ಕರ್ನಾಟಕ

karnataka

ETV Bharat / state

ಯುವನಿಧಿ ಯೋಜನೆ ನೋಂದಣಿಗೆ ಡಿ.26 ರಂದು ಚಾಲನೆ; ಅರ್ಹರು ಯಾರು? ಅರ್ಜಿ ಸಲ್ಲಿಸುವುದೇಗೆ?

ಡಿ.26 ರಂದು ಯುವನಿಧಿ ಯೋಜನೆ ನೋಂದಣಿಗೆ ಸಿಎಂ ಚಾಲನೆ ನೀಡಲಿದ್ದಾರೆ.

cm-starts-registration-of-youth-fund-scheme-on-december-26
ಯುವನಿಧಿ ಯೋಜನೆ ನೋಂದಣಿಗೆ ಡಿ.26 ರಂದು ಚಾಲನೆ; ಅರ್ಹರು ಯಾರು? ಅರ್ಜಿ ಸಲ್ಲಿಸುವುದೇಗೆ?

By ETV Bharat Karnataka Team

Published : Dec 21, 2023, 12:07 PM IST

Updated : Dec 21, 2023, 6:27 PM IST

ಯುವನಿಧಿ ಯೋಜನೆ ಜಾರಿ ಬಗ್ಗೆ ಸಚಿವರಿಂದ ಮಾಹಿತಿ

ಬೆಂಗಳೂರು:ಕಾಂಗ್ರೆಸ್​ ಘೋಷಿತ 'ಪಂಚ ಗ್ಯಾರಂಟಿ' ಯೋಜನೆಗಳಲ್ಲಿ ಒಂದಾದ 'ಯುವನಿಧಿ' ಯೋಜನೆ ನೋಂದಣಿ ಪ್ರಕ್ರಿಯೆ ಇದೇ ಡಿಸೆಂಬರ್​ 26ರಂದು ಆರಂಭವಾಗಲಿದೆ. ಸಿಎಂ ಸಿದ್ದರಾಮಯ್ಯ ಇದಕ್ಕೆ ಚಾಲನೆ ನೀಡಲಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಶರಣು ಪ್ರಕಾಶ್​ ಪಾಟೀಲ್​ ತಿಳಿಸಿದ್ದಾರೆ.

ನಿರುದ್ಯೋಗಿ ಪದವೀಧರರಿಗೆ ನೆರವಾಗಲೆಂದು ರಾಜ್ಯ ಸರ್ಕಾರ ರೂಪಿಸಿರುವ ಯುವನಿಧಿ ಯೋಜನೆ ನಿರುದ್ಯೋಗಿ ಪದವೀಧರರಿಗೆ ಮಾಸಿಕ 3,000 ರೂ. ಹಾಗೂ ಡಿಪ್ಲೊಮಾ ಪದವೀಧರರಿಗೆ ಮಾಸಿಕ 1,500 ಭತ್ಯೆ ನೀಡುತ್ತದೆ. ಈ ಕುರಿತು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಡಿ.26ರಂದು ಯುವನಿಧಿ ಯೋಜನೆಯ ನೋಂದಣಿಗೆ​ ಸಿಎಂ ಸಿದ್ದರಾಮಯ್ಯ ಅವರು ವಿಧಾನಸೌಧ ಬ್ಯಾಂಕ್ವೆಟ್ ಹಾಲ್​​ನಲ್ಲಿ ಚಾಲನೆ ನೀಡಲಿದ್ದಾರೆ. 2024 ಜನವರಿ 12 ರಂದು ವಿವೇಕಾನಂದ ಜಯಂತಿ ದಿನ ಶಿವಮೊಗ್ಗದಲ್ಲಿ ಈ ಯೋಜನೆಗೆ ಅಧಿಕೃತ ಚಾಲನೆ ನೀಡಲಾಗುತ್ತದೆ ಎಂದು ಹೇಳಿದರು.

