ಬೆಂಗಳೂರು: ನೂತನ ಶಾಸಕರಾಗಿ ಪ್ರಮಾಣವಚನ ಸ್ವೀಕಾರ ಮಾಡುತ್ತಿದ್ದಂತೆ ಹೊಸಕೋಟೆ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಮುಜುಗರ ಅನುಭವಿಸುವಂತಾಯಿ.
ಪ್ರಮಾಣವಚನ ಸ್ವೀಕರಿಸಿದ ದಿನವೇ ಶರತ್ ಬಚ್ಚೇಗೌಡಗೆ ಕಹಿ ಅನುಭವ: ಅಷ್ಟಕ್ಕೂ ಅಲ್ಲಿ ಆಗಿದ್ದೇನು? - Sharath Bachegowda
ನೂತನ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದ ತಕ್ಷಣವೇ ಸಿಎಂ ಆಶೀರ್ವಾದ ಪಡೆಯಲು ಮುಂದಾಗಿದ್ದ ಶರತ್ ಬಚ್ಚೇಗೌಡರಿಗೆ ಸಿಎಂ ಯಾವುದೇ ಪ್ರತಿಕ್ರಿಯೆ ನೀಡದ ಹಿನ್ನೆಲೆ ಕಹಿ ಅನುಭವ ಆಗಿದೆ ಎಂದು ತಿಳಿದುಬಂದಿದೆ.
![ಪ್ರಮಾಣವಚನ ಸ್ವೀಕರಿಸಿದ ದಿನವೇ ಶರತ್ ಬಚ್ಚೇಗೌಡಗೆ ಕಹಿ ಅನುಭವ: ಅಷ್ಟಕ್ಕೂ ಅಲ್ಲಿ ಆಗಿದ್ದೇನು? ಶರತ್ ಬಚ್ಚೇಗೌಡ, Sharath Bachegowda](https://etvbharatimages.akamaized.net/etvbharat/prod-images/768-512-5455917-thumbnail-3x2-nin.jpg)
ಶರತ್ ಬಚ್ಚೇಗೌಡ
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಸಮಾರಂಭದಲ್ಲಿ ಶಾಸಕರಾಗಿ ಶರತ್ ಬಚ್ಚೇಗೌಡ ಪ್ರಮಾಣವಚನ ಸ್ವೀಕರಿಸಿದರು. ನಂತರ ಅಧಿಕಾರಿಗಳ ಬಳಿ ತೆರಳಿ ಕಡತದಲ್ಲಿ ಸಹಿ ಮಾಡಿದರು. ಈ ವೇಳೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಆರ್.ಅಶೋಕ್, ಸುರೇಶ್ ಕುಮಾರ್ ಅದೇ ಸ್ಥಳದಿಂದ ನಿರ್ಗಮಿಸಿದರು. ಸಿಎಂ ಬಿಎಸ್ವೈ ಅವರನ್ನು ಮಾತನಾಡಿಸಲು ಶರತ್ ಬಚ್ಚೇಗೌಡ ಮುಂದಾದರು. ಆದ್ರೆ ಅವರತ್ತ ತಿರುಗಿಯೂ ನೋಡದೆ ಸಿಎಂ ಮುಂದೆ ಸಾಗಿದರು.
ಶರತ್ ಬಚ್ಚೇಗೌಡ
ನೂತನ ಶಾಸಕರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ ತಕ್ಷಣವೇ ಸಿಎಂ ಆಶೀರ್ವಾದ ಪಡೆಯಲು ಮುಂದಾದ ಶರತ್ ಬಚ್ಚೇಗೌಡ ವಿಧಾನಸೌಧದಲ್ಲಿಯೇ ಕಹಿ ಅನುಭವ ಎದುರಿಸುವಂತಾಯ್ತು.
Last Updated : Dec 22, 2019, 12:51 PM IST