ಕರ್ನಾಟಕ

karnataka

ETV Bharat / state

ಡಿಸಿಎಂ ಹುದ್ದೆ ಒಪ್ಪಬೇಡಿ, ಎಲ್ಲೂ ಬಹಿರಂಗ ಹೇಳಿಕೆ ಕೊಡಬೇಡಿ: ಸವದಿಗೆ ಸಿಎಂ ಸೂಚನೆ? - ಸಚಿವ ಲಕ್ಣ್ಮಣ ಸವದಿ

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಕ್ಕೆ ಸಚಿವ ಲಕ್ಷ್ಮಣ ಸವದಿಯನ್ನು ಕರೆಸಿಕೊಂಡ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉಪ ಮುಖ್ಯಮಂತ್ರಿ ಸ್ಥಾನವನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಬಾರದು ಹಾಗೂ ಈ ಸಂಬಂಧ ಯಾವುದೇ ರೀತಿಯ ಬಹಿರಂಗ ಹೇಳಿಕೆ ನೀಡಬಾರದು ಎಂದು ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಡಿಸಿಎಂ ಹುದ್ದೆ ಒಪ್ಪಬೇಡಿ, ಎಲ್ಲೂ ಬಹರಂಗ ಹೇಳಿಕೆ ಕೊಡಬೇಡಿ: ಸವದಿಗೆ ಸಿಎಂ ಸೂಚನೆ?

By

Published : Aug 26, 2019, 3:05 PM IST

ಬೆಂಗಳೂರು:ಉಪ ಮುಖ್ಯಮಂತ್ರಿ ಸ್ಥಾನವನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಬಾರದು ಹಾಗೂ ಈ ಸಂಬಂಧ ಯಾವುದೇ ರೀತಿಯ ಬಹಿರಂಗ ಹೇಳಿಕೆ ನೀಡಬಾರದು ಎಂದು ಸಚಿವ ಲಕ್ಣ್ಮಣ ಸವದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಕ್ಕೆ ಸಚಿವ ಲಕ್ಷ್ಮಣ ಸವದಿಯನ್ನು ಕರೆಸಿಕೊಂಡ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಡಿಸಿಎಂ ಹುದ್ದೆ ಸಂಬಂಧ ಮಾತುಕತೆ ನಡೆಸಿದರು. ಸದ್ಯಕ್ಕೆ ಉಪ ಮುಖ್ಯಮಂತ್ರಿ ಸ್ಥಾನ ಒಪ್ಪಿಕೊಳ್ಳಬೇಡಿ, ಈಗಾಗಲೇ ಸಚಿವ ಸ್ಥಾನ ನೀಡಿರುವ ಕಾರಣ ಬೆಳಗಾವಿ ರಾಜಕೀಯದಲ್ಲಿ ದೊಡ್ಡ ಅಸಮಾಧಾನ ಎದ್ದಿದೆ, ಮೊದಲು ಉಮೇಶ್ ಕತ್ತಿ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು ಅನಂತರ ಬೇಕಿದ್ದರೆ ನಿಮ್ಮನ್ನ ಡಿಸಿಎಂ ಹುದ್ದೆಯಲ್ಲಿ ಕೂರಿಸುವ ಕೆಲಸ ಮಾಡುತ್ತೇನೆ ಎಂದು ಸಿಎಂ ಸವದಿಗೆ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಆರ್.ಎಸ್.ಎಸ್. ಮತ್ತು ಬಿಜೆಪಿ ಹೈಕಮಾಂಡ್ ಈಗಾಗಲೇ ನಿಮ್ಮ ಹೆಸರನ್ನು ಡಿಸಿಎಂ ಸ್ಥಾನಕ್ಕೆ ಫೈನಲ್ ಮಾಡಿದೆ. ಆದರೆ, ಈ ಸಂಬಂಧ ನೀವು ಯಾವುದೇ ಹೇಳಿಕೆ ನೀಡಬೇಡಿ, ಈಗಾಗಲೇ ಸೃಷ್ಠಿಯಾಗಿರುವ ಸಮಸ್ಯೆಯನ್ನು ಪರಿಹರಿಸಬೇಕಿದೆ. ಮೊದಲು ಆ ಕೆಲಸವಾಗಬೇಕು ಹಾಗಾಗಿ ತಕ್ಷಣಕ್ಕೆ ಡಿಸಿಎಂ ಹುದ್ದೆಗೆ ಒಪ್ಪಬೇಡಿ, ಆಹ್ವಾನ ಬಂದರೆ ಹುದ್ದೆ ನಿರಾಕರಿಸಿ ಎಂದು ಸಿಎಂ ಸ್ಪಷ್ಟ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ABOUT THE AUTHOR

...view details