ಕರ್ನಾಟಕ

karnataka

ETV Bharat / state

ಪೂರ್ವನಿಗದಿತ ಕಾರ್ಯಕ್ರಮದಿಂದ ದೂರ ಉಳಿದು ವಿಶ್ರಾಂತಿ ಮೊರೆ ಹೋದ ಸಿಎಂ - ಸಿಎಂ ಯಡಿಯೂರಪ್ಪ ಲೇಟೆಸ್ಟ್ ನ್ಯೂಸ್

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದಿನ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಿ ತಮ್ಮ ನಿವಾಸದಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ.

ಯಡಿಯೂರಪ್ಪ
Yadiyurappa

By

Published : Mar 28, 2021, 12:34 PM IST

ಬೆಂಗಳೂರು:ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದಿನ ಎಲ್ಲಾ ಕಾರ್ಯಕ್ರಮಗಳಿಂದ ದೂರ ಉಳಿದು ನಿವಾಸದಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ.

ಪೂರ್ವಭಾವಿ ಸಭೆಗಳು ಹಾಗೂ ಅತಿಥಿಗಳ ಭೇಟಿಯನ್ನೂ ಸಿಎಂ ರದ್ದುಗೊಳಿಸಿದ್ದಾರೆ. ಬಾಗಲಗುಂಟೆಯಲ್ಲಿ ವಿಕಲಚೇತನರಿಗೆ ಸವಲತ್ತು ವಿತರಣೆ ಕಾರ್ಯಕ್ರಮಕ್ಕೆ ಸಿಎಂ ತೆರಳಬೇಕಿತ್ತು. ಆದರೆ ಕೊನೆ ಕ್ಷಣದಲ್ಲಿ ಕಾರ್ಯಕ್ರಮಕ್ಕೆ‌ ತೆರಳದಿರಲು ಸಿಎಂ ನಿರ್ಧರಿಸಿದ್ದು, ಕಾರ್ಯಕ್ರಮಕ್ಕೆ ಹೋಗದೆ ನಿವಾಸದಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ.

ಓದಿ: ಸಿಡಿ ಗಲಾಟೆ ನಡುವೆಯೇ ಬೆಳಗಾವಿಯತ್ತ ಕೆಪಿಸಿಸಿ ಅಧ್ಯಕ್ಷ ಡಿಕೆಶಿ!

ಇದರ ಜೊತೆ ಇಂದು ಬೆಳಗ್ಗೆ ಸಹಜವಾಗಿ ಕೆಲ ಆಪ್ತರು ಬಂದು ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗುತ್ತಿದ್ದರು. ಆದರೆ ಸಿಎಂ‌ ವಿಶ್ರಾಂತಿ ಮೊರೆ ಹೋದ‌ ಕಾರಣ ಆಪ್ತರು ಸಿಎಂ ನಿವಾಸದತ್ತ ಸುಳಿದಿಲ್ಲ.

ABOUT THE AUTHOR

...view details