ಕರ್ನಾಟಕ

karnataka

ETV Bharat / state

ಕ್ಯಾನ್ಸರ್​​ ರೋಗಿ ಸಂಬಂಧಿಯ ಪತ್ರಕ್ಕೆ ಸ್ಪಂದಿಸಿದ ಸಿಎಂ: ನಾಳೆಯೇ ಶಸ್ತ್ರಚಿಕಿತ್ಸೆ ನಡೆಸುವಂತೆ ಆದೇಶ - ಕ್ಯಾನ್ಸರ್‌ ರೋಗಿ ಸಂಬಂಧಿ ಪತ್ರಕ್ಕೆ ಸ್ಪಂದಿಸಿದ ಸಿಎಂ

ಲಾಕ್​​ಡೌನ್​ನಿಂದಾಗಿ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ಮುಂದೂಡಿಕೆ ಮಾಡಿದ್ದು, ರೋಗಿಗೆ ತೀವ್ರ ಸಮಸ್ಯೆಯಾಗಿದೆ. ಹಾಗಾಗಿ ಸಹಾಯ ಮಾಡಿ ಎಂದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕು ಶಿರಗೂರ ಗ್ರಾಮದ ನಿವಾಸಿ ಬಾಹುಸಾಬ ಲಕ್ಷ್ಮಣ್ ಕಾಂಬಳೆ ಎನ್ನುವವರು ಸಿಎಂಗೆ ಪತ್ರ ಬರೆದಿದ್ದರು. ಪತ್ರಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಂದಿಸಿದ್ದು, ನಾಳೆಯೇ ಶಸ್ತ್ರಚಿಕಿತ್ಸೆ ನಡೆಸುವಂತೆ ಸೂಚನೆ ನೀಡಿದ್ದಾರೆ.

CM responding to cancer patient letter
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

By

Published : Apr 12, 2020, 8:52 PM IST

ಬೆಂಗಳೂರು: ಲಾಕ್​​ಡೌನ್​ನಿಂದಾಗಿ ಪೂರ್ವ ನಿಗದಿಯಾಗಿದ್ದ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ಮುಂದೂಡಿಕೆಯಾಗಿದ್ದು, ರೋಗಿಗೆ ತೀವ್ರ ಸಮಸ್ಯೆಯಾಗಿದೆ. ಹಾಗಾಗಿ ಸಹಾಯ ಮಾಡಿ ಎಂದು ಬೆಳಗಾವಿಯ ವ್ಯಕ್ತಿಯೊಬ್ಬರು ಬರೆದ ಪತ್ರಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಂದಿಸಿದ್ದಾರೆ. ಅಲ್ಲದೇ ನಾಳೆಯೇ ಆಪರೇಷನ್​ಗೆ ವ್ಯವಸ್ಥೆ ಮಾಡುವಂತೆ ಆದೇಶ ನೀಡಿ ಮಾನವೀಯತೆ ಮೆರೆದಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕು ಶಿರಗೂರ ಗ್ರಾಮದ ನಿವಾಸಿ ಬಾಹುಸಾಬ ಲಕ್ಷ್ಮಣ್ ಕಾಂಬಳೆ ಎನ್ನುವವರು ಸಿಎಂಗೆ ಪತ್ರ ಬರೆದಿದ್ದು, ನನ್ನ ಮನೆಯ ಹಿರಿಯರೊಬ್ಬರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ತಿಂಗಳ ಹಿಂದೆ ಅವರನ್ನು ಕರ್ನಾಟಕ ಕ್ಯಾನ್ಸರ್ ಹಾಸ್ಪಿಟಲ್ ಹುಬ್ಬಳ್ಳಿ (ನವನಗರ) ಇಲ್ಲಿಗೆ ದಾಖಲಿಸಿದ್ದೆವು. ನಾಲ್ಕು ದಿನದಲ್ಲಿ ಆಪರೇಷನ್ ಮಾಡಲು ಸೂಕ್ತ ಕ್ರಮಗಳನ್ನು ವೈದ್ಯರು ತೆಗೆದುಕೊಂಡಿದ್ದರು. ಆದರೆ ಕೊರೊನಾ ಸೋಂಕು ದೇಶಾದ್ಯಂತ ಹರಡುವ ಭೀತಿ ಹಿನ್ನೆಲೆ ಕೇಂದ್ರ ಸರ್ಕಾರ ಲಾಕ್​​ಡೌನ್ ಘೋಷಣೆ ಮಾಡಿತು. ಲಾಕ್​​ಡೌನ್ ಘೋಷಣೆಯಾದ ಮೇಲೆ ಆಸ್ಪತ್ರೆಯನ್ನು ಮುಚ್ಚಿ ಲಾಕ್​​ಡೌನ್ ತೆರವುಗೊಳಿಸುವವರೆಗೆ ಆಪರೇಷನ್ ಮಾಡುವುದಿಲ್ಲವೆಂದು ಮನೆಗೆ ಕಳುಹಿಸಿದ್ದಾರೆ. ಆದರೆ ಕ್ಯಾನ್ಸರ್ ಅನ್ನನಾಳಕ್ಕೆ ಆಗಿರುವುದರಿಂದ ಅವರು ಎರಡು ತಿಂಗಳಿಂದ ಆಹಾರ, ನೀರು ಸೇವಿಸದೆ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಅವರಿಗೆ ಶೀಘ್ರದಲ್ಲೇ ಆಪರೇಷನ್ ಮಾಡಬೇಕಿರುವುದರಿಂದ ದಯವಿಟ್ಟು ಕರ್ನಾಟಕ ಕ್ಯಾನ್ಸರ್ ಹಾಸ್ಪಿಟಲ್ ಹುಬ್ಬಳ್ಳಿ ಆಸ್ಪತ್ರೆಯನ್ನು ಓಪನ್ ಮಾಡಿಸಿ ದಯವಿಟ್ಟು ಆಪರೇಷನ್ ಮಾಡಲು ಸೂಚಿಸಬೇಕು ಎಂದು ಮನವಿ ಮಾಡಿದ್ದರು.

ಬಾಬುಸಾಬ್ ಲಕ್ಷ್ಮಣ್ ಕಾಂಬಳೆಯವರ ಮನವಿ ಆಧರಿಸಿ ಧಾರವಾಡ ಜಿಲ್ಲಾ ಆರೋಗ್ಯಾಧಿಕಾರಿ ಜೊತೆ ಮಾತನಾಡಿ ಶೀಘ್ರವೇ ಆಪರೇಷನ್​ಗೆ ವ್ಯವಸ್ಥೆ ಮಾಡಲು ಸಿಎಂ ಬಿ.ಎಸ್.ಯಡಿಯೂರಪ್ಪ ಆದೇಶಿಸಿದ್ದಾರೆ. ಧಾರವಾಡ ಡಿಹೆಚ್ಒ ಮುಖ್ಯಮಂತ್ರಿಗಳ ಅದೇಶದಂತೆ ನಾಳೆ ಹುಬ್ಬಳ್ಳಿಯ ಕರ್ನಾಟಕ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಆಪರೇಷನ್​​ಗೆ ವ್ಯವಸ್ಥೆ ಮಾಡಿದ್ದಾರೆ.

ABOUT THE AUTHOR

...view details