ಕರ್ನಾಟಕ

karnataka

ETV Bharat / state

ಯೋಧ ಮುನಿಯಪ್ಪನ್ ಪತ್ನಿ ಮನವಿಗೆ ಸಿಎಂ ಸ್ಪಂದನೆ: 24 ವರ್ಷಗಳ ಬಳಿಕ ಉಚಿತ ನಿವೇಶನ ಮಂಜೂರು - ಮುನಿಯಪ್ಪನ್ ಪತ್ನಿ ಮನವಿಗೆ ಸಿಎಂ ಸ್ಪಂದನೆ

ಮುನಿಯಪ್ಪನ್ ಅವರ ಪತ್ನಿ ಉಚಿತ ನಿವೇಶನ ಮಂಜೂರಾಗದ ಕುರಿತು ಬರೆದಿದ್ದ ಪತ್ರಕ್ಕೆ ಪ್ರತಿಯಾಗಿ ಪತ್ರ ಬರೆದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉಚಿತ ನಿವೇಶನ ಹಂಚಿಕೆಯಾಗಿರುವ ಮಾಹಿತಿ ನೀಡಿ ನಿವೇಶನ ಮಂಜೂರಾತಿ ಪತ್ರವನ್ನೂ ಕಳಿಸಿಕೊಟ್ಟಿದ್ದಾರೆ‌.

cm-responds-to-the-request-of-the-wife-of-sepoy-muniyappan
ವೀರಮರಣ ಹೊಂದಿದ್ದ ಸಿಪಾಯಿ ಮುನಿಯಪ್ಪನ್ ಪತ್ನಿ ಮನವಿಗೆ ಸಿಎಂ ಸ್ಪಂದನೆ

By

Published : Apr 9, 2020, 12:23 PM IST

ಬೆಂಗಳೂರು: ನಾಗಾಲ್ಯಾಂಡ್‌ನಲ್ಲಿ ಭಯೋತ್ಪಾದಕರ ವಿರುದ್ಧದ ಹೋರಾಟದಲ್ಲಿ ವೀರಮರಣವನ್ನಪ್ಪಿದ್ದ ಯೋಧ ಎ. ಮುನಿಯಪ್ಪನ್ ಕುಟುಂಬಕ್ಕೆ ಸಿಗಬೇಕಾಗಿದ್ದ ಉಚಿತ ನಿವೇಶನ ಸುದೀರ್ಘ 24 ವರ್ಷಗಳ ನಂತರ ಸಿಕ್ಕಿದೆ.

ಉಚಿತ ನಿವೇಶನ ಮಂಜೂರಾತಿ ಪತ್ರ
ಸೈನಿಕ ಕಲ್ಯಾಣ ಇಲಾಖೆಯ ಶಿಫಾರಸಿನ ಮೇಲೆ ನಿಮಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ 30*40 ಅಳತೆಯ ನಿವೇಶನ ಹಂಚಿಕೆಯಾಗಿದೆ ಎಂದು ತಿಳಿಸಲು ಸಂತೋಷಪಡುತ್ತೇನೆ. ತಮ್ಮ ಪತಿ ಸಿಪಾಯಿ ಎ.ಮುನಿಯಪ್ಪನ್ ಅವರು ನಾಗಾಲ್ಯಾಂಡಿನಲ್ಲಿ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯಲ್ಲಿ 24 ವರ್ಷಗಳ ಹಿಂದೆಯೇ ಮೃತಪಟ್ಟಿದ್ದು, ತಾವು ಕೂಡ ಈಗ ತೀವ್ರ ಅನಾರೋಗ್ಯ ಪೀಡಿತರಾಗಿರುವ ವಿಷಯ ತಿಳಿದು ಅತ್ಯಂತ ದುಃಖವಾಯಿತು. ಭಗವಂತನು ನಿಮಗೆ ಆಯುರಾರೋಗ್ಯ ನೀಡಿ ರಕ್ಷಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿ ಶುಭ ಹಾರೈಸಿದ್ದಾರೆ.

ABOUT THE AUTHOR

...view details