ಬೆಂಗಳೂರು:ಪ್ರತಿಭಟನೆಗಳನ್ನು ಕೈ ಬಿಡಿ. ಏನೇ ಇದ್ದರೂ ಬಂದು ಚರ್ಚೆ ಮಾಡಿ. ಬಿಜೆಪಿ ಸದಾ ರೈತಪರವಾಗಿ ಇರುತ್ತದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ರೈತ ಮುಖಂಡರಲ್ಲಿ ಮನವಿ ಮಾಡಿದರು.
ಪದೇ ಪದೆ ಪ್ರತಿಭಟನೆ, ಬಂದ್ ಮಾಡಬೇಡಿ: ರೈತರಿಗೆ ಸಿಎಂ ಮನವಿ - ಪ್ರತಿಭಟನೆ ನಿಲ್ಲಿಸುವಂತೆ ರೈತರಲ್ಲಿ ಯಡಿಯೂರಪ್ಪ ಮನವಿ
ಪ್ರತೀ ಬಾರಿ ರ‍್ಯಾಲಿ, ಪಾದಯಾತ್ರೆ ಮಾಡುವುದು ಸರಿಯಲ್ಲ. ಏನೇ ಸಮಸ್ಯೆಗಳಿದ್ದರೂ ಚರ್ಚೆ ಮಾಡೋಣ. ಪ್ರತಿಭಟನೆ, ಬಂದ್ ಮಾಡಬೇಡಿ ಎಂದು ಸಿಎಂ ಯಡಿಯೂರಪ್ಪ ರೈತರಿಗೆ ಮನವಿ ಮಾಡಿದ್ದಾರೆ.
ರೈತರಿಗೆ ಸಿಎಂ ಮನವಿ
ದಿನನಿತ್ಯ ಬಂದ್ ಮಾಡುವುದಕ್ಕೆ ಅವಕಾಶಗಳಿಲ್ಲ. ಪ್ರಧಾನಿಯವರೇ ಆಸಕ್ತಿಯಿಂದ ಎಲ್ಲವನ್ನೂ ಮಾಡುತ್ತಿದ್ದಾರೆ. ಪ್ರತೀ ಬಾರಿ ರ‍್ಯಾಲಿ, ಪಾದಯಾತ್ರೆ ಮಾಡುವುದು ಸರಿಯಲ್ಲ ಎಂದರು.
ಹೀಗೆ ಪ್ರತಿಭಟನೆ ಮಾಡಿದರೆ ಜನರಿಗೆ ಸಮಸ್ಯೆಯಾಗುತ್ತದೆ. ಪ್ರಧಾನಿ ಮೋದಿ ರೈತರ ಆದಾಯ ದ್ವಿಗುಣಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ರೈತರು ಸರ್ಕಾರದ ಜೊತೆ ಸಹಕರಿಸಬೇಕು, ಪ್ರತಿಭಟನೆಗಳನ್ನು ಕೈ ಬಿಡಿ ಎಂದು ಸಿಎಂ ಮನವಿ ಮಾಡಿಕೊಂಡರು.