ಬೆಂಗಳೂರು: ಲಾಕ್ಡೌನ್ ನಿಂದಾಗಿ ಸಂಕಷ್ಟದಲ್ಲಿರುವ ಆಟೋ, ಟ್ಯಾಕ್ಸಿ ಚಾಲಕರಿಗೆ ಪರಿಹಾರ ಧನವನ್ನು ರಾಜ್ಯ ಸರ್ಕಾರ ಘೋಷಿಸಿದೆ. ಸದ್ಯ ನೇರವಾಗಿ ಖಾತೆಗೆ ಪರಿಹಾರದ ಹಣ ಬರಲಿದೆ ಎಂದು ಆಟೋ, ಟ್ಯಾಕ್ಸಿ ಚಾಲಕರಿಗೆ ಸಿಹಿ ಸುದ್ದಿಯೊಂದನ್ನ ಸಾರಿಗೆ ಇಲಾಖೆ ನೀಡಿದೆ. ಈ ಮೂಲಕ ಆಟೋ, ಟ್ಯಾಕ್ಸಿ ಚಾಲಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಇದೇ ವೇಳೆ ಇಲಾಖೆ ಸ್ಪಷ್ಟನೆ ನೀಡಿದೆ.
ನೇರವಾಗಿ ಖಾತೆಗೆ ಬರಲಿದೆ ಹಣ: ಆಟೋ - ಟ್ಯಾಕ್ಸಿ ಚಾಲಕರಿಗೆ ಸಿಹಿ ಸುದ್ದಿ - CM Relief fund for Auto drivers
ರಾಜ್ಯ ಸರ್ಕಾರ ಟ್ಯಾಕ್ಸಿ ಮತ್ತು ಆಟೋ ಚಾಲಕರಿಗಾಗಿ ವಿಶೇಷ ಪ್ಯಾಕೇಜ್ನಲ್ಲಿ 5000ರೂ ಗಳನ್ನು ಘೋಷಣೆ ಮಾಡಿದ್ದು, ಈ ಹಣವನ್ನು ಆಟೋ, ಟ್ಯಾಕ್ಸಿ ಚಾಲಕರ ಖಾತೆಗೆ ನೇರವಾಗಿ ಹಾಕಲಾಗುವುದು ಎಂದು ಸಾರಿಗೆ ಇಲಾಖೆ ಸ್ಪಷ್ಟನೆ ನೀಡಿದೆ.
ಪರಿಹಾರ ಹಣಕ್ಕಾಗಿ ಹಲವರು, ಪೋಸ್ಟ್ ಆಫೀಸ್ಗಳ ಎದುರಿಗೆ ಕ್ಯೂನಲ್ಲಿ ನಿಂತು ಅರ್ಜಿಗಳನ್ನು ಕಳುಹಿಸಲು ಪ್ರಯತ್ನಿಸುತ್ತಿರುವುದು ಹಾಗೂ ಆನ್ಲೈನ್ ಅರ್ಜಿ ಹೆಸರಿನಲ್ಲಿ ವಂಚನೆಗೆ ಒಳಗಾಗುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದ್ದ ರಿಂದ ಇಲಾಖೆಯೇ ಪರಿಹಾರ ಧನ ನೀಡಲು ಅರ್ಜಿಗಳನ್ನ ಆನ್ಲೈನ್ನಲ್ಲಿ ಸೇವಾಸಿಂಧು ಮೂಲಕ ಸ್ವೀಕರಿಸುವ ವ್ಯವಸ್ಥೆ ಮಾಡಿದೆ.
ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಸರ್ಕಾರ 5000 ಪರಿಹಾರ ಘೋಷಣೆ ಮಾಡಿದ್ದು, ಪರಿಹಾರದ ಹಣವನ್ನು ಅವರವರ ಖಾತೆಗೆ ಹಾಕಲಾಗುತ್ತದೆ ಎಂದು ಸಾರಿಗೆ ಇಲಾಖೆ ಆಯುಕ್ತರಿಂದ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ.