ಬೆಂಗಳೂರು : ಲಾಕ್ಡೌನ್ನ ಎರಡನೇ ದಿನವಾದ ಇಂದು ಡಾಲರ್ಸ್ ಕಾಲೋನಿಯ ಧವಳಗಿರಿ ನಿವಾಸದಲ್ಲಿರುವ ಸಿಎಂ ಬಿ.ಎಸ್. ಯಡಿಯೂರಪ್ಪ ರಾಜ್ಯದಲ್ಲಿನ ಕೊರೊನಾ ಮುಂಜಾಗ್ರತಾ ಕ್ರಮದ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.
ನಿವಾಸದಲ್ಲೇ ಕುಳಿತು ಲಾಕ್ಡೌನ್ ಪರಿಸ್ಥಿತಿ ಅವಲೋಕಿಸುತ್ತಿರುವ ಸಿಎಂ - ಸಿಎಂ ಬಿ.ಎಸ್. ಯಡಿಯೂರಪ್ಪ ಲೇಟೆಸ್ಟ್ ನ್ಯೂಸ್
ಭಾರತದಾದ್ಯಂತ 21 ದಿನಗಳ ಕಾಲ ಲಾಕ್ಡೌನ್ ಆದೇಶ ಹೊರಡಿಸಲಾಗಿದ್ದು, ಈ ಕುರಿತಂತೆ ದಿನನಿತ್ಯದ ಮಾಹಿತಿಯಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಮನೆಯಲ್ಲೇ ಕುಳಿತು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಆರೋಗ್ಯ ಸಚಿವ ಬಿ. ಶ್ರೀರಾಮುಲು,ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ , ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳ ಜತೆ ಸದಾ ಸಂಪರ್ಕದಲ್ಲಿರುವ ಸಿಎಂ, ಕೊರೊನಾ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಭಾರತ ಲಾಕ್ಡೌನ್ ಜಾರಿ ಕುರಿತು ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆ ಕುರಿತು ಮನೆಯಲ್ಲೇ ಕುಳಿತು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಇನ್ನು ಸಿಎಂ ಭೇಟಿಗೆ ಕೊರೊನಾ ಬೆಳವಣಿಗೆಗೆ ಕುರಿತು ಮಾಹಿತಿ ನೀಡುವ ಸಚಿವರ ಹೊರತು ಎಲ್ಲರನ್ನೂ ನಿರ್ಬಂಧಿಸಲಾಗಿದೆ. ನಿವಾಸದಲ್ಲಿ ವೈದ್ಯರ ತಂಡ ನಿಯೋಜನೆ ಮಾಡಿದ್ದು, ಯಾರಾದರೂ ತುರ್ತಾಗಿ ಸಿಎಂ ನಿವಾಸದೊಳಗೆ ಪ್ರವೇಶಿಸಬೇಕು ಅಂದರೆ ಅವರನ್ನು ಪರೀಕ್ಷೆ ಮಾಡಿಯೇ ಒಳಗಡೆ ಕಳುಹಿಸಲಾಗುತ್ತದೆ. ಮುಂಜಾಗ್ರತಾ ಕ್ರಮವಾಗಿ ನಿವಾಸದ ಸಮೀಪ 108 ಆಂಬ್ಯುಲೆನ್ಸ್ ಕೂಡಾ ನಿಯೋಜನೆ ಮಾಡಲಾಗಿದೆ.
TAGGED:
CM Yadiyurappa latest news