ಬೆಂಗಳೂರು: ಆತ್ಮಹತ್ಯೆಗೆ ಯತ್ನಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಸದ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಆದರೆ ಪೊಲೀಸರಿಗೆ ಆತ್ಮಹತ್ಯೆ ಯತ್ನ ಪ್ರಕರಣ ಒಂದು ದೊಡ್ಡ ಚಾಲೆಂಜ್ ಆಗಿದೆ. ಪೊಲೀಸರ ಮುಂದೆ ದೊಡ್ಡ ಸವಾಲುಗಳೇ ಎದುರಾಗಿವೆ.
ಸದಾಶಿವ ನಗರ ಪೊಲೀಸರು ಈಗಾಗಲೇ ಸಂತೋಷ್ ಪತ್ನಿ ಹೇಳಿಕೆಯನ್ನು ಪಡೆದಿದ್ದಾರೆ. ಇವರ ಹೇಳಿಕೆ ಹಾಗೂ ಸಂತೋಷ್ ಮಾಧ್ಯಮದವರ ಎದುರು ನೀಡಿರುವ ಹೇಳಿಕೆಯು ಗೊಂದಲದಿಂದ ಕೂಡಿದ್ದು, ಪೊಲೀಸರು ನಿಜಾಂಶ ಪತ್ತೆಹಚ್ಚಬೇಕಿದೆ.
ಘಟನೆ ನಡೆದ ಬಳಿಕ ಸಂತೋಷ್ ಪತ್ನಿ ಜಾಹ್ನವಿ ತನ್ನ ಪತಿ ಪ್ರತಿ ದಿನ ಒಂದು ನಿದ್ದೆ ಮಾತ್ರೆ ತೆಗೆದುಕೊಳ್ಳುವುದಾಗಿ ಹೇಳಿದ್ದರು. ಅದರೆ ಘಟನೆ ನಡೆದ ದಿನ ತನಗೆ ಅನುಮಾನ, ಭಯ ಅಗಿತ್ತು. ಅವರಿಗೆ ಕೆಲಸದಲ್ಲಿ ಸ್ವಲ್ಪ ಪೊಲಿಟಿಕಲ್ ಇಂಬ್ಯಾಲೆನ್ಸ್ ಆಗಿತ್ತು. ನನಗೆ ಆಗುತ್ತಿಲ್ಲಾ ಎಂದು ಹೇಳಿಕೊಂಡು ಕಣ್ಣೀರು ಹಾಕಿದ್ದರು ಎಂದು ಪೊಲೀಸರ ಎದುರು ಹಾಗೂ ಮಾಧ್ಯಮದ ಎದುರು ಹೇಳಿದ್ದರು.