ಪ್ರಸ್ತುತ 'ಯುವನಿಧಿ' ಯೋಜನೆಯನ್ನು ರಾಜ್ಯದ ಯುವಕ/ ಯುವತಿಯರಿಗೆ ಸಮರ್ಪಿತವಾಗಿದ್ದು, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಅಧೀನದ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಮುಖಾಂತರ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.

ಯುವನಿಧಿ ಯೋಜನೆಗೆ ಕರ್ನಾಟಕ ರಾಜ್ಯಾದ್ಯಂತ ಒಟ್ಟು 5.29,153 ಫಲಾನುಭವಿಗಳು ಇರುವುದನ್ನು ಅಂದಾಜಿಸಲಾಗಿದೆ. ಅವರಲ್ಲಿ ಪದವೀಧರರು 4,81,000 ಹಾಗೂ ಡಿಪ್ಲೋಮಾ ತೇರ್ಗಡೆಯಾದವರು 48,153 ಆಗಿದ್ದಾರೆ. ನಿರುದ್ಯೋಗ ಭತ್ಯೆ ನೀಡಲು 250 ಕೋಟಿ ರೂ. ಅನುದಾನವನ್ನು ಹಂಚಿಕೆ ಮಾಡಲಾಗಿದೆ.

ಈ ಯೋಜನೆಯಡಿ ರಾಜ್ಯದ ಪದವೀಧರರು/ ಸ್ನಾತಕೋತ್ತರ ಪದವೀಧರರು/ ಡಿಪ್ಲೋಮಾ ತೇರ್ಗಡೆಯಾದವರು ನಿರುದ್ಯೋಗ ಭತ್ಯೆಯನ್ನು ಪಡೆಯಲು ಅರ್ಹರಿರುತ್ತಾರೆ. ಪದವೀಧರರಿಗೆ ಮಾಸಿಕವಾಗಿ ರೂ.3,000/- ಹಾಗೂ ಡಿಪ್ಲೋಮಾ ತೇರ್ಗಡೆಯಾದವರಿಗೆ ರೂ.1,500/- ಗಳನ್ನು ನಿರುದ್ಯೋಗ ಭತ್ಯೆಯನ್ನಾಗಿ ಅಭ್ಯರ್ಥಿಗಳ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ನೀಡಲು ತೀರ್ಮಾನಿಸಲಾಗಿದೆ.

ಪದವಿ/ ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು 2022-23ನೇ ಶೈಕ್ಷಣಿಕ ವರ್ಷದಲ್ಲಿ ವ್ಯಾಸಂಗ ಮಾಡಿ 2023ರಲ್ಲಿ ತೇರ್ಗಡೆ ಹೊಂದಿರಬೇಕು. ಅಭ್ಯರ್ಥಿಗಳು ಕನಿಷ್ಠ 6 ವರ್ಷಗಳ ಕಾಲ ಕರ್ನಾಟಕದಲ್ಲಿ ವ್ಯಾಸಂಗ ಮಾಡಿರಬೇಕು ಎಂದು ಸಚಿವ ಶರಣು ಪ್ರಕಾಶ್​ ಪಾಟೀಲ್​ ತಿಳಿಸಿದ್ದಾರೆ.

ಯುವನಿಧಿ ಅರ್ಹತೆಗಳು

  1. ಅಭ್ಯರ್ಥಿಗಳು 2022-23ನೇ ಶೈಕ್ಷಣಿಕ ವರ್ಷದಲ್ಲಿ ವ್ಯಾಸಂಗ ಮಾಡಿ ಪದವಿ/ ಡಿಪ್ಲೋಮಾ 2023ರಲ್ಲಿ ತೇರ್ಗಡೆಯಾಗಿರಬೇಕು.
  2. ಕರ್ನಾಟಕದಲ್ಲಿ ಕನಿಷ್ಠ 6 ವರ್ಷದವರೆಗೆ ಪದವಿ/ ಡಿಪ್ಲೋಮಾ ವ್ಯಾಸಂಗದ ಅವಧಿಯಲ್ಲಿ ಕರ್ನಾಟಕ ರಹವಾಸಿಯಾಗಿರಬೇಕು.

