ಕರ್ನಾಟಕ

karnataka

By

Published : Jun 1, 2020, 3:01 PM IST

ETV Bharat / state

ಅಸಮಾಧಾನಿತರ ಬಗ್ಗೆ ತುಟಿ ಬಿಚ್ಚದ ಸಿಎಂ: ನನ್ನ‌ ಕೆಲಸ ಏನೇ ಇದ್ದರೂ ಕೋವಿಡ್ ಬಗ್ಗೆ ಎಂದ ಬಿಎಸ್​​ವೈ

ಬಿಜೆಪಿಯಲ್ಲಿ ಅಸಮಾಧಾನಿತ ಶಾಸಕರ ಸಭೆ ವಿಚಾರವಾಗಿ ಪ್ರತಿಕ್ರಿಯಿಸಲು ನಿರಾಕರಿಸಿರುವ ಸಿಎಂ ಬಿಎಸ್​​ವೈ ನಾನು ಕೋವಿಡ್ ಕೆಲಸದಲ್ಲಿ ನಿರತವಾಗಿದ್ದು, ಯಾವುದೇ ಸಭೆಗಳ, ಯಾವುದೇ ನಾಯಕರುಗಳ ಬಗ್ಗೆ ನಾನು ಮಾತನಾಡಲ್ಲ ಎಂದಿದ್ದಾರೆ.

cm-yadiyurappa-pressmeet
ಸಿಎಂ ಬಿಎಸ್​​ವೈ ಹೇಳಿಕೆ

ಬೆಂಗಳೂರು: ಅಸಮಾಧಾನಿತರ ಸಭೆ ವಿಚಾರಕ್ಕೆ ಸಂಬಂಧ ಸಿಎಂ ಬಿ.ಎಸ್. ಯಡಿಯೂರಪ್ಪ, ನಾನು ಯಾವುದೇ ವಿಷಯದ ಬಗ್ಗೆ ವಿವರಣೆ ನೀಡಲ್ಲ ಎಂದು ಹೇಳಿದ್ದಾರೆ.

ಸಿಎಂ ಬಿಎಸ್​​ವೈ ಹೇಳಿಕೆ

ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರು ಯಡಿಯೂರಪ್ಪ ನಮ್ಮ ನಾಯಕರಲ್ಲ ಎನ್ನುವ ಕೆಲ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸದ ಯಡಿಯೂರಪ್ಪ, ನನ್ನ‌ ಕೆಲಸ ಏನೇ ಇದ್ದರೂ ಕೋವಿಡ್ ಬಗ್ಗೆ, ನಾನು ಕೋವಿಡ್ ಕೆಲಸದಲ್ಲಿ ಮಗ್ನನಾಗಿದ್ದೇನೆ. ಯಾವುದೇ ಸಭೆಗಳ, ಯಾವುದೇ ನಾಯಕರುಗಳ ಬಗ್ಗೆ ನಾನು ಮಾತನಾಡಲ್ಲ ಎಂದು ಸ್ಪಷ್ಟಪಡಿಸಿದರು.

ಸಿಎಂ ಸೂಚನೆ :

ಸರ್ಕಾರಿ ಆಸ್ಪತ್ರೆಗಳಲ್ಲಿ ಎಮರ್ಜೆನ್ಸಿ ಕೇಸ್​​ಗಳನ್ನು ಅಟೆಂಡ್ ಮಾಡಬೇಕು‌ ಎಂದು ಸೂಚನೆ ನೀಡುವುದಾಗಿ ಹೇಳಿದರು. ಸರ್ಕಾರಿ ಆಸ್ಪತ್ರೆಗಳಲ್ಲಿ ಅಲೆದಾಡಿಸುತ್ತಿರುವ ವಿಚಾರ ನಮ್ಮ ಗಮನಕ್ಕೂ ಬಂದಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಎಮರ್ಜೆನ್ಸಿ ಕೇಸ್ ದಾಖಲಿಸಿಕೊಳ್ಳಲು ಸೂಚನೆ ಕೊಡುತ್ತೇನೆ ಎಂದರು.

ಮಹಾರಾಷ್ಟ್ರದಿಂದ ಬರುವವರಿಗೆ ಏಳು ದಿನ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ. ಬೇರೆ ರಾಜ್ಯದಿಂದ ಬರುವವರಿಗೂ ಹೋಂ ಕ್ವಾರಂಟೈನ್ ಕೂಡ ಕಡ್ಡಾಯವಾಗಿ ಮಾಡಬೇಕು ಎಂದು ಹೇಳಿದರು. ಇಡೀ ದೇಶದಲ್ಲೇ ಆರ್ಥಿಕ ಸಮಸ್ಯೆ ಇದೆ, ಹಾಗಾಗಿ ಅನುದಾನ ಕಡಿಮೆ ಬಿಡುಗಡೆ ಆಗಿದೆ. ಮುಂದೆ ಆರ್ಥಿಕ ಸ್ಥಿತಿ ಸರಿಯಾಗುವ ವಿಶ್ವಾಸವಿದ್ದು, ಮುಂದೆ ಹೆಚ್ಚು ಅನುದಾನ ಸಿಗುವ ನಿರೀಕ್ಷೆ ಇದೆ ಎಂದರು.

For All Latest Updates

ABOUT THE AUTHOR

...view details