ಕರ್ನಾಟಕ

karnataka

ETV Bharat / state

ಸರ್ಕಾರಿ ನೌಕರರಿಗೆ ದೀಪಾವಳಿ ಬಂಪರ್: ತುಟ್ಟಿಭತ್ಯೆ ಹೆಚ್ಚಳಕ್ಕೆ ಸಿಎಂ ಗ್ರೀನ್ ಸಿಗ್ನಲ್! - CM sign to Government employs salary hike file

ಸರ್ಕಾರಿ ನೌಕರರ ತುಟ್ಟಿ ಭತ್ಯೆ(ಡಿಎ)ಹೆಚ್ಚಳಕ್ಕೆ ಸಿಎಂ ಒಪ್ಪಿಗೆ ನೀಡಿದ್ದು, ಸದ್ಯದಲ್ಲೇ ಅಧಿಕೃತ ಆದೇಶ ಹೊರಬೀಳಲಿದ್ದು, ಅದರಂತೆ ಶೇ.4.75 ರಷ್ಟು ತುಟ್ಟಿ ಭತ್ಯೆ ಹೆಚ್ಚಳವಾಗಬಹುದೆಂಬ ಎನ್ನಲಾಗಿದೆ.

BSY

By

Published : Oct 19, 2019, 5:22 AM IST

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿ ಕೊಡುಗೆ ನೀಡಲು ಬಿಜೆಪಿ ಸರ್ಕಾರ ಮುಂದಾಗಿದೆ. ಸದ್ಯದಲ್ಲೇ ಸರ್ಕಾರಿ ನೌಕರರಿಗೆ ಖುಷಿಸುದ್ದಿ ಸಿಗಲದೆ.

ಸರ್ಕಾರಿ ನೌಕರರ ತುಟ್ಟಿ ಭತ್ಯೆ(ಡಿಎ)ಹೆಚ್ಚಳಕ್ಕೆ ಸಿಎಂ ಒಪ್ಪಿಗೆ ನೀಡಿದ್ದು, ಸದ್ಯದಲ್ಲೇ ಅಧಿಕೃತ ಆದೇಶ ಹೊರಬೀಳಲಿದೆ ಎನ್ನಲಾಗಿದೆ. ಅದರಂತೆ ಶೇ.4.75 ರಷ್ಟು ತುಟ್ಟಿ ಭತ್ಯೆ ಹೆಚ್ಚಳವಾಗಬಹುದೆಂಬ ಮಾಹಿತಿಯಿದ್ದು, ಇನ್ನೆರಡು ದಿನಗಳಲ್ಲಿ ತುಟ್ಟಿಬತ್ಯೆ ಹೆಚ್ಚಳದ ಬಗ್ಗೆ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆ ಇದೆ.

ತುಟ್ಟಿ ಭತ್ಯೆ ಹೆಚ್ಚಳಕ್ಕೆ ಸಿಎಂ ಒಪ್ಪಿಗೆ ಪತ್ರ
ಸದ್ಯ ಸರ್ಕಾರಿ ನೌಕರರು 6.5% ತುಟ್ಟಿ ಭತ್ಯೆ ಪಡೆಯುತ್ತಿದ್ದು, ಅದು ಇನ್ನು ಮುಂದೆ 11.25%ಗೆ ಏರಿಕೆ ಆಗಲಿದೆ. ಅದರಂತೆ 17,000 ರು.‌ ಮೂಲ ವೇತನ ಪಡೆಯುವ ಸರ್ಕಾರಿ ನೌಕರನಿಗೆ 1,913 ರು. ತುಟ್ಟಿ ಭತ್ಯೆ ಏರಿಕೆಯಾಗಲಿದೆ. ಇನ್ನು 67,550 ರು‌. ಮೂಲ ವೇತನ ಪಡೆಯುವ ನೌಕರನ ತುಟ್ಟಿಭತ್ಯೆಯಲ್ಲಿ 7,599 ರು. ಹೆಚ್ಚಳವಾಗಲಿದೆ.ದೀಪಾವಳಿ ಹಬ್ಬದ ಕೊಡುಗೆಯಾಗಿ ಈ ಹಿಂದಿನ ತುಟ್ಟಿ ಭತ್ಯೆಯಲ್ಲಿ ಬಾಕಿ ಉಳಿದಿರುವ ಭಿನ್ನಾಂಶವನ್ನು ಸೇರಿಸಿ ಜುಲೈ 1, 2019ಕ್ಕೆ ಪೂರ್ವಾನ್ವಯವಾಗುವಂತೆ ಶೇ.5 ರಷ್ಟು ತುಟ್ಟಿ ಭತ್ಯೆಯನ್ನು ಸಂಪೂರ್ಣ ನಗದು ರೂಪದಲ್ಲಿ ಬಿಡುಗಡೆಗೊಳಿಸುವಂತೆ ಕೋರಿ ಅಕ್ಟೋಬರ್ 15ರಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಸಿಎಂರಲ್ಲಿ ಮನವಿ ಮಾಡಿತ್ತು. ಅದಕ್ಕೆ‌ ಒಪ್ಪಿದ್ದ ಸಿಎಂ ಈ ಸಂಬಂಧ ಪ್ರಸ್ತಾಪ ಸಲ್ಲಿಸುವಂತೆ ಅರ್ಥಿಕ ಇಲಾಖೆಗೆ ಸೂಚನೆ ನೀಡಿದ್ದರು.ಇದೀಗ ಸರ್ಕಾರ ದೀಪಾವಳಿ ಕೊಡುಗೆಯಾಗಿ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು 4.75% ಗೆ ಹೆಚ್ಚಿಸಲು ಮುಂದಾಗಿದೆ.

ABOUT THE AUTHOR

...view details