ಯುವನಿಧಿ ಅನರ್ಹರು

1. ಸರ್ಕಾರಿ/ ಸರ್ಕಾರಿ ಅನುದಾನಿತ ಸಂಸ್ಥೆ/ ಖಾಸಗಿ ವಲಯಗಳಲ್ಲಿ ಉದ್ಯೋಗದಲ್ಲಿರುವ ಅಭ್ಯರ್ಥಿಗಳು

2. ಸ್ವಯಂ ಉದ್ಯೋಗಿಗಳಾಗಿರುವ ಅಭ್ಯರ್ಥಿಗಳು.

3. ವಿದ್ಯಾಭ್ಯಾಸ ಮುಂದುವರೆಸುವ ಅಭ್ಯರ್ಥಿಗಳು .

ಅರ್ಜಿಸಲ್ಲಿಸುವ ವಿಧಾನ ಹಾಗೂ ಪ್ರತಿ ಹಂತದ ಪ್ರಕ್ರಿಯೆಗಳು:ಆಸಕ್ತ ಅರ್ಹ ಅಭ್ಯರ್ಥಿಗಳು ಸೇವಾಸಿಂಧು ಜಾಲತಾಣ https://sevasindhugs.karnataka.gov.in/ರಲ್ಲಿ ಲಾಗಿನ್ ಆಗಿ ಅರ್ಜಿ ಸಲ್ಲಿಸಬಹುದು. ಈಗಾಗಲೇ ಪದವಿ/ ಡಿಪ್ಲೋಮಾ ತೇರ್ಗಡೆಯಾದ ಅಭ್ಯರ್ಥಿಗಳ ಶೈಕ್ಷಣಿಕ ಪ್ರಮಾದ ಪತ್ರಗಳನ್ನು NAD ಪೋರ್ಟಲ್‌ನಲ್ಲಿ ಸಂಬಂಧಿಸಿದ ವಿಶ್ವವಿದ್ಯಾನಿಲಯಗಳು/ ಶೈಕ್ಷಣಿ ಸಂಸ್ಥೆಗಳು/ ಮಂಡಳಿಗಳು ಇಂಧೀಕರಿಸಿರುವುದನ್ನು ಖಚಿತಪಡಿಸಿಕೊಳ್ಳಲು ಅಭ್ಯರ್ಥಿಗಳ https://nad.karnataka.gov.in/#/YuvaNidhiಜಾಲತಾಣದಲ್ಲಿ ಲಾಗಿನ್ ಆಗಿ ತಮ್ಮ ಪದವಿ/ ಡಿಪ್ಲೋಮಾ ಪ್ರಮಾಣ ಪತ್ರದಲ್ಲಿ ನೀಡಿರುವ ನೋಂದಣಿ ಸಂಖ್ಯೆಯನ್ನು ದಾರ್ಖ ಪರಿಶೀಲಿಸಿಕೊಳ್ಳಬಹುದು.

