ಕರ್ನಾಟಕ

karnataka

ETV Bharat / state

ಆರ್.ಆರ್.ನಗರದಲ್ಲಿ ನಾಳೆ ಮುನಿರತ್ನ ಪರ ಸಿಎಂ ಪ್ರಚಾರ..! - RR Nagar

ಸಿಎಂ ಯಡಿಯೂರಪ್ಪ ನಾಳೆ ಬೆಳಿಗ್ಗೆ 12.30ಕ್ಕೆ ಜ್ಞಾನಭಾರತಿ ವಾರ್ಡ್ ನಲ್ಲಿ ರೋಡ್ ಶೋ ನಡೆಸಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಮತಯಾಚನೆ ಮಾಡಲಿದ್ದಾರೆ..

Yediyurappa
ಯಡಿಯೂರಪ್ಪ

By

Published : Oct 30, 2020, 8:17 PM IST

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಳೆ ಆರ್.ಆರ್ ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣಾ ಪ್ರಚಾರ ನಡೆಸಲಿದ್ದಾರೆ.

ನಾಳೆ ಬೆಳಗ್ಗೆ 11.30ಕ್ಕೆ ಬಾವುರಾವ್ ದೇಶಪಾಂಡೆ ಭವನದಲ್ಲಿ ವರ್ಚುವಲ್ ರ್ಯಾಲಿಯನ್ನು ಉದ್ಘಾಟನೆ ಮಾಡಲಿರುವ ಸಿಎಂ ಯಡಿಯೂರಪ್ಪ, 12.30ಕ್ಕೆ ಜ್ಞಾನಭಾರತಿ ವಾರ್ಡ್ ನಲ್ಲಿ ರೋಡ್ ಶೋ ನಡೆಸಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಮತಯಾಚನೆ ಮಾಡಲಿದ್ದಾರೆ.

ಕೊಟ್ಟಿಗೆಪಾಳ್ಯ ವಾರ್ಡ್, ಲಗ್ಗೆರೆ ವಾರ್ಡ್, ಲಕ್ಷ್ಮಿದೇವಿನಗರ ವಾರ್ಡ್, ಹೆಚ್.ಎಂ.ಟಿ ವಾರ್ಡ್, ಜಾಲಹಳ್ಳಿ ವಾರ್ಡ್, ಜೆ‌ಪಿ ಪಾರ್ಕ್ ವಾರ್ಡ್ ಮತ್ತು ಯಶವಂತಪುರ ವಾರ್ಡ್ ನಲ್ಲಿ ಸಂಜೆ 4.30 ರವರೆಗೂ ರೋಡ್ ಶೋ ನಡೆಸಿ ಸಿಎಂ ಚುನಾವಣಾ ಪ್ರಚಾರ ನಡೆಸಲಿದ್ದಾರೆ.

ಇಂದು ಶಿರಾದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಿರುವ ಸಿಎಂ ನಾಳೆ ಆರ್.ಆರ್.ನಗರ ಕ್ಷೇತ್ರದ ಅಖಾಡಕ್ಕೆ ಇಳಿದು ಭರ್ಜರಿ ಕ್ಯಾಂಪೇನ್ ಮಾಡಲಿದ್ದಾರೆ. ಮುನಿರತ್ನ ವಿರುದ್ಧ ಪ್ರತಿಪಕ್ಷ ನಾಯಕರು ಮಾಡಿರುವ ಆರೋಪಗಳಿಗೆ ಸಿಎಂ ನಾಳೆ ಉತ್ತರ ನೀಡಿ ತಿರುಗೇಟು ನೀಡುವ ಸಾಧ್ಯತೆ ಇದೆ.

ABOUT THE AUTHOR

...view details