. ಶಿಕ್ಷಣ, ಆರೋಗ್ಯಕ್ಕೆ ಅವರ ಕೊಡುಗೆ ಹಾಸುಹೊಕ್ಕಾಗಿದೆ. 5 ಶತಮಾನಗಳ ಹಿಂದೆ ಈ ನಗರ ನಿರ್ಮಾಣವಾಗಿತ್ತು‌. 108 ಅಡಿ ಕೆಂಪೇಗೌಡರ ಪ್ರತಿಮೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಮೂಲ ಸೌಕರ್ಯಕ್ಕೆ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಬೆಂಗಳೂರಿನ ಉಪ ನಗರಕ್ಕೆ ಪೆರಿಪೆರಲ್ ರೈಲ್ವೆ ನಿರ್ಮಾಣ ಕಾರ್ಯ ಮಾಡುತ್ತಿದೆ. ಬೆಂಗಳೂರನ್ನು ಮಾದರಿ ನಗರವನ್ನಾಗಿ ಮಾಡಲಾಗುತ್ತದೆ. ಕೆಂಪೇಗೌಡ ಅಧ್ಯಯನ ಪೀಠದಿಂದ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ ಎಂದರು.

ಡಿಸಿಎಂ ಡಾ. ಅಶ್ವಥ್ ನಾರಾಯಣ್ ಮಾತನಾಡಿ ಮುಂದಿನ ಫೆಬ್ರವರಿ ಅಥವಾ ಮಾರ್ಚ್ ನಲ್ಲಿ ಇದರ ಲೋಕಾರ್ಪಣೆ ಆಗಲಿದೆ. ಕೆಂಪಾಪುರದಲ್ಲೂ ಕೆಂಪೇಗೌಡರ ವೀರ ಸಮಾಧಿಯನ್ನು ಅಭಿವೃದ್ಧಿ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಇಂದು ನಾಡಪ್ರಭು ಕೆಂಪೇಗೌಡರ ಜಯಂತಿ ಮುಖ್ಯಮಂತ್ರಿಗಳ ಆಶೀರ್ವಾದದೊಂದಿಗೆ ಕಂಚಿನ ಪುತ್ಥಳಿ ಸಿದ್ಧವಾಗುತ್ತಿದೆ, ಬಹಳ ಅರ್ಥಪೂರ್ಣವಾಗಿ ಆಚರಣೆ ಮಾಡಲಾಗುತ್ತಿದೆ. 2008 ರಲ್ಲಿ 2019 ರಲ್ಲಿ ಅಧಿಕಾರ ವಹಿಸಿದಾಗಲು ಪಾರಂಪರಿಕ ಕಟ್ಟಡಗಳನ್ನು ಅಭಿವೃದ್ಧಿಗೊಳಿಸಲು ನಿರ್ಧಾರ ಮಾಡಿದ್ದಾರೆ. 2019 ರಲ್ಲಿ ಅಧಿಕಾರ ವಹಿಸಿದಾಗ ಮೊದಲು ಮಾಡಿದ ಕೆಲಸ ಅವರ ಪುತ್ಥಳಿ ನಿರ್ಮಾಣ ಕಾರ್ಯ, 23 ಎಕರೆ ಜಾಗದಲ್ಲಿ ನಿರ್ಮಾಣ ಮಾಡಲು ನಿರ್ಧಾರ ಮಾಡಿದ್ದಾರೆ ಎಂದರು.

ಬೆಂಗಳೂರು ಬೇರೆ ಬೇರೆ ಹೆಸರು ಪಡೆದಿದೆ ಕೆಂಪೇಗೌಡ ಜಯಂತಿಯನ್ನ ಬೆಂಗಳೂರು ಹಬ್ಬವಾಗಿ ಆಚರಣೆ ಮಾಡಬೇಕು. ಈ ಹಬ್ಬ ಮಾಡಲು ಕಳೆದ ಎರಡು ವರ್ಷಗಳ ಹಿಂದೆಯೇ ಚಿಂತನೆ ನಡೆದಿತ್ತು. ಆದರೆ ಕೊರೊನಾದಿಂದಾಗಿ ತಡೆಯಲಾಗಿತ್ತು ಮುಂದಿನ ದಿನಗಳಲ್ಲಿ ಸೋಂಕು ಕಡಿಮೆಯಾದ ನಂತರ ಆಚರಣೆ ಮಾಡಬೇಕು. ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ಹಲವಾರು ಕೆಲಸಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.