ಅಭ್ಯರ್ಥಿಗಳು ಯುವನಿಧಿ ಅರ್ಜಿ ಸಲ್ಲಿಸಲು (1) ಕರ್ನಾಟಕ-ಓನ್, ಬಾಪೂಜಿ ಸೇವಾ ಕೇಂದ್ರಗಳು, ಗ್ರಾಮ-ಓನ್ ಕೇಂದ್ರಗಳನ್ನು ಬಳಸಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ. ಆಧಾರ್ ಸಂಖ್ಯೆಯನ್ನು ನಮೂದಿಸಿ O.T.P ಪಡೆದು KYC ಮಾಹಿತಿಯನ್ನು ಪಡೆದುಕೊಳ್ಳತಕ್ಕದ್ದು. ಅಭ್ಯರ್ಥಿಗಳು ತಮ್ಮ ಜಿಲ್ಲೆ ಮತ್ತು ತಾಲ್ಲೂಕನ್ನು ಆಯ್ಕೆ ಮಾಡಿಕೊಳ್ಳಬೇಕು. ವಿದ್ಯಾರ್ಹತೆಗೆ ಸಂಬಂಧಿಸಿದ ಮಾಹಿತಿಯನ್ನು ಭರ್ತಿ ಮಾಡುವ ಸಂದರ್ಭದಲ್ಲಿ ಅಭ್ಯರ್ಥಿಗಳು ಪ್ರಮಾಣ ಪತ್ರದಲ್ಲಿರುವ ನೊಂದಣಿ ಸಂಖ್ಯೆಯನ್ನು ನಮೂದಿಸಿದ ತಕ್ಷಣದಲ್ಲಿ ಸ್ವಯಂ-ಚಾಲಿತವಾಗಿ NAD ಪೋರ್ಟಲ್‌ನಿಂದ ಸಕ್ರಿಯಗೊಳಿಸುತ್ತದೆ. ಅಭ್ಯರ್ಥಿಗಳು 6 ವರ್ಷ ಕರ್ನಾಟಕ ರಹವಾಸಿ ಎಂದು ನಿರೂಪಿಸಲು ಈ ಕೆಳಗಿನ 4 ಮಾನದಂಡಗಳನ್ನು ಉಪಯೋಗಿಸಿಕೊಳ್ಳಲು ಸೇವಾಸಿಂಧು ಪೋರ್ಟಲ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ.

ಅರ್ಜಿ ಸಲ್ಲಿಸಲು ಬೇಕಾಗಿರುವ ವಿದ್ಯಾರ್ಹತೆ ದಾಖಲಾತಿಗಳು:ಪದವೀಧರರು ಎಸ್​ಎಸ್​ಎಲ್​ಸಿ ಅಂಕಪಟ್ಟಿ, ಪಿಯುಸಿ ಅಂಕಪಟ್ಟಿ, ಪದವಿ ಪ್ರಮಾಣ ಪತ್ರ ಅಥವಾ ತಾತ್ಕಾಲಿಕ ಪ್ರಮಾಣ ಪತ್ರ, ರೇಷನ್ ಕಾರ್ಡ್ ಸಂಖ್ಯೆ ನೀಡಬೇಕು. ಡಿಪ್ಲೋಮೋ ಅಭ್ಯರ್ಥಿಗಳು ಎಸ್​ಎಸ್​ಎಲ್​ಸಿ ಅಂಕಪಟ್ಟಿ, ಪಿಯುಸಿ ಅಂಕಪಟ್ಟಿ ಡಿಪ್ಲೋಮೋ ಪ್ರಮಾಣ ಪತ್ರ ಅಥವಾ ತಾತ್ಕಾಲಿಕ ಪ್ರಮಾಣ ಪತ್ರ, ರೇಷನ್ ಕಾರ್ಡ್ ಸಂಖ್ಯೆ ನೀಡಬೇಕು. ಯುವನಿಧಿ ಯೋಜನೆಯಲ್ಲಿ ಯಶಸ್ವಿಯಾಗಿ ಅರ್ಜಿಸಲ್ಲಿಸಿದ ದತ್ತಾಂಶವನ್ನು ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮಕ್ಕೆ ಸ್ವಯಂ ಚಾಲಿತವಾಗಿ ಹಂಚಿಕೊಳ್ಳಲಾಗುವುದು. https://skillconnect.kaushalkar.com/ಇದಕ್ಕೆ ಪೂರಕವಾಗಿ ಅಭ್ಯರ್ಥಿಗಳಿಗೆ ನಿಗಮವು ಉಚಿತವಾಗಿ ಕೌಶಲ್ಯ ತರಬೇತಿಗಳನ್ನು ಆಯೋಜಿಸುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.

ಇದನ್ನೂ ಓದಿ:ಪ್ರಧಾನಿ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಹೆಸರು ಪ್ರಸ್ತಾಪ: ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಸಂತಸ...

Last Updated : Dec 21, 2023, 6:27 PM IST

ABOUT THE AUTHOR

...view details