ಬೆಂಗಳೂರು:ಗೆದ್ದ ಹನ್ನೊಂದು ಶಾಸಕರಿಗೆ ಮಂತ್ರಿ ಸ್ಥಾನ ಕೊಟ್ಟರೆ ಒಳ್ಳೆಯದು, ಸಿಎಂ ಕೊಡುತ್ತೇವೆಂದು ಮಾತು ಕೊಟ್ಟಿದ್ದಾರೆ ಎಂದು ಶಾಸಕ ಶ್ರೀಮಂತ್ ಪಾಟೀಲ್ ಹೇಳಿದ್ರು.
ಗೆದ್ದವರಿಗೆಲ್ಲ ಮಂತ್ರಿಗಿರಿ ಕೊಟ್ಟರೆ ಒಳ್ಳೆಯದು, ಸಿಎಂ ಮಾತಿನಂತೆ ನಡೆದುಕೊಳ್ಳುತ್ತಾರೆ: ಶ್ರೀಮಂತ್ ಪಾಟೀಲ್ - minister post to all winners
ನನಗೆ ಇನ್ನೂ ಏನೂ ಮೆಸೇಜ್ ಬಂದಿಲ್ಲ. 11 ಮಂದಿಗೂ ಅಧಿಕಾರ ಕೊಟ್ರೆ ಸರಿ ಆಗುತ್ತದೆ. ಮಾತು ಕೊಟ್ಟಂತೆ ನಡೆದುಕೊಂಡ್ರೆ ಒಳ್ಳೆಯದು ಎಂದು ಶಾಸಕ ಶ್ರೀಮಂತ್ ಪಾಟೀಲ್ ಬೆಂಗಳೂರಿನಲ್ಲಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿ, 10+3 ಸೂತ್ರದಲ್ಲಿ ಶ್ರೀಮಂತ ಪಾಟೀಲ್ ಇದ್ದಾರಾ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ನನಗೆ ಇನ್ನೂ ಏನೂ ಮೆಸೇಜ್ ಬಂದಿಲ್ಲ. 11 ಮಂದಿಗೂ ಅಧಿಕಾರ ಕೊಟ್ರೆ ಸರಿ ಆಗುತ್ತದೆ. ಮಾತು ಕೊಟ್ಟಂತೆ ನಡೆದುಕೊಂಡ್ರೆ ಒಳ್ಳೆಯದು. ಇಲ್ಲವಾದರೆ ಎಲ್ಲ ರಾಜ್ಯಕ್ಕೆ ಸಂದೇಶ ಬೇರೆ ಹೋಗುತ್ತದೆ ಎಂದು ಸೂಚ್ಯವಾಗಿ ತಿಳಿಸಿದರು.
ಕುಮಟಳ್ಳಿಗೆ ಸಚಿವ ಸ್ಥಾನ ಮಿಸ್ ಆಗಬಹುದು ಎಂಬ ವಿಚಾರವಾಗಿ ಪ್ರತಿಕ್ರಿಯಿ, ಇದು ರಾಷ್ಟ್ರೀಯ ಪಕ್ಷ. ಅವರ ನಿರ್ಧಾರವನ್ನು ಪ್ರಶ್ನಿಸುವುದಕ್ಕೆ ಆಗುವುದಿಲ್ಲ. ಏನು ನಿರ್ಧಾರ ತೆಗೆದುಕೊಳ್ತಾರೋ ಪಾಲಿಸ ಬೇಕಾಗುತ್ತದೆ. ಸೋತವರಿಗೂ ಅಧಿಕಾರ ಕೊಡಬೇಕು ಅಂತ ಕೇಳುತ್ತೇವೆ ಎಂದು ಇದೇ ವೇಳೆ ಹೇಳಿದ್ರು.