ಬೆಂಗಳೂರು: ಅತೃಪ್ತರ ಮನವೊಲಿಕೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಂದಾಗಿದ್ದು, ಇಂದು 11 ಗಂಟೆಗೆ ನಿವಾಸಕ್ಕೆ ಆಗಮಿಸುವಂತೆ ಅತೃಪ್ತರಿಗೆ ಸಿಎಂ ಬುಲಾವ್ ನೀಡಿದ್ದಾರೆ.
ಅತೃಪ್ತರ ಮನವೊಲಿಕೆಗೆ ಮುಂದಾದ ಸಿಎಂ: ರೆಬಲ್ ಟೀಂಗೆ ಬಿಎಸ್ವೈ ಬುಲಾವ್! - Yadiyurappa news
ಅತೃಪ್ತರ ಸಭೆ ಬೆನ್ನಲ್ಲೇ ಮಾಜಿ ಸಚಿವ ಮುರುಗೇಶ್ ನಿರಾಣಿಗೆ ಸಿಎಂ ಬಿಎಸ್ವೈ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ. ಸಭೆ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಅತೃಪ್ತರ ಸಭೆ ಬೆನ್ನಲ್ಲೇ ಮಾಜಿ ಸಚಿವ ಮುರುಗೇಶ್ ನಿರಾಣಿಗೆ ಸಿಎಂ ಬಿಎಸ್ವೈ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ. ಸಭೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ಆದರೆ, ಸಭೆ ನಡೆಸಿಲ್ಲ ಎಂದು ನಿರಾಣಿ ಸ್ಪಷ್ಟೀಕರಣ ನೀಡಿದ್ದು, ಇದೆಲ್ಲಾ ಕೇವಲ ವದಂತಿ. ಇದಕ್ಕೂ ತಮಗೂ ಯಾವುದೇ ಸಂಬಂಧ ಇಲ್ಲ ಎಂದು ತಿಳಿಸಿದ್ದಾರೆ.
11 ಗಂಟೆಗೆ ನಿವಾಸಕ್ಕೆ ಆಗಮಿಸುವಂತೆ ನಿರಾಣಿಗೆ ಸಿಎಂ ಸೂಚನೆ ನೀಡಿದ್ದು, ಉಮೇಶ್ ಕತ್ತಿಯವರನ್ನೂ ಕರೆದುಕೊಂಡು ಬನ್ನಿ ಎಂದು ತಿಳಿಸಿದ್ದಾರೆ. ಅತೃಪ್ತರ ಜೊತೆ ಬರುವಂತೆ ತಾಕೀತು ಮಾಡಿದ್ದಾರೆ. 10.30 ರಿಂದ ಸಂಜೆ 4.30 ರವರೆಗೂ ಬಿಡುವಿಲ್ಲದ ಸಭೆಯನ್ನು ಸಿಎಂ ಈಗಾಗಲೇ ಗೃಹ ಕಚೇರಿ ಕೃಷ್ಣಾದಲ್ಲಿ ನಡೆಸಲುದ್ದೇಶಿಸಿದ್ದು, ಮಾತುಕತೆಗೆ ಮುಂದಾಗಿದ್ದಾರೆ.