ಬೆಂಗಳೂರು: ಸಮ್ಮಿಶ್ರ ಸರ್ಕಾರ ಇವತ್ತು ವಿಧಾನಸಭೆ ವಿಸರ್ಜನೆ ಮಾಡಬೇಕಿತ್ತು. ನಾವು ಕ್ಯಾಬಿನೆಟ್ನಲ್ಲಿ ವಿಸರ್ಜನೆ ಮಾಡ್ತಾರೆ ಅಂದುಕೊಂಡಿದ್ವಿ. ಹಾಗೆಯೇ ಸಿಎಂ ಕುಮಾರಸ್ವಾಮಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಸಂಸದ ಶ್ರೀನಿವಾಸ್ ಪ್ರಸಾದ್ ಹೇಳಿದರು.
ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ನೀಡಲಿ: ಸಂಸದ ಶ್ರೀನಿವಾಸ ಪ್ರಸಾದ್ - Devanahalli
ಸಮ್ಮಿಶ್ರ ಸರ್ಕಾರದಲ್ಲಿ ಇಷ್ಟೆಲ್ಲಾ ಶಾಸಕರು ರಾಜೀನಾಮೆ ನೀಡಿದ್ರೂ ಸಿಎಂ ಕುಮಾರಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡ್ತಿಲ್ಲ. ಎಲ್ಲಾ ಅತೃಪ್ತ ಶಾಸಕರು ಸರ್ಕಾರದ ಬಗ್ಗೆ ಬೇಸರಗೊಂಡು ರಾಜೀನಾಮೆ ನೀಡಿದ್ದಾರೆ. ಇನ್ನಾದರೂ ಸಿಎಂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಸಂಸದ ಶ್ರೀನಿವಾಸ್ ಪ್ರಸಾದ್ ಹೇಳಿದರು.
![ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ನೀಡಲಿ: ಸಂಸದ ಶ್ರೀನಿವಾಸ ಪ್ರಸಾದ್](https://etvbharatimages.akamaized.net/etvbharat/prod-images/768-512-3810394-thumbnail-3x2-sanju.jpg)
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದಲ್ಲಿ ಇಷ್ಟೆಲ್ಲಾ ಶಾಸಕರು ರಾಜೀನಾಮೆ ನೀಡುದ್ರೂ ಸಿಎಂ ಕುಮಾರಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡ್ತಿಲ್ಲ. ಎಲ್ಲಾ ಅತೃಪ್ತ ಶಾಸಕರು ಸರ್ಕಾರದ ಬಗ್ಗೆ ಬೇಸರಗೊಂಡು ರಾಜೀನಾಮೆ ನೀಡಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಮಾನ ಏನಿದೆ ನೋಡಬೇಕು. ಯಾವುದೇ ಕಾರಣಕ್ಕೂ ಶಾಸಕರನ್ನು ಅನರ್ಹ ಮಾಡೋ ಹಾಗಿಲ್ಲ. 8-9 ಶಾಸಕರ ರಾಜೀನಾಮೆ ಕ್ರಮಬದ್ಧವಾಗಿ ಇಲ್ಲ ಅಂತ ಹೇಳ್ತಾ ಇದ್ದಾರೆ. ಸ್ಪೀಕರ್ ಏನು ಕ್ರಮ ಕೈಗೊಳ್ತಾರೆ ನೋಡಬೇಕು. ಅತೃಪ್ತ ಶಾಸಕರು ಏನು ನಿರ್ಣಯ ಕೈಗೊಳ್ತಾರೋ ನಮಗೇನು ಗೊತ್ತು. ಅವರ ನಿರ್ಣಯದ ಮೇಲೆ ತೀರ್ಮಾನ ಆಗಲಿದೆ. ಕಾದು ನೋಡಬೇಕು ಎಂದರು.
TAGGED:
Devanahalli