ದೇವನಹಳ್ಳಿ:ಸಿಎಂ ಯಡಿಯೂರಪ್ಪ ಇಂದು ದಾವೋಸ್‌ನಿಂದ ವಾಪಸಾಗಿದ್ದಾರೆ. ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದ್ದಾರೆ.
ಮಧ್ಯಾಹ್ನ 3.10ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿಎಂ, ಏರ್‌ಪೋರ್ಟ್‌ನಲ್ಲೇ ಸುದ್ದಿಗೋಷ್ಠಿ ನಡೆಸಿ ನಂತರ ಡಾಲರ್ಸ್ ಕಾಲೋನಿ ನಿವಾಸಕ್ಕೆ ಸಂಜೆ 4.15ಕ್ಕೆ ಆಗಮಿಸಿದರು. ವಿದೇಶ ಪ್ರವಾಸಕ್ಕೆ ತೆರಳುವಾಗ ಧರಿಸಿದ್ದ ಕೋಟ್ ಧರಿಸಿಯೇ ಹಿಂದಿರುಗಿದೋ ವಿಶೇಷವಾಗಿತ್ತು.
ದಾವೋಸ್‌ನಿಂದ ವಾಪಸಾದ ಸಿಎಂ ಯಡಿಯೂರಪ್ಪ.. ಡಿಸಿಎಂ ಅಶ್ವತ್ಥ ನಾರಾಯಣರಿಂದ ಸ್ವಾಗತ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಡಿಸಿಎಂ ಅಶ್ವತ್ಥ ನಾರಾಯಣ್, ಸಚಿವರಾದ ಪ್ರಭು ಚೌಹಾಣ್, ಸಿ ಸಿ ಪಾಟೀಲ್, ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಕೂಡ ಸಿಎಂ ಜೊತೆಯಲ್ಲಿ ನಿವಾಸಕ್ಕೆ ಆಗಮಿಸಿದ್ದಾರೆ.
ಆರು ದಿನದ ನಂತರ ಮತ್ತೆ ಸಿಎಂ ನಿವಾಸ ಧವಳಗಿರಿಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಇಂದು ಬಹುತೇಕ ಸಿಎಂ ವಿಶ್ರಾಂತಿ ಪಡೆಯಲಿದ್ದಾರೆ. ನಾಳೆ ಸಚಿವಾಕಾಂಕ್ಷಿಗಳ ಭೇಟಿ ಮಾಡಲಿದ್ದಾರೆ ಎನ್ನಲಾಗಿದೆ.