ಕರ್ನಾಟಕ

karnataka

ETV Bharat / state

ಖುಷಿ ದಿನೇಶ್​ ಹಾಕಿದ್ದ ಬಳೆ ಬಗ್ಗೆ ಕೇಳಿ ಅಚ್ಚರಿ ಮೂಡಿಸಿದ ಸಿಎಂ ಯಡಿಯೂರಪ್ಪ.! - CM yadiyurappa asked about the Bangale of Khushi Dinesh

ಏಕಲವ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು, ಪ್ರಶಸ್ತಿ ಪುರಸ್ಕೃತೆ ಖುಷಿ ದಿನೇಶ್ ತೊಟ್ಟಿದ್ದ ಬಳೆ ಕಂಡು ಅಚ್ಚರಿ ಪಟ್ಟ ಸನ್ನಿವೇಶ ನಡೆಯಿತು.

ಖುಷಿ ದಿನೇಶ್​ ಹಾಕಿದ್ದ ಬಳೆ ಬಗ್ಗೆ ಕೇಳಿ ಅಚ್ಚರಿ ಮೂಡಿಸಿದ ಸಿಎಂ ಯಡಿಯೂರಪ್ಪ.!
ಖುಷಿ ದಿನೇಶ್​ ಹಾಕಿದ್ದ ಬಳೆ ಬಗ್ಗೆ ಕೇಳಿ ಅಚ್ಚರಿ ಮೂಡಿಸಿದ ಸಿಎಂ ಯಡಿಯೂರಪ್ಪ.!

By

Published : Nov 2, 2020, 2:50 PM IST

Updated : Nov 2, 2020, 3:41 PM IST

ಬೆಂಗಳೂರು :ಏಕಲವ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು, ಪ್ರಶಸ್ತಿ ಪುರಸ್ಕೃತೆಗೆ ಬಳೆ ವಿಷಯಕ್ಕೆ ಹಾಸ್ಯ ಮಾಡಿದ ಪ್ರಸಂಗ ಇಂದು ನಡೆಯಿತು.

ಬಳೆ ಬಗ್ಗೆ ಕೇಳಿ ಅಚ್ಚರಿ ಮೂಡಿಸಿದ ಸಿಎಂ ಯಡಿಯೂರಪ್ಪ.!

ವಿಧಾನಸೌಧದ ಬ್ಯಾಂಕ್ವೆಟ್​ ಹಾಲ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತೆ ಖುಷಿ ದಿನೇಶ್ ಕೈಗೆ ಹಾಕಿದ್ದ ಬಳೆ ಬಗ್ಗೆ ಕೇಳಿ ಅಚ್ಚರಿ ಮೂಡಿಸಿದರು. ಹಲವು ಕ್ರೀಡಾಪಟುಗಳಿಗೆ ಏಕಲವ್ಯ ಪ್ರಶಸ್ತಿ ನೀಡಲಾಗುತ್ತಿತ್ತು. ಪುರಸ್ಕೃತರು ವೇದಿಕೆ ಮೇಲೆ ಸಾಲಾಗಿ ಬಂದು ತಮ್ಮ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಿದ್ದರು. ಆ ವೇಳೆ, ಖುಷಿ ದಿನೇಶ್ ತೊಟ್ಟಿದ್ದ ಬಳೆಯನ್ನು ಕಂಡು ಅಚ್ಚರಿ ಪಟ್ಟ ಸಿಎಂ ಬಿಎಸ್ ವೈ, ‘ಏನಮ್ಮಾ, ಎಲ್ಲಿ ಮಾಡಿಸಿಕೊಂಡೆ ಈ ಬಳಕೆಯನ್ನು? ಬಳೆನಾ ಇದು? ಆರ್ಡರ್ ಕೊಟ್ಟು ಮಾಡಿಕೊಂಡಿದ್ದಾ? ಅಥವಾ ರೆಡಿಮೇಡ್ ಖರೀದಿಸಿದ್ದಾ? ಎಷ್ಟು ಈ ಬಳೆಯ ಬೆಲೆ?’ ಎಂದು ಪ್ರಶ್ನಿಸಿದ್ದಾರೆ.

‘ಆಗ ಇಲ್ಲ ಸರ್ ಆರ್ಟಿಫಿಶಿಯಲ್’ ಎಂದು ಖುಷಿ ದಿನೇಶ್ ಹೇಳಿದ್ದಾರೆ. ‘ಚಿನ್ನದ್ದು ಹಾಕ್ಕೊಂಡು ಬರೋದಲ್ವಾ ಎಂದು ಸಿಎಂ ಹೇಳಿದಾಗ, ಸಿಎಂ ಮಾತಿಗೆ ಖುಷಿ ನಕ್ಕು ಸುಮ್ಮನಾದರು.

ಕಾರ್ಯಕ್ರಮದ ನಂತರ ಮಾಧ್ಯಮದವರ ಬಳಿ ಮಾತನಾಡಿದ ಖುಷಿ ದಿನೇಶ್, ಈ ಬಳೆ ಚಿನ್ನದ್ದಾ? ಎಂದು ಸಿಎಂ ನನ್ನನ್ನು ಕೇಳಿದರು. ಇಲ್ಲ ಸರ್ ಆರ್ಟಿಫಿಶಿಯಲ್ ಎಂದೆ. ಅದಕ್ಕೆ ಇಂತಹ ಕಾರ್ಯಕ್ರಮಕ್ಕೆ ಚಿನ್ನದ ಬಳೆ ಹಾಕಿಕೊಂಡು ಬರುವುದಲ್ಲವೇ ಎಂದು ಹಾಸ್ಯ ಮಾಡಿದರು ಎಂದರು. ಯಾವ ಕ್ರೀಡೆಗೆ ಪ್ರಶಸ್ತಿ ಬಂದಿದೆ ಎಂದು ಸಿಎಂ ಸರ್ ಕೇಳಿದರು. ಅದಕ್ಕೆ ಸ್ವಿಮ್ಮಿಂಗ್‌ನಲ್ಲಿ ಎಂದೆ. ಇನ್ನು ಸಾಧನೆ ಮಾಡುವಂತೆ ಹಾರೈಸಿದರು ಎಂದು ಸಂತಸ ಹಂಚಿಕೊಂಡರು.

Last Updated : Nov 2, 2020, 3:41 PM IST

For All Latest Updates

ABOUT THE AUTHOR

...view details