ಬಸವ ಪ್ರತಿಮೆ ಜೊತೆ ಕೆಂಪೇಗೌಡ ಪ್ರತಿಮೆ ಸ್ಥಾಪಿಸಿ:

ನಂಜಾವಧೂತ ಸ್ವಾಮೀಜಿ ಮಾತನಾಡಿ ವಿಧಾನಸೌಧದ ಆವರಣದಲ್ಲಿ ನಾಡಿಗೆ ಸಮಾನತೆಯ ಸಂದೇಶ ಸಾರಿದ ವಿಶ್ವಗುರು ಬಸವೇಶ್ವರರ ಪ್ರತಿಮೆ ನಿರ್ಮಿಸುವ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿರ್ಧಾರ ಸ್ವಾಗತಾರ್ಹವಾಗಿದ್ದು. ಅದೇ ರೀತಿ ಕೆಂಪೇಗೌಡರ ಪ್ರತಿಮೆಯನ್ನೂ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಇದೇ ವೇಳೆ ನಮ್ಮ ಮೆಟ್ರೋಗೆ ಕೆಂಪೇಗೌಡ ಮೆಟ್ರೋ ಅಥವಾ ನಮ್ಮ ಕೆಂಪೇಗೌಡ ಮೆಟ್ರೋ ಎಂದು ನಾಮಕರಣ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಮನವಿ ಮಾಡಿದರು.

ಸಿಎಂ ಯಡಿಯೂರಪ್ಪ ಅವರ ಮಾರ್ಗದರ್ಶನಲ್ಲಿ ಕೆಂಪೇಗೌಡ ಪುತ್ಥಳಿ, ಬೆಂಗಳೂರು ವಿವಿಯಲ್ಲಿ ಅಧ್ಯಯನ ಪೀಠ ಮಾಡುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸುತ್ತೇನೆ. ಏರ್ ಪೋರ್ಟ್ ಬಳಿ ಕೆಂಪೇಗೌಡ ಪುತ್ಥಳಿ ನಿರ್ಮಾಣಕ್ಕೆ ಕಾರಣರಾದವರು ಅಶ್ವತ್ಥ್ ನಾರಾಯಣ್ ಅವರು. 2008ರಲ್ಲಿ ಅಶೋಕ್ ಅವರನ್ನ ಕೇಳಿಕೊಂಡಿದ್ದೆವು. ಕೆಂಪೇಗೌಡರ ಜಯಂತಿ ಮಾಡುವುದಕ್ಕೆ ಆಗ ಸಿಎಂ ಯಡಿಯೂರಪ್ಪ ಅವರು ಪ್ರತಿ ಬಿಬಿಎಂಪಿ ವಾರ್ಡ್​ನಲ್ಲಿ ಆಚರಿಸಲು ಹೇಳಿದ್ದರು.

ನಂತರ ಸಿದ್ದರಾಮಯ್ಯ ಅವರು ರಾಜ್ಯವ್ಯಾಪಿ ಮಾಡಲು ಅನುವು ಮಾಡಿಕೊಟ್ಟರು. ಕುಮಾರಸ್ವಾಮಿ ಅವರು ಕೂಡ ಇದರಲ್ಲಿ ಬಹಳ ದೊಡ್ಡ ಹೆಜ್ಜೆ ಇಟ್ಟಿದ್ದರು‌. ಕೆಂಪೇಗೌಡರ ಹೆಸರನ್ನು ಬೆಂಗಳೂರಿನ ಏರ್ ಪೋರ್ಟ್ ಗೆ ಇಡುವುದಕ್ಕೆ ಅನಂತ್ ಕುಮಾರ್ ಕಾರಣ. ಎಲ್ಲಾ ಅಡೆ ತಡೆಗಳನ್ನು ನಿವಾರಣೆ ಮಾಡಲು ಕೂಡ ಅನಂತ್ ಕುಮಾರ್ ಕಾರಣ. ಯಡಿಯೂರಪ್ಪ ಅವರು ಮಾಡಿರುವುದು ಸಹ ಈ ನಾಡಿನ ಇತಿಹಾಸದಲ್ಲಿ ಉಳಿಯುತ್ತದೆ ಎಂದರು.

ಇದೀಗ ಸಮುದಾಯದ ಅಭಿವೃದ್ಧಿಗೆ ಒಕ್ಕಲಿಗೆ ಅಭಿವೃದ್ಧಿ ಪ್ರಾಧಿಕಾರ ರಚಿಸಿದ್ದು, ಅಗತ್ಯ ಅನುದಾನ ಬಿಡುಗಡೆ ಮಾಡಬೇಕು, ಸವಲತ್ತುಗಳನ್ನು ಕಲ್ಪಿಸಿ ಪ್ರಾಧಿಕಾರ ಕಾರ್ಯಾರಂಭ ಮಾಡಲು ಅನುವು ಮಾಡಿಕೊಡಬೇಕು ಹಾಗು ಸ್ನಾತಕ ಪದವಿ ಪಠ್ಯದಲ್ಲಿ ಕೆಂಪೇಗೌಡರ ಪಠ್ಯ ಸೇರಿಸಬೇಕು ಎಂದು ಮನವಿ ಮಾಡಿದರು.

ಸಿದ್ದಗಂಗಾ ಶ್ರೀಗಳು ಮಾತನಾಡಿ ಎಲ್ಲ ಸಮುದಾಯಗಳಿಗೂ ಆದ್ಯತೆ ನೀಡಿ ಸಮಾನವಾಗಿ ತೆಗೆದುಕೊಂಡು ಹೋಗುವ ಕೆಲಸವನ್ನು ಸಿಎಂ ಯಡಿಯೂರಪ್ಪ ಮಾಡುತ್ತಿದ್ದಾರೆ, ದೊಡ್ಡ ಸವಾಲನ್ನು ನಿರ್ವಹಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬೆಂಗಳೂರು ಇಲ್ಲದೆ ಕೆಂಪೇಗೌಡರು ಇಲ್ಲ ಕೆಂಪೇಗೌಡರು ಇಲ್ಲದೆ ಬೆಂಗಳೂರು ಇಲ್ಲ‌. ಇಂದು ಬೆಂಗಳೂರು ಬೃಹತ್ತಾಗಿ‌ ಬೆಳೆದಿದೆ ಅಂದೇ ಕೆಂಪೇಗೌಡರು ಕನಸು ಕಂಡಿದ್ದರು ಈ ನಾಡು ಹೇಗೆ ಇರಬೇಕು ಎಂದು ಕೃಷಿ, ಕೆರೆ , ಪ್ರಕೃತಿಗೆ ಕೊಡುಗೆ, ದೇವಸ್ಥಾನಗಳ ನಿರ್ಮಾಣ ಹೀಗೆ ಅವರ ಕೊಡುಗೆ ಎಂದೆಂದೂ ಶಾಶ್ವತ. ಹಲವಾರು ಕಾಯಕಗಳ ಪೇಟೆ ನಿರ್ಮಾಣ ಮಾಡಿದ್ದರು ಅವರ ಎಲ್ಲಾ ಕೆಲಸ ನಮ್ಮ ಮುಂದೆ ಇದೆ. ಕರ್ನಾಟಕ ಸರ್ಕಾರ ಅಂತವರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂದು ಬಣ್ಣಿಸಿದರು.

ಆದಿಚುಂಚನಗಿರಿ ನಿರ್ಮಲಾನಂದ‌ ಶ್ರೀ ಆಶೀರ್ವಚನ ನೀಡುತ್ತಾ, ಆಡಳಿತ ಚುಕ್ಕಾಣಿ ಹಿಡಿದಾಗ ಹೇಗೆ ಅಧಿಕಾರ ಮಾಡಬೇಕು ಅನ್ನುವುದನ್ನು ಯಡಿಯೂರಪ್ಪ ತೋರಿಸಿಕೊಟ್ಟಿದ್ದಾರೆ. ಸರ್ವ ಜನಾಂಗ, ಸರ್ವ ಧರ್ಮಗಳಿಗೆ ಕೆಲಸ ಮಾಡುತ್ತಿದ್ದಾರೆ. ಅವರ ಬೆಂಬಲಕ್ಕೆ ಯಾರು ಇದ್ದಾರೆ ಎಂದು ಗೊತ್ತಾಗಿದೆ ಎಂದು ಯಡಿಯೂರಪ್ಪ ಕಾರ್ಯವನ್ನು ಹಾಡಿ ಹೊಗಳಿದರು.

ಕೋವಿಡ್ ಸಂದರ್ಭದಲ್ಲಿ ಸೀಮಿತವಾಗಿ ಕೆಲಸ ವಾಗುತ್ತಿದೆ ಕೋವಿಡ್ ಸಂಧರ್ಭದಲ್ಲಿ ಡೆಲ್ಟಾ ವೈರಸ್ ಕೂಡ ಬರ್ತಿದೆ ಮೂರನೇ ಅಲೆ ಕೂಡ ಬಹಳ ವೇಗದಲ್ಲಿ ಹರಡುತ್ತೆ ಎಂದು ಹೇಳುತ್ತಿದ್ದಾರೆ ವ್ಯಾಕ್ಸಿನ್ ಕೂಡ ಮುಖ್ಯ ಎಲ್ಲರೂ ತೆಗೆದುಕೊಳ್ಳಿ , ಮಾಸ್ಕ್ ಹಾಕಿಕೊಳ್ಳಿ ಎಂದರು.

ಕೊಲಂಬಸ್ ಅಮೆರಿಕಕ್ಕೆ ಹೋಗಿ ಅಲ್ಲಿಯ ಮೂಲ ನಿವಾಸಿಗಳನ್ನು ಕೊಲೆ ಮಾಡುತ್ತಿದ್ದ, ಅದೇ ಸಂದರ್ಭದಲ್ಲಿ ಕೆಂಪೇಗೌಡರು ಇಲ್ಲಿ ನಾಡನ್ನು ಕಟ್ಟುತ್ತಿದ್ದರು. ಕೆಂಪೇಗೌಡ ಹೆಸರು ಏರ್ ಪೋರ್ಟ್ ಗೆ ಇಟ್ಟರೆ ಸಾಲದು, ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಕೆಂಪೇಗೌಡ ಜಯಂತಿಯನ್ನು ಬೃಹತ್ತಾಗಿ ಆಚರಣೆ ಮಾಡಿದರು. ಕೆಂಪೇಗೌಡ ಅಧ್ಯಯನ ಸಂಸ್ಥೆ ಆಗಬೇಕು ಎಂದು ಮಾಡಲಾಗಿದೆ. ಇಂದು ಸಿಎಂ ಅದಕ್ಕೆ ಚಾಲನೆ ನೀಡಿದ್ದಾರೆ. ಕೆಂಪೇಗೌಡರು ಮನಸ್ಸುಗಳನ್ನು ಜೋಡಿಸಿದ ಪುಣ್ಯಾತ್ಮ. ಕೆಂಪೇಗೌಡರ ವಿವಿ ಆಗಬೇಕು ಎಂಬುದು ಬಹು ದಿನಗಳ ಬೇಡಿಕೆ ಇದೆ. ಸಮಸ್ತ ಸಮುದಾಯದ, ಮಠಗಳ ಆಶೀರ್ವಾದ ಸಿಎಂ ಯಡಿಯೂರಪ್ಪ ಹಾಗೂ ಅಶ್ವತ್ಥ್ ನಾರಾಯಣ್ ಅವರ ಮೇಲೆ ಇರುತ್ತದೆ ಎಂದು ಬೇಡಿಕೆ ಮಂಡಿಸಿದರು.

ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಅಶೋಕ್ ಗೈರು:

ಸರ್ಕಾರದ ವತಿಯಿಂದ ವಿಧಾನಸೌಧದಲ್ಲೇ ಆಯೋಜನೆಗೊಂಡಿರುವ ಸಿಎಂ ಉಪಸ್ಥಿತಿಯ ಕೆಂಪೇಗೌಡ ಜಯಂತಿಯ ಕಾರ್ಯಕ್ರಮಕ್ಕೆ ಸಚಿವ ಆರ್. ಅಶೋಕ್, ಸಚಿವ ಎಸ್ .ಟಿ. ಸೋಮಶೇಖರ್ ಗೈರಾಗಿದ್ದರು. ಡಿಸಿಎಂ ಅಶ್ವತ್ಥ ನಾರಾಯಣ ನೇತೃತ್ವದಲ್ಲಿ ಕೆಂಪೇಗೌಡ ಜಯಂತಿ ನಡೆಯುತ್ತಿದೆ. ಪ್ರತಿಬಾರಿ ಕೆಂಪೇಗೌಡ ಜಯಂತಿ ವೇಳೆ ಹಾಜರಿರುತ್ತಿದ್ದ ಸಚಿವ ಆರ್ ಅಶೋಕ್ ಇಂದಿನ ಪ್ರಮುಖ ಕಾರ್ಯಕ್ರಮದಲ್ಲೇ ಗೈರಾಗಿದ್ದು ಪ್ರಶ್ನೆ ಮೂಡುವಂತೆ ಮಾಡಿದ್ದಾರೆ.

ABOUT THE AUTHOR

...view details