ಬೆಂಗಳೂರು: ರಾಜ್ಯದಲ್ಲಿ ರೈತರ ಸ್ಥಿತಿ ಚಿಂತಾಜನಕವಾಗಿದೆ. ಲಾಕ್ಡೌನ್ ಪರಿಣಾಮ ರೈತರ ಉತ್ಪನ್ನಗಳಿಗೆ ಮಾರುಕಟ್ಟೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರೈತರಿಗೆ ಔದಾರ್ಯ ತೋರುವ ಬದಲು ಸಂಕಷ್ಟದಿಂದ ಅವರನ್ನು ರಕ್ಷಣೆ ಮಾಡಿ ಎಂದು ಹಸಿರು ಸೇನೆಯ ಅಧ್ಯಕ್ಷ, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಮನವಿ ಮಾಡಿದ್ದಾರೆ.
ಸಿಎಂ ರೈತರಿಗೆ ಔದಾರ್ಯದ ತೋರುವುದು ಬೇಡ, ರಕ್ಷಣೆ ಮಾಡಲಿ: ಕೋಡಿಹಳ್ಳಿ ಚಂದ್ರಶೇಖರ್ - Farmer leader Kodihalli Chandrasekhar
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರೈತರಿಗೆ ಔದಾರ್ಯ ತೋರುವ ಬದಲು ಸಂಕಷ್ಟದಿಂದ ಅವರನ್ನು ರಕ್ಷಣೆ ಮಾಡಿ ಎಂದು ಹಸಿರು ಸೇನೆಯ ಅಧ್ಯಕ್ಷ, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಮನವಿ ಮಾಡಿದ್ದಾರೆ.
ಸಿಎಂ ರೈತರಿಗೆ ಯಾವುದೇ ನಿಬಂಧನೆ ಇಲ್ಲ ಎಂದು ಹೇಳಿದ್ರೂ ಇದು ಕೇವಲ ತುಪ್ಪ ಸವರುವ ಕೆಲಸ ಆಗಬಾರದು. ಸಿಎಂ ಆವರ್ತ ನಿಧಿ ಎಷ್ಟು ತೆಗೆದಿಟ್ಟುಕೊಂಡೊದ್ದೀರಿ. ರೈತರ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನೀಡಿ ಖರೀದಿಸಲು ಸರ್ಕಾರ ಸಮರ್ಥವಾಗಿದೆಯೇ? ಈ ಕಾರ್ಯಕ್ರಮ ಜಾರಿಗೆ ತರಲು ಯಾವ ಸಿದ್ಧತೆ ನಡೆದಿದೆ. ಇದ್ಯಾವುದೇ ಸಿದ್ಧತೆ ಇಲ್ಲದೆ ಘೋಷಣೆ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ರೇಷ್ಮೆ, ಹೂವಿನ ಮಾರುಕಟ್ಟೆ, ತೆಂಗಿನಕಾಯಿ ಮಾರುಕಟ್ಟೆಗಳೂ ಮುಚ್ಚಿವೆ. ರೈತ ಬಂದು ಯಾವ ರೀತಿ ಮಾರುಕಟ್ಟೆಗೆ ತನ್ನ ಉತ್ಪನ್ನ ನೀಡಬೇಕು? ಶುಂಠಿ ಕೀಳಲಾಗದೆ, ಅನಾನಸ್ ಕಟಾವು ಮಾಡಲಾಗದೆ. ಮೆಕ್ಕೆಜೋಳಕ್ಕೆ ಮಾರುಕಟ್ಟೆ ಇಲ್ಲದೆ ಬೆಳೆಗಾರ ಈಗಾಗಲೇ ಆತ್ಮಹತ್ಯೆಗೂ ಮುಂದಾಗಿದ್ದಾನೆ. ಪರಿಸ್ಥಿತಿ ಕೈ ಮೀರುವ ಮೊದಲು ಸರ್ಕಾರ ಎಚ್ಚೆತ್ತುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.