ಬೆಂಗಳೂರು: ಮೊದಲು ಸಮಾಜಿಕ ಸಂದೇಶ ಹೊಂದಿರುವ ಸಿನಿಮಾಗಳು ಬರ್ತಾ ಇದ್ವು. ಆದರೆ, ಈಗ ಆ ರೀತಿಯ ಸಿನಿಮಾಗಳ ಸಂಖ್ಯೆ ಕಡಿಮೆ ಆಗಿದೆ. ನನಗೆ ಕಪ್ಪು-ಬಿಳುಪು ಸಿನಿಮಾಗಳು ಅಂದ್ರೆ ತುಂಬಾ ಇಷ್ಟ. ಸ್ವಾಮಿ ವಿವೇಕಾನಂದರಂತೆ ಪುನೀತ್ ರಾಜ್‍ಕುಮಾರ್ ಅತೀ ಚಿಕ್ಕ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ ಎಂದು ಸಿಎಂ ಹೊಗಳಿದರು.
13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರ ಚಿತ್ರೋತ್ಸವದಲ್ಲಿ ಸಿ ಎಂ ಬಸವರಾಜ ಬೊಮ್ಮಾಯಿ ಮಾತನಾಡಿದರು. ಮೈಸೂರಿನಲ್ಲಿ ಫಿಲ್ಮ್ ಸಿಟಿ ನಿರ್ಮಾಣ ಮಾಡೋದಕ್ಕೆ ಸರ್ಕಾರ ಕೈ ಜೋಡಿಸಲಿದೆ. ಪುಟ್ಟಣ್ಣ ಕಣಗಾಲ್ ಅವರ ನಿವಾಸವನ್ನು ಸ್ಮಾರಕ ಮಾಡುವ ಕಾರ್ಯಕ್ಕೂ ಸರ್ಕಾರ ಕೈಜೋಡಿಸುತ್ತೆ. ಜೊತೆಗೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಲ್ ನಿರ್ಮಾಣಕ್ಕೆ ಸಹ ಬೆಂಬಲ ನೀಡಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ರಷ್ಯಾ-ಉಕ್ರೇನ್ ಯುದ್ಧ: ಖಾರ್ಕಿವ್ ನಗರದಿಂದ ಮಹಾ ಪಲಾಯನ
ಸಿಎಂಗೆ ಮುಜುಗರ ತಂದ 'ಡಿ ಬಾಸ್ ' ಘೋಷಣೆ..ವೇದಿಕೆ ಮೇಲೆ ಸಿ ಎಂ ಬೊಮ್ಮಾಯಿ ಮಾತನಾಡುತ್ತಿದ್ದ ವೇಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರ್ಯಕ್ರಮಕ್ಕೆ ಹಾಜರಾದಾಗ ನೆರೆದಿದ್ದ ಅಭಿಮಾನಿಗಳು ದರ್ಶನ್ಗೆ ಜೈಕಾರ ಹಾಕಿದರು. ಪರಿಣಾಮ ತಮ್ಮ ಭಾಷಣವನ್ನ ಸಿಎಂ ಅರ್ಧಕ್ಕೆ ನಿಲ್ಲಿಸಿದರು. ಇದನ್ನು ಅರಿತ ದರ್ಶನ್, ಅಭಿಮಾನಿಗಳಿಗೆ ತಮ್ಮದೇ ರೀತಿಯಲ್ಲಿ ತರಾಟೆಗೆ ತೆಗೆದುಕೊಂಡ ನಂತರ ಸುಮ್ಮನಾದರು. ಇದಾದ ನಂತರ ಮತ್ತೆ ಸಿಎಂ ತಮ್ಮ ಮಾತು ಮುಂದುವರೆಸಿದರು.
ಬಜೆಟ್ಗೂ ಮುನ್ನ ಸಿನಿರಂಗಕ್ಕೆ ಬಂಫರ್ ಆಫರ್ ಕೊಟ್ಟ ಸಿಎಂ ನಮ್ಮ ಹುಡುಗ ದರ್ಶನ್ ವೈಲ್ಡ್ ಫೋಟೋಗ್ರಾಫಿ, ಪ್ರಾಣಿ ಪಕ್ಷಿಗಳ ಬಗ್ಗೆ ಇರುವ ಕಾಳಜಿ ನನಗೆ ಇಷ್ಟ ಎಂದರು. ಅಂತಾರಾಷ್ಟ್ರೀಯ ಮಟ್ಟದ ಪೈಪೋಟಿ ಹಾಗು ಪರಭಾಷೆಗಳ ಸಿನಿಮಾಗಳ ಮಧ್ಯೆ ಕನ್ನಡ ಸಿನಿಮಾಗಳನ್ನ ಉಳಿಸುವ ಕೆಲಸ ಮಾಡಬೇಕಿದೆ. ಚಿತ್ರಮಂದಿರಗಳು ಒಂದರ ಹಿಂದೆ ಒಂದು ಮುಚ್ಚುತ್ತಿವೆ. ಹೊಸ ತಂತ್ರಜ್ಞಾನ ಬಳಸಿ ಕನ್ನಡ ಸಿನಿಮಾಗಳ ಬೆಳವಣಿಗೆ ಆಗಬೇಕು, ಜೊತೆಗೆ ಈ ಹಿಂದೆ ಹೇಗೆ ಕುಟುಂಬವೇ ಚಿತ್ರಮಂದಿರಗಳಿಗೆ ಬಂದು ಸಿನಿಮಾ ನೋಡುತ್ತಿತ್ತೋ ಹಾಗೇ ಇವತ್ತು ಜನ ಚಿತ್ರಮಂದಿರಗಳಿಗೆ ಬಂದು ಸಿನಿಮಾ ನೋಡಿದ್ರೆ ಮಾತ್ರ ಕನ್ನಡ ಸಿನಿಮಾಗಳು ಉಳಿಯುತ್ತವೆ ಎಂದು ತಮ್ಮ ಅಭಿಪ್ರಾಯ ಹೊರಹಾಕಿದರು.