ಬೆಂಗಳೂರು: ಲಾಕ್ಡೌನ್ ಹಿನ್ನೆಲೆ ಸಿಎಂ ಗೃಹ ಕಚೇರಿ ಕೃಷ್ಣಾ ಹಾಗೂ ಅಧಿಕೃತ ನಿವಾಸ ಕಾವೇರಿಯಲ್ಲಿ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿದ್ದು, ಲಾಕ್ಡೌನ್ ಸ್ಥಿತಿಗತಿ ಕುರಿತು ನಿವಾಸದಿಂದಲೇ ಸಿಎಂ ಬಿ.ಎಸ್.ಯಡಿಯೂರಪ್ಪ ಮಾಹಿತಿ ಪಡೆದುಕೊಂಡರು.
ಬೆಳಗ್ಗೆಯಿಂದ ನಿವಾಸದಲ್ಲಿಯೇ ಇರುವ ಸಿಎಂ ಎಂದಿನಂತೆ ವಾಯು ವಿಹಾರ ನಡೆಸಿ ಉಪಹಾರ ಸೇವಿಸಿದರು. ನಂತರ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯ ಲಾಕ್ಡೌನ್ ಸ್ಥಿತಿಗತಿ ಕುರಿತು ಅವಲೋಕನ ಮಾಡಿದರು. ಯಾರನ್ನೂ ನೇರವಾಗಿ ಭೇಟಿಯಾಗದೆ ಎಲ್ಲವನ್ನೂ ದೂರವಾಣಿ ಮೂಲಕವೇ ಸಿಎಂ ನಿರ್ವಹಣೆ ಮಾಡುತ್ತಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾ ಹಾಗೂ ಅಧಿಕೃತ ನಿವಾಸ ಕಾವೇರಿಯಲ್ಲಿ ಚಟುವಟಿಕೆಗಳು ಸಂಪೂರ್ಣ ಸ್ಥಗಿತ ಮೊದಲು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಂದ ನಗರದಲ್ಲಿನ ಭದ್ರತೆ ಕುರಿತು ಸಿಎಂ ಸಮಗ್ರವಾದ ಮಾಹಿತಿ ಪಡೆದುಕೊಂಡರು. ಎಲ್ಲೆಲ್ಲಿ ಯಾವ ರೀತಿ ಭದ್ರತೆ ಕಲ್ಪಿಸಲಾಗಿದೆ ಎನ್ನುವ ವಿವರವನ್ನು ಪಡೆದುಕೊಂಡರು. ಒಂದು ವಾರ ಭದ್ರತಾ ಲೋಪವಾಗದಂತೆ ಬಹಳ ಎಚ್ಚರಿಕೆ ವಹಿಸುವಂತೆ ಸಿಎಂ ಸೂಚನೆ ನೀಡಿದರು ಎನ್ನಲಾಗಿದೆ.
ನಂತರ ವಲಯವಾರು ಉಸ್ತುವಾರಿಗಳಿಂದಲೂ ಸಿಎಂ ಅಗತ್ಯ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಲಾಕ್ಡೌನ್ ವೇಳೆ ಅಗತ್ಯ ವಸ್ತುಗಳ ಕೊರತೆಯಾಗದಂತೆ ನೋಡಿಕೊಳ್ಳುವ ಜೊತೆಗೆ ಇನ್ನೂ ಕಠಿಣವಾಗಿರಲಿ. ಆದರೆ ಜನತೆಗೆ ಭಾರವಾಗಬಾರದು ಎನ್ನುವ ಸಲಹೆ ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಸಿಎಂ ಗೃಹ ಕಚೇರಿ ಕೃಷ್ಣಾ ಹಾಗು ಅಧಿಕೃತ ನಿವಾಸ ಕಾವೇರಿಯಲ್ಲಿ ಚಟುವಟಿಕೆಗಳು ಸಂಪೂರ್ಣ ಸ್ಥಗಿತ ಇನ್ನುಳಿದಂತೆ ಸಿಎಂ ಗೃಹ ಕಚೇರಿ ಕೃಷ್ಣಾ ಯಾವುದೇ ಚಟುವಟಿಕೆ ಇಲ್ಲದೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಯಾವುದೇ ಸಭೆಗಳನ್ನು ಆಯೋಜನೆ ಮಾಡಿಲ್ಲ, ಯಾವ ಅತಿಥಿಗಳಿಗೂ ಸಿಎಂ ಭೇಟಿಗೆ ಅನುಮತಿ ನೀಡಿಲ್ಲ. ಸಿಎಂ ನಿವಾಸ ಹಾಗೂ ಕಚೇರಿಯಲ್ಲಿಯೂ ಲಾಕ್ಡೌನ್ ವಾತಾವರಣವೇ ನಿರ್ಮಾಣವಾಗಿದೆ.