ಬೆಂಗಳೂರು:ಸಿಎಂ ಯಡಿಯೂರಪ್ಪ ಇಂದು ಬಸ್ ಮೂಲಕ ನಗರ ಪ್ರದಕ್ಷಿಣೆ ನಡೆಸಿದ್ರು. ಸಾರ್ವಜನಿಕರಿಗೆ ಟ್ರಾಫಿಕ್ ಸಮಸ್ಯೆಯಾಗಬಾರದು ಎಂಬ ನಿಟ್ಟಿನಲ್ಲಿ ಸಿಎಂ ಬಿಎಸ್ವೈ ತಮ್ಮ ಸಿಟಿ ರೌಂಡ್ಸ್ ಅನ್ನು ವೋಲ್ವೋ ಬಸ್ನಲ್ಲಿ ನಡೆಸಿದ್ರು.
ಟ್ರಾಫಿಕ್ ಸಮಸ್ಯೆ ಆಗುತ್ತೆ ಅಂತಾ ಕಾರು ಬಳಸದ ಸಿಎಂ... ಆಗಿದ್ದೇನು ನೋಡಿ!
ಸಾರ್ವಜನಿಕರಿಗೆ ಟ್ರಾಫಿಕ್ ಸಮಸ್ಯೆಯಾಗಬಾರದು ಎಂಬ ಕಾರಣಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಕಾರ್ ಬಿಟ್ಟು ಬಸ್ನಲ್ಲೇ ನಗರ ಪ್ರದಕ್ಷಿಣೆ ನಡೆಸಿದ್ರು.
ಆದರೆ, ಸಿಎಂ ಯಡಿಯೂರಪ್ಪ ಬಿಎಂಟಿಸಿ ಬಸ್ನಲ್ಲಿದ್ದರೆ ಇತ್ತ ಸಿಎಂ ಹಿಂದೆ ಮುಂದೆ ಸಾಲು ಸಾಲು ಕಾರುಗಳೇ ಕಾಣುತ್ತಿದ್ದವು. ಇದರಿಂದ ಬೆಂಗಳೂರಿನ ಜನರಿಗೆ ಭಾನುವಾರವೂ ಟ್ರಾಫಿಕ್ ಬಿಸಿ ಮುಟ್ಟಿತು. ಟ್ರಾಫಿಕ್ ಸಮಸ್ಯೆ ಆಗುತ್ತೆ. ಕಾರುಗಳು ಬೇಡ ಎಂದು ಹೇಳಿದ್ದ ಸಿಎಂ ಯಡಿಯೂರಪ್ಪ ಇದ್ದ ಬಸ್ ಹಿಂದೆ ಮುಂದೆ ಕಾರುಗಳೇ ಕಂಡುಬಂದವು. ಇದರಿಂದಾಗಿ ಹೆಬ್ಬಾಳ ಫ್ಲೈ ಓವರ್ ಬಳಿ ಸಿಎಂ ಬರುತ್ತಿದ್ದ ಹಾಗೆ ಜನರಿಗಿಂತ ಕಾರುಗಳೇ ಹೆಚ್ಚಾಗಿದ್ದವು.
ಇತ್ತ ಸಿಎಂ ಸಿಟಿ ರೌಂಡ್ಸ್ ಹಿನ್ನೆಲೆ ಜೀರೋ ಟ್ರಾಫಿಕ್ ಇತ್ತು. ಹೀಗಾಗಿ ಮುಖ್ಯ ಜಂಕ್ಷನ್ಗಳಲ್ಲಿ ಸಾರ್ವಜನಿಕರ ವಾಹನಗಳೆಲ್ಲಾ ನಿಂತಲ್ಲೇ ನಿಲ್ಲುವಂತಾಯಿತು.