ಕರ್ನಾಟಕ

karnataka

By

Published : Jan 6, 2020, 5:28 PM IST

ETV Bharat / state

ಎಸ್‌ಟಿ ಮೀಸಲಾತಿ ಹೆಚ್ಚಿಸುವ ವಿಚಾರ.. ಸಮುದಾಯದ ಸ್ವಾಮೀಜಿ, ಮುಖಂಡರ ಜತೆ ಸಿಎಂ ಸಭೆ..

ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಹೆಚ್ಚಿಸುವ ವಿಚಾರ ಸಂಬಂಧ ಇಂದು ವಾಲ್ಮೀಕಿ ಸಮುದಾಯದ ಸ್ವಾಮೀಜಿಗಳು ಹಾಗೂ ಜನಪ್ರತಿನಿಧಿಗಳ ಜೊತೆಗಿನ ಸಿಎಂ ಯಡಿಯೂರಪ್ಪ ಅವರ ಮಹತ್ವದ ಸಭೆ ಆರಂಭಗೊಂಡಿದೆ.

cm-to-hold-meeting-with-swamiji-of-valmiki-community-in-bengalore
ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಹೆಚ್ಚಿಸುವ ವಿಚಾರ...ವಾಲ್ಮೀಕಿ ಸಮುದಾಯದ ಸ್ವಾಮೀಜಿಗಳೊಂದಿಗೆ ಸಿಎಂ ಮಹತ್ವದ ಸಭೆ...

ಬೆಂಗಳೂರು:ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಹೆಚ್ಚಿಸುವ ವಿಚಾರ ಸಂಬಂಧ ಇಂದು ವಾಲ್ಮೀಕಿ ಸಮುದಾಯದ ಸ್ವಾಮೀಜಿಗಳು ಹಾಗೂ ಜನಪ್ರತಿನಿಧಿಗಳ ಜೊತೆಗಿನ ಸಿಎಂ ಯಡಿಯೂರಪ್ಪ ಅವರ ಮಹತ್ವದ ಸಭೆ ಆರಂಭಗೊಂಡಿದೆ.

ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಯಡಿಯೂರಪ್ಪ ನೇತೃತ್ವದ ಸಭೆಯಲ್ಲಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ, ಸಚಿವ ಶ್ರೀರಾಮುಲು, ಶಾಸಕ ರಮೇಶ್ ಜಾರಕಿಹೊಳಿ, ಕಾಂಗ್ರೆಸ್ ಶಾಸಕರಾದ ಸತೀಶ್ ಜಾರಕಿಹೊಳಿ, ಜೆ ಎನ್ ಗಣೇಶ್, ಸಂಸದ ದೇವೇಂದ್ರಪ್ಪ, ಶಾಸಕ ರಾಜುಗೌಡ ಸೇರಿ ಹಲವರು ಭಾಗಿಯಾಗಿದ್ದಾರೆ.

ಎಸ್‌ಟಿ ಮೀಸಲು ಹೆಚ್ಚಳ ಕುರಿತು ವಾಲ್ಮೀಕಿ ಸ್ವಾಮೀಜಿ, ಸಮುದಾಯದ ಮುಖಂಡರ ಜತೆ ಸಿಎಂ ಸಭೆ..

ವಾಲ್ಮೀಕಿ ಸಮುದಾಯಕ್ಕೆ ಶೇ.3 ರಷ್ಟು ಇರುವ ಮೀಸಲಾತಿಯನ್ನು ‌ಶೇ 7.5ಕ್ಕೆ ಹೆಚ್ಚಿಸುವ ಬಗ್ಗೆ ವಾಲ್ಮೀಕಿ ಸಮುದಾಯದಿಂದ ಸರ್ಕಾರಕ್ಕೆ ಒತ್ತಾಯ ಮಾಡಲಾಗಿದ್ದು, ಈ ಸಂಬಂಧ ಚರ್ಚೆ ನಡೆಸಲಾಗುತ್ತಿದೆ.

ಈ ಸಂಧರ್ಭದಲ್ಲಿ ಪರಸ್ಪರ ರಮೇಶ್ ಜಾರಕಿಹೊಳಿ ಹಾಗೂ ಶ್ರೀರಾಮುಲು ಮುಖಾಮುಖಿಯಾದರು. ಪರಸ್ಪರ ಹಸ್ತಲಾಘವ ಮಾಡಿದ ಉಭಯ ನಾಯಕರು ಶುಭಾಶಯ ಕೋರಿದರು. ಡಿಸಿಎಂ ವಿಚಾರವಾಗಿ ಮುನಿಸಿಕೊಂಡಿದ್ದ ಇಬ್ಬರು ನಾಯಕರು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿಯಾಗಿರೋದು ವಿಶೇಷ.

For All Latest Updates

TAGGED:

ABOUT THE AUTHOR

